ಉದ್ಯಮಿ ಮುಖೇಶ್ ಅಂಬಾನಿಗೆ ‘Z+’ ಭದ್ರತೆ?

 ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಭದ್ರತೆಯನ್ನು ಗೃಹ ಸಚಿವಾಲಯ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ. ಮುಖೇಶ್ ಅಂಬಾನಿ ಅವರಿಗೆ ಬೆದರಿಕೆ ಇರುವ ಬಗ್ಗೆ ಗುಪ್ತಚರ ಸಂಸ್ಥೆ ವರದಿ ನೀಡಿದ ಆಧಾರದ ಮೇಲೆ ‘Z +’ ಭದ್ರತಾ ಶ್ರೇಣಿ ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

         ಮುಖೇಶ್ ಅಂಬಾನಿ

By : Rekha.M
Online Desk

ಮುಂಬೈ: ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಭದ್ರತೆಯನ್ನು ಗೃಹ ಸಚಿವಾಲಯ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ. ಮುಖೇಶ್ ಅಂಬಾನಿ ಅವರಿಗೆ ಬೆದರಿಕೆ ಇರುವ ಬಗ್ಗೆ ಗುಪ್ತಚರ ಸಂಸ್ಥೆ ವರದಿ ನೀಡಿದ ಆಧಾರದ ಮೇಲೆ ‘Z +’ ಭದ್ರತಾ ಶ್ರೇಣಿ ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರಿಗೆ ಈ ಹಿಂದೆ ‘Z ಕೆಟಗರಿ’ ಭದ್ರತೆಯನ್ನು ನೀಡಲಾಗಿತ್ತು. ಕಳೆದ ವರ್ಷ ಬಿಲಿಯನೇರ್ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾದಲ್ಲಿ ಬಾಂಬ್ ಭೀತಿಯ ನಂತರ, ಎಂಎಚ್‌ಎ ಕೈಗಾರಿಕೋದ್ಯಮಿಗಳ ಭದ್ರತೆಯನ್ನು ಬಲಪಡಿಸುವ ಬಗ್ಗೆ ಚರ್ಚೆ ನಡೆಸಿತ್ತು.

 ಭದ್ರತೆಯನ್ನು ಯಾರಿಗೆ, ಯಾವ ಸಮಯದಲ್ಲಿ ಒದಗಿಸಲಾಗುತ್ತದೆ: ಭಾರತದಲ್ಲಿ, ತಮ್ಮ ಕೆಲಸ ಅಥವಾ ಜನಪ್ರಿಯತೆಯ ಕಾರಣದಿಂದಾಗಿ ಅವರ ಜೀವನವು ಅಪಾಯದಲ್ಲಿದೆ ಎಂದು ಗುರುತಿಸಲ್ಪಟ್ಟ ವ್ಯಕ್ತಿಗಳಿಗೆ ಭದ್ರತಾ ರಕ್ಷಣೆಯನ್ನು ನೀಡಲಾಗುತ್ತದೆ.

ಇಂತಹ ಸಮಾಜವಿರೋಧಿ ಶಕ್ತಿಗಳಿಂದ ಅವರನ್ನು ರಕ್ಷಿಸುವ ಸಲುವಾಗಿ ಗುಪ್ತಚರ ಸಂಸ್ಥೆ ಒದಗಿಸಿದ ಮಾಹಿತಿಯ ಆಧಾರದ ಮೇಲೆ ವಿವಿಧ ರೀತಿಯ ಭದ್ರತೆಯನ್ನು ಒದಗಿಸಲಾಗುತ್ತದೆ. ಭದ್ರತಾ ವರ್ಗವನ್ನು X, Y, Z, Z+, SPG, ಎಂದು ಐದು ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರ ಜೊತೆಗೆ ಹೆಚ್ಚಿನ ಭದ್ರತಾ ವರ್ಗೀಕರಣಗಳು ಲಭ್ಯವಿದೆ.
 


Post a Comment

Previous Post Next Post