ದೆಹಲಿ ಅಬಕಾರಿ ನೀತಿ ಹಗರಣ: ಉದ್ಯಮಿ ವಿಜಯ್ ನಾಯರ್ ರನ್ನು ಬಂಧಿಸಿದ ಸಿಬಿಐ!

 ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ್ ನಾಯರ್ ಅವರನ್ನು ಸಿಬಿಐ ಬಂಧಿಸಿದೆ. ಈ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಆರೋಪಿಯಾಗಿದ್ದಾರೆ.

            ಸಿಬಿಐ ಕಚೇರಿ

By : Rekha.M
Online Desk

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ್ ನಾಯರ್ ಅವರನ್ನು ಸಿಬಿಐ ಬಂಧಿಸಿದೆ. ಈ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಆರೋಪಿಯಾಗಿದ್ದಾರೆ. 

ಕೆಲಕಾಲ ವಿದೇಶದಲ್ಲಿದ್ದ ನಾಯರ್ ಅವರನ್ನು ಮಂಗಳವಾರ ಸಿಬಿಐ ಕಚೇರಿಗೆ ವಿಚಾರಣೆಗೆ ಕರೆದಿದ್ದು ಇದೀಗ ಅವರನ್ನು ಬಂಧಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ಪರವಾನಗಿ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ 'ಪಿತೂರಿ'ಯಲ್ಲಿ ಅವರ ಪಾತ್ರಕ್ಕಾಗಿ ನಾಯರ್ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಂಟರ್ಟೈನಮೆಂಟ್ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಾದ ಓನ್ಲಿ ಮಚ್ ಲೌಡರ್‌ನ ಮಾಜಿ ಸಿಇಒ ನಾಯರ್ ಪರವಾಗಿ ಸಿಸೋಡಿಯಾ ಅವರ ಸಹವರ್ತಿ ಅರ್ಜುನ್ ಪಾಂಡೆ ಒಮ್ಮೆ ಮದ್ಯದ ಉದ್ಯಮಿ ಸಮೀರ್ ಮಹೇಂದ್ರು ಅವರಿಂದ ಸುಮಾರು 2-4 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದರು ಎಂದು ಎಫ್‌ಐಆರ್ ಆರೋಪಿಸಿದೆ.
Post a Comment

Previous Post Next Post