'ನಾನು ಸಂತೋಷವಾಗಿಲ್ಲ, ನನಗೆ ಶಾಂತಿ ಬೇಕು’: ಡೆತ್‌ನೋಟ್‌ ಬರೆದಿಟ್ಟು ರೂಪದರ್ಶಿ ಆತ್ಮಹತ್ಯೆ

 40 ವರ್ಷದ ಮಾಡೆಲ್ ಒಬ್ಬರು ಡೆತ್ ನೋಟ್ ಬರೆದಿಟ್ಟು ಐಷಾರಾಮಿ ಹೋಟೆಲ್ ನ ರೂಂ ಒಂದರಲ್ಲಿ ನೇಣಿಗೆ ಶರಣಾಗಿರುವ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ.

    ಸಾಂದರ್ಭಿಕ ಚಿತ್ರ

By : Rekha.M
Online Desk

ಮುಂಬಯಿ: 40 ವರ್ಷದ ಮಾಡೆಲ್ ಒಬ್ಬರು ಡೆತ್ ನೋಟ್ ಬರೆದಿಟ್ಟು ಐಷಾರಾಮಿ ಹೋಟೆಲ್ ನ ರೂಂ ಒಂದರಲ್ಲಿ ನೇಣಿಗೆ ಶರಣಾಗಿರುವ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ.

ಮಾಡೆಲ್ ಹೆಸರು ತಿಳಿದು ಬಂದಿಲ್ಲ ಆದರೆ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮಾಡೆಲ್ ಸೆಪ್ಟೆಂಬರ್ 28 ಬುಧವಾರ ಹೋಟೆಲ್‌ಗೆ ಚೆಕ್‌ ಇನ್ ಮಾಡಿದ್ದು ರಾತ್ರಿ ಊಟ ಆರ್ಡ್‌ರ್ ಮಾಡಿದ್ದಾರೆ.

ಗುರುವಾರ ಹೌಸ್‌ ಕೀಪಿಂಗ್ ಮಾಡುವವರು ಬಾಗಿಲು ತಟ್ಟಿದ್ದಾರೆ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಮ್ಯಾನೇಜರ್‌ಗೆ ತಿಳಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಬಾಗಿಲು ತೆಗೆಸಲಾಗಿತ್ತು.
ಹೊಟೇಲ್‌ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ರೂಪದರ್ಶಿ ಶವ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

‘ನನ್ನನ್ನು ಕ್ಷಮಿಸಿ, ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನು ಸಂತೋಷವಾಗಿಲ್ಲ. ನನಗೆ ಶಾಂತಿ ಬೇಕು’ ಎಂದು ಡೆತ್‌ನೋಟ್‌ನಲ್ಲಿ ರೂಪದರ್ಶಿ ಬರೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ವರ್ಸೋವಾ ಪೊಲೀಸರು ಎಡಿಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Post a Comment

Previous Post Next Post