ಶಿವಮೊಗ್ಗ: ಹೊಸಸಿದ್ದಾಪುರ ಗ್ರಾಮದ 02 ಮನೆಗಳ ಬೀಗ ಮುರಿದು ಆಭರಣ ಮತ್ತು ನಗದು ಕಳವು; ತನಿಖೆ ನಡೆಸಿ ಕದ್ದ ಆಭರಣವನ್ನು ವಶಪಡಿಸಿಕೊಂಡ ಪೊಲೀಸ್ ತನಿಖಾ ತಂಡ.

  ದಿನಾಂಕ 30-05-2023 ರಂದು ಭದ್ರವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದಲ್ಲಿನ 02 ವಾಸದ ಮನೆಗಳ ಬೀಗವನ್ನು ಮುರಿದು ಮನೆಯಲ್ಲಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರತ್ಯೇಖ 02 ಮನೆಗಳ್ಳತನ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿರುತ್ತದೆ.

ಸದರಿ ಪ್ರಕರಣದಲ್ಲಿ ಆರೋಪಿತರು ಹಾಗೂ ಕಳುವಿನ ಮಾಲಿನ  ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಜಿತೇಂದ್ರಕುಮಾರ್ ಅಯಾಮ ಐಪಿಎಸ್, ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಭದ್ರಾವತಿ ಉಪ ವಿಭಾಗ ರವರ ಮೇಲ್ವೀಚಾರಣೆ, ಶ್ರೀ ಶರಣಪ್ಪ ಪಿ.ಎಸ್. ಐ ಹಳೇನಗರ ಪೊಲೀಸ್ ಠಾಣೆ ರವರ ನೇತೃತ್ವದ ನ್ಯೂಟೌನ್ ಟಾಣೆಯ ಶ್ರೀ ವೆಂಕಟೇಶ್ ಎ.ಎಸ್. ಐ, ಶ್ರೀ ಮಂಜಪ್ಪ ಟಿ.ಪಿ, ಎ.ಎಸ್. ಐ ಮತ್ತು ಠಾಣಾ ಸಿಬ್ಬಂದಿಗಳಾದ ಸಿಪಿಸಿ ರಂಗನಾಥ್, ತೀರ್ಥಲಿಂಗಪ್ಪ, ಪ್ರವೀಣಕುಮಾರ್, ಸುನೀಲ್ ರವರುಗಳನ್ನೊಳಗೊಂವ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ದಿನಾಂಕ 06-06-2023 ರಂದು ಪ್ರಕರಣಗಳ ಆರೋಪಿಗಳಾದ 1) ಲೋಕೇಶ್,50 ವರ್ಷ, ಗಂಜಿಗೆರೆ ಗ್ರಾಮ, ಹೊಸದುರ್ಗ ತಾ.ಚಿತ್ರದುರ್ಗ ಜಿಲ್ಲೆ, 2) ರಂಗನಾಥ್, 45 ವರ್ಷ, ಗಂಜಿಗೆರೆ ಗ್ರಾಮ, ಹೊಸದುರ್ಗ ತಾ. ಚಿತ್ರದುರ್ಗ ಜಿಲ್ಲೆ ಮತ್ತು 3) ವಿಜಯ್, 33 ವರ್ಷ,  ಕೋಡಿನಾಗೇನಹಌ, ಗುಬ್ಬಿ ತಾಲೂಕು ತುಮಕೂರು ಜಿಲ್ಲೆ ರವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ 02 ಮನೆಗಳ್ಳತನ ಪ್ರಕರಣಗಳಿಗೆ ಸಂಬಂದಿಸಿದ ಅಂದಾಜು ಮೌಲ್ಯ 1.95.000/- ರೂ ಗಳ 39 ಗ್ರಾಂ ತೂಕದ ಬಂಗಾರ ಮತ್ತು 17 ಗ್ರಾಂ ತೂಕದ ಬೆಳಿಯ ಆಭರಣವನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.


Post a Comment

Previous Post Next Post