ಹೃದಯದ ಆರೋಗ್ಯ ಸಂವಾದ ನಾಳೆ


By: Ashwini Rathod 

online disk 

ತುಮಕೂರು: ವಿಶ್ವ ಹೃದಯ ದಿನ ಅಂಗವಾಗಿ ಪ್ರೆಸ್‌ಕ್ಲಬ್ ತುಮಕೂರು, ತುಮಕೂರು ವಿಶ್ವವಿದ್ಯಾಲಯ, ಯುವ ರೆಡ್‌ಕ್ರಾಸ್ ಹಾಗೂ ಸಿದ್ಧಗಂಗಾ ಆಸ್ಪತ್ರೆ ಸಹಯೋಗದಲ್ಲಿ ಸೆ.30ರಂದು ವಿಶ್ವವಿದ್ಯಾಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ  ಹೃದಯದ ಆರೋಗ್ಯ ಸಂವಾದ ಆಯೋಜಿಸಲಾಗಿದೆ.
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್ ಸಂವಾದ ಕಾರ್ಯಕ್ರಮ ಉದ್ಘಾಟಿಸಲಿದ್ದು, ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಧ್ಯಕ್ಷತೆವಹಿಸುವರು. ಸಿದ್ಧಗಂಗಾ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ಎಚ್.ಎಂ.ಭಾನುಪ್ರಕಾಶ್ ವಿಶೇಷ ಉಪನ್ಯಾಸ ನೀಡುವರು.

ಕಾರ್ಯಕ್ರಮದಲ್ಲಿ ತುಮಕೂರು ವಿವಿ ಕುಲಸಚಿವ ಕೆ.ಶಿವಚಿತ್ತಪ್ಪ, ಪರೀಕ್ಷಾಂಗ ಕುಲಸಚಿವ ಡಾ.ನಿರ್ಮಲ ರಾಜು ಮತ್ತಿತರರು ಉಪಸ್ಥಿತರಿರುವರು.

Post a Comment

Previous Post Next Post