ಮಂಗಳೂರು: ಪಿಎಫ್ ಐ, ಸಿಎಫ್ ಐ ಸಂಘಟನೆಯ 12 ಕಚೇರಿಗಳಿಗೆ ಬೀಗ ಜಡಿದ ಪೊಲೀಸರು

 ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸುವುದರೊಂದಿಗೆ ಮಂಗಳೂರು ಒಂದರಲ್ಲಿಯೇ ಅದರ 12 ಕಚೇರಿಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ.

         ಸಾಂದರ್ಭಿಕ ಚಿತ್ರ

By : Rekha.M
Online Desk

ಮಂಗಳೂರು: ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸುವುದರೊಂದಿಗೆ ಮಂಗಳೂರು ಒಂದರಲ್ಲಿಯೇ ಅದರ 12 ಕಚೇರಿಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ.

ಬುಧವಾರ ಸಂಜೆಯಿಂದ ಪಿಎಫ್ ಐ ಸಂಘಟನೆಯ 10 ಕಚೇರಿಗಳು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ ಐ) ಮತ್ತು ಸಂಘಟನೆಯ ಮಾಹಿತಿ ಅಂಡ್ ಎಂಪವರ್ಮೆಂಟ್ ಕಚೇರಿಗಳನ್ನು ಬಂದ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ನಗರದ ಕಸಬಾ ಬೆಂಗರೆ, ಚೊಕ್ಕಬೆಟ್ಟು, ಕಾಟಿಪಳ್ಳ ಎರಡನೆ ಬ್ಲಾಕ್, ಅಡ್ಡೂರ್, ಕಿನ್ನಿಪದವು, ಕೆ.ಸಿ‌.ರೋಡ್, ಇನೋಳಿ, ಮಲ್ಲೂರು, ಕುದ್ರೋಳಿಯ ಪಿಎಫ್‌ಐ ಹಾಗೂ ನಗರದ   ರಾವ್ ಸರ್ಕಲ್ ಬಳಿಯ ಇನ್ಫೋರ್ಮೇಶನ್ ಆಯಂಡ್ ಎಂಪವರ್ಮೆಂಟ್ ಕಚೇರಿಗೆ ಬೀಗ ಜಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.    Post a Comment

    Previous Post Next Post