ಉಸಿರು ಹೋದರೂ ಹೆಸರು ಉಳಿಯುವಂತೆ ಬದುಕೋಣ: ಶಾಸಕ ಯಶವಂತರಾಯಗೌಡ ಪಾಟೀಲ

 

By: Ashwini Rathod
Online desk 
 

ಇಂಡಿ:
 ಚುನಾವಣೆ ಕೇವಲ ೧ ತಿಂಗಳು ಮಾಡಿ ನಂತರದ ದಿನಗಳಲ್ಲಿ ಎಲ್ಲರೂ ಹಳ್ಳಿಗಳಲ್ಲಿ ಪ್ರೀತಿವಿಶ್ವಾಸದಿಂದ ಅಣ್ಣ ತಮ್ಮಂದಿರ೦ತೆ ಬದುಕಿ ಬಾಳಿ, ಭಗವಂತ ಎಷ್ಟು ದಿನ ಆಯುಷ್ಯ ನೀಡಿದ್ದಾನೆಯೋನಮಗೆ ಗೋತ್ತಿಲ್ಲ ಜೀವಿತ ಅವಧಿಯಲ್ಲಿ ಒಳ್ಳೇಯ ಕೆಲಸ ಕಾರ್ಯಗಳನ್ನು ಮಾಡಿ ಉಸಿರು ಹೋದರೂ

ಹೆಸರು ಉಳಿಯುವಂತೆ ಬದುಕೋಣ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಗ್ರಾಮಸ್ಥ ರಿಗೆ ಸಲಹೆ ನೀಡಿದರು.

ತಾಲೂಕಿನ ಲಾಳಸಂಗಿ ಗ್ರಾಮದಲ್ಲಿ ಲೋಕೋಯೋಗಿ ಇಲಾಖೆಯ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜ್ಯ ನೆರವೇರಿಸಿ ಮಾತನಾಡಿದ ಅವರು ಗ್ರಾಮಗಳ ಸರ್ವಾಂಗೀಣ ಪ್ರಗತಿ ಸಾಧಿಸಿದಾಗ ಮಾತ್ರ ದೇಶದ ಅಭಿವೃದ್ದಿಸಾಧ್ಯೆ ಎಂಬ ಮಹಾತ್ಮಾಗಾಂಧಿಜೀಯವರ ಕನಸಾಗಿತ್ತು ಗ್ರಾಮೀಣ ಭಾಗದ ಮೂಲಭೂತ ಸೌಲಭ್ಯಗಳಾದ ನೀರು,ರಸ್ತೆ, ವಿದ್ಯುತ, ಶಿಕ್ಷಣ ಇಡೇರಿಸುವಲ್ಲಿ ಸರಕಾರಗಳು ಪ್ರಮಾಣಿ ಪ್ರಯತ್ನ ಮಾಡಬೇಕು. ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಈ ಹಿಂದೆ ಸಣ್ಣಪುಟ್ಟ ಗ್ರಾಮಗಳಿಗೆ ಸ್ಥಳೀಯ ಪಂಚಾಯತಿಯಲ್ಲಿ ಅಧಿಕಾರದಿಂದ ವಂಚಿತರಾಗಿದ್ದರು ಇದನ್ನು ಅರಿತು ೭ ನೂತನ ಪಂಚಾಯತಿ ಮಂಜೂರಾತಿ ತಂದು ಅಧಿಕಾರ ವಂಚಿತ ಪ್ರದೇಶಕ್ಕೆ ಕಾಳಜಿ ಮಾಡಿದ್ದೇನೆ. ಈ ಭಾಗಕ್ಕೆ ಭೀಮಾ ತೀರ ಎಂಬ ಕೆಟ್ಟ ಹೆಸರು ಹೋಗಲಾಡಿಸು ಸಲುವಾಗಿ ಲಿಂಬೆ ಅಭಿವೃದ್ದಿ ಮಂಡಳಿಯನ್ನು ತಂದು ಲಿಂಬೆ ನಾಡು ಎಂಬ ಹೆಸರು ಪರಿವರ್ತನೆ ಮಾಡಲಾಗಿದೆ. ರೈತರು ಮಣ್ಣಿನ ಪರಿಕ್ಷೆ ಮಾಡಿಸಲು ಜಮ ಖಂಡಿ ಕೃಷಿ ವಿಜ್ಞಾನ ಕೇಂದ್ರ ಹೋಗಿ ಬರುವ ಪ್ರಮೇ ಇತ್ತು. ಆದರೆ ಕೃಷಿ ವಿಜ್ಞಾನ ಕೇಂದ್ರ ಇಂಡಿಯಲ್ಲಿ ಸ್ಥಾಪಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಸ್ಥಳೀಯ ಜಿ.ಪಂ ,ತಾ.ಪಂ , ಎ.ಪಿ.ಎಂ.ಸಿ ಇತರೆ ಎಲ್ಲಾ ಕ್ಷೇತ್ರಗಳಲ್ಲಿ ಅಧಿಕಾರ ಹಂಚಿಕೆ ಮಾಡಿ ಡಾ.ಅಂಬೇಡ್ಕರ, ಗಾಂಧಿಜಿಯವರ ಕಂಡ ಸಮಸಮಾಜ ನಿರ್ಮಾಣ ಮಾಡುವಲ್ಲಿ ಯಶಸ್ವೀಯಾಗಿದ್ದೇನೆ.

ಈ ಹಿಂದಿನ ರಾಜಕಾರಣಿಗಳು ತಮ್ಮ ಮನೆಯವರನ್ನು ಬಂಧು ಬಾಂಧವರನ್ನು ಅಧಿಕಾರಕ್ಕೆ ಕೂಡಿಸಿ ಸಂತೋಷ ಪಟ್ಟಿದ್ದಾರೆ ಆದರೆ ನನ್ನ ಮನೆಯ ಒಬ್ಬ ವ್ಯಕ್ತಿಗೂ ಕೂಡಾ ಅಧಿಕಾರ ನೀಡಿಲ್ಲ. ಇಡೀ ಮತಕೇತ್ರದ ಜನರು ನನ್ನ ಕುಟುಂಬದ ಸದಸ್ಯರೆಂದು ಭಾವಿಸಿದ್ದೇನೆ. ರಾಜಕಾರಣದಲ್ಲಿ ಬದ್ದತೆ ಇರಬೇಕು ,ನೀತಿ ,ನ್ಯಾಯ ಸರ್ವ ಸಮುದಾಯವನ್ನು ಯಾರು ಕಾಳಜಿ ಮಾಡಿದ್ದಾರೆ. ಅಭಿವೃದ್ದಿ ಯಾವ ದಶೇಯತ್ತ ಸಾಗಿಸಿದ್ದಾರೆ ಎಂಬುದನ್ನು ಅರಿತು ಮುಂಬರುವ ಚುನಾವಣೆಯಲ್ಲಿ ಆಯ್ಕೆ ಮಾಡಿ, ಮಾರ್ಚ್ದಲ್ಲಿ ಮತಕೇತ್ರದ ಪ್ರತಿ ಮನೆ ಮನೆಗೆ ಬರುತ್ತೇನೆ, ನಾನು ದುಡಿದಿರುವುದು ಸತ್ಯ ಎಂದಾದರೆ ಪಗಾರ ಕೊಡಿ ಕೇಳುವ ನೈತಿಕತೆ ನನಗಿದೆ ಸತ್ಯದ ಪರವಾಗಿ ಇರಬೇಕು ಎಂದರು.

ಗ್ರಾಮದ ಜನತೆಯ ಬಹುದಿನಗಳ ಬೇಡಿಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾತಿ ಒದಗಿಸಲು ಬಹುಸಂಖ್ಯಾತ ಜನರ ಬೇಡಿಕೆ ಆದರೆ ರಾಜ್ಯ ಸರಕಾರದ ಮಟ್ಟದಲ್ಲಿ ನೂತನ ಮಂಜೂರಾತಿ ಕೂಡುವ ನಿರ್ಧಾರ ಮಾಡಿದರೆ ಪ್ರಥಮ ಪ್ರಾಥಮಿಕ ಆರೋಗ್ಯ ಕೇಂದ್ರ ಲಾಳಸಂಗಿ ಗ್ರಾಮಕ್ಕೆ ಮಂಜೂ ರಾತಿ ತರುತ್ತೇನೆ. ಗ್ರಾಮಕ್ಕೆ ಸರಕಾರಿ ಪ್ರೌಢ ಶಾಲೆ ಮಂಜೂರಾತಿ ತರಲು ಪ್ರಮಾಣಿ ಪ್ರಯತ್ನ ಮಾಡುತ್ತೇನೆ.

ಈ ಭಾಗದ ಜ್ವಲಂತ ಸಮಸ್ಯಗಳನ್ನು ಸದನದಲ್ಲಿ ಪ್ರಶ್ನಿಸುವ ಮೂಲಕ ಉತ್ತರ ಕರ್ನಾಟಕದಲ್ಲಿಯೇ ಅತೀ ಪ್ರಶ್ನೆ ಕೇಳಿದಂತ ಏಕೈಕ ಶಾಸಕನಾಗಿದ್ದೇನೆ. ಈ ಭಾಗದ ಹೃದಯವಂತ ಜನತೆ ನನಗೆ ೩೦ ವರ್ಷ ರಾಜಕೀಯ ಆರ್ಶೀವಾದ ಮಾಡಿರುವುದರಿಂದ ನಿಮ್ಮ ಘನತೆ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿ ದ್ದೇನೆ ಎಂದರು.

ಈ ಭಾಗದ ಜ್ವಲಂತ ಸಮಸ್ಯಗಳನ್ನು ಸದನದಲ್ಲಿ ಪ್ರಶ್ನಿಸುವ ಮೂಲಕ ಉತ್ತರ ಕರ್ನಾಟಕದಲ್ಲಿಯೇ ಅತೀ ಪ್ರಶ್ನೆ ಕೇಳಿದಂತ ಏಕೈಕ ಶಾಸಕನಾಗಿದ್ದೇನೆ. ಈ ಭಾಗದ ಹೃದಯವಂತ ಜನತೆ ನನಗೆ ೩೦ ವರ್ಷ ರಾಜಕೀಯ ಆರ್ಶೀವಾದ ಮಾಡಿರುವುದರಿಂದ ನಿಮ್ಮ ಘನತೆ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿ ದ್ದೇನೆ ಎಂದರು.

ಎಂ.ಆರ್ ಪಾಟೀಲ, ಮಲ್ಲುಗೌಡ ಪಾಟೀಲ, ಶಂಕರಗೌಡ ಬಿರಾದಾರ, ಶಿವಾನಂದ ರಾವೋರ, ಪಿ.ಆರ್.ಇ.ಡಿ ಅಧಿಕಾರಿ ಎಸ್ ಎಸ್ ಮಿಂಚನಾಳ, ಪಿಡ್ಲೂö್ಯಡಿ ಅಧಿಕಾರಿ ದಯಾನಂದ ಮಠ, ಜೀತಪ್ಪ ಕಲ್ಯಾಣ, ರುದ್ರಗೌಡ ಪಾಟೀಲ, ಸುರೇಶ ಶಿವೂರ, ಗೌಡಪ್ಪಗೌಡ ಪಾಟೀಲ, ವಾಯ್.ಜಿ ಮಡಗೊಂಡ , ಸಿದ್ದಣ್ಣಾ ಮೈದರಗಿ ,ವಾಯ್.ಜಿ ಬಿರಾದಾರ ಸೇರಿದಂತೆ ಅನೇಕರಿದ್ದರು.

Post a Comment

Previous Post Next Post