ಕೇಂದ್ರದಿಂದ ಸರ್ವರ್‌ ಹ್ಯಾಕ್‌ ಹೇಳಿಕೆ: ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಯತ್ನಾಳ್ ಆಗ್ರಹ

 ರಾಜ್ಯದ ಯೋಜನೆಗಳಿಗೆ ಅಡ್ಡಿಯುಂಟು ಮಾಡಲು ಕೇಂದ್ರ ಸರ್ಕಾರ ಗೃಹಲಕ್ಷ್ಮೀ ಯೋಜನೆಯ ಆ್ಯಪ್‌'ನ್ನು ಹ್ಯಾಕ್ ಮಾಡಿದೆ ಎಂಬ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

                               ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್

Posted By : Rekha.M
Source : Online Desk

ಬೆಂಗಳೂರು: ರಾಜ್ಯದ ಯೋಜನೆಗಳಿಗೆ ಅಡ್ಡಿಯುಂಟು ಮಾಡಲು ಕೇಂದ್ರ ಸರ್ಕಾರ ಗೃಹಲಕ್ಷ್ಮೀ ಯೋಜನೆಯ ಆ್ಯಪ್‌'ನ್ನು ಹ್ಯಾಕ್ ಮಾಡಿದೆ ಎಂಬ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಯತ್ನಾಳ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆನ್ನೆ "ನಕಲಿ ಸುದ್ದಿ" ಹರಡಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ. ಇವರ ಮಂತ್ರಿ ಮಂಡಲದ ಮಂತ್ರಿ "ರಾಜ್ಯ ಸರ್ಕಾರದ ಸರ್ವರ್ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ" ಎಂದು ಹೇಳಿರುವುದು "ನಕಲಿ ಸುದ್ದಿ". ಇವರ ವಿರುದ್ಧ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವೇ, ಆರೋಪವನ್ನು ಸಾಬೀತುಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಗ್ಯಾರಂಟಿ ಯೋಜನೆಗಳ ಕುರಿತು ಕಿಡಿಕಾರಿರುವ ಅವರು, ಪೊಳ್ಳು ಭರವಸೆಗಳನ್ನು ನೀಡಿ, ಈಡೇರಿಸಲಾಗದೆ ಈಗ ದಿನಕ್ಕೊಂದು ನೆಪ, ಹೊಸ ಕಥೆ ಹೇಳುವುದು ಕರ್ನಾಟಕ ಸರ್ಕಾರಕ್ಕೆ ರೂಢಿಯಾಗಿದೆ ಎಂದು ಹೇಳಿದ್ದಾರೆ.


Post a Comment

Previous Post Next Post