World Heart day: 2030ರ ಹೊತ್ತಿಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾಯುವವರಲ್ಲಿ ಅಮೆರಿಕ ಹಿಂದಿಕ್ಕಲಿದೆ ಭಾರತ!

 ಭಾರತದಲ್ಲಿ ಶೇಕಡಾ 75ರಷ್ಟು ಸಾವು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಸಂಭವಿಸುತ್ತವೆ ಎಂದು ಲ್ಯಾನ್ಸೆಟ್ ಅಧ್ಯಯನವು ಹೇಳುತ್ತದೆ. 2030 ರ ವೇಳೆಗೆ ಅಮೆರಿಕ, ಚೀನಾ ಅಥವಾ ರಷ್ಯಾದಲ್ಲಿ ಸಂಭವಿಸಿದ ಸಾವುಗಳಿಗಿಂತ ಭಾರತದಲ್ಲಿ ಹೃದಯ ಸಮಸ್ಯೆಗಳಿಂದ ಉಂಟಾಗುವ ಸಾವುಗಳು ಹೆಚ್ಚಾಗುತ್ತವೆ ಎಂಬ ಆಘಾತಕಾರಿ ಅಂಶವನ್ನು ಕೂಡ ಹೊರಹಾಕಿದೆ.(World Heart day)

                                                      ಸಾಂದರ್ಭಿಕ ಚಿತ್ರ

By : Rekha.M
Online Desk

ಸೆಪ್ಟೆಂಬರ್ 29 ವಿಶ್ವ ಹೃದಯ ದಿನ, ತನ್ನಮಿತ್ತ ಈ ಲೇಖನ

ಬೆಂಗಳೂರು: ಭಾರತದಲ್ಲಿ ಶೇಕಡಾ 75ರಷ್ಟು ಸಾವು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಸಂಭವಿಸುತ್ತವೆ ಎಂದು ಲ್ಯಾನ್ಸೆಟ್ ಅಧ್ಯಯನವು ಹೇಳುತ್ತದೆ. 2030 ರ ವೇಳೆಗೆ ಅಮೆರಿಕ, ಚೀನಾ ಅಥವಾ ರಷ್ಯಾದಲ್ಲಿ ಸಂಭವಿಸಿದ ಸಾವುಗಳಿಗಿಂತ ಭಾರತದಲ್ಲಿ ಹೃದಯ ಸಮಸ್ಯೆಗಳಿಂದ ಉಂಟಾಗುವ ಸಾವುಗಳು ಹೆಚ್ಚಾಗುತ್ತವೆ ಎಂಬ ಆಘಾತಕಾರಿ ಅಂಶವನ್ನು ಕೂಡ ಹೊರಹಾಕಿದೆ.(World Heart day)

ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಭಾರತೀಯ ಹೃದಯರಕ್ತನಾಳದ ಎದೆಗೂಡಿನ ಶಸ್ತ್ರಚಿಕಿತ್ಸಕರ ಸಂಘದ (IACTS) ಕಾರ್ಯದರ್ಶಿ ಡಾ.ಸಿ.ಎಸ್.ಹಿರೇಮಠ್, ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ. ಇದಕ್ಕೆ ಜನರ ಜಡ ಜೀವನಶೈಲಿಯೇ ಎಂದು ಹೇಳುತ್ತಾರೆ.


ಜಂಕ್ ಫುಡ್ ಸೇವನೆ, ಒತ್ತಡದಲ್ಲಿ ಅತಿಯಾಗಿ ತಿನ್ನುವುದು, ಅಧಿಕ ರಕ್ತದೊತ್ತಡ, ಧೂಮಪಾನ, ವ್ಯಾಯಾಮದ ಕೊರತೆ ಮತ್ತು ಸ್ಥೂಲಕಾಯತೆಯು ಭಾರತೀಯರಲ್ಲಿ ಹೆಚ್ಚಾಗುತ್ತಿದ್ದು, ಹೃದಯರಕ್ತನಾಳದ ಸಮಸ್ಯೆಗಳಿಗೆ ಇವು ಕಾರಣವಾಗುತ್ತದೆ ಎನ್ನುತ್ತಾರೆ. 

ಹಾಗೆಂದು ವಿಶೇಷವಾಗಿ ಕಠಿಣವಾದ ಜಿಮ್ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವುದರ ವಿರುದ್ಧ ಮತ್ತು ಸರಿಯಾದ ವೈದ್ಯಕೀಯ ಮಾರ್ಗದರ್ಶನವಿಲ್ಲದೆ ಸ್ನಾಯುಗಳನ್ನು ಬೆಳೆಸುವುದು ಕೂಡ ಹೃದಯಕ್ಕೆ ಮಾರಕ ಎನ್ನುತ್ತಾರೆ, 40 ವರ್ಷ ಮೇಲ್ಪಟ್ಟವರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡುತ್ತಾರೆ. 

ಕೆಸಿ ಜನರಲ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಕರಣ್ ಕರೆಕರ್, ಭಾರತದಲ್ಲಿ ಕ್ಯಾನ್ಸರ್ ನಂತರ ಹೃದಯ ಸಮಸ್ಯೆಗಳು ಸಾವಿಗೆ ಪ್ರಮುಖ ಕಾರಣಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿರುವ ಯುವಜನರ ಸಂಖ್ಯೆ (20 ರಿಂದ 40 ವರ್ಷ ವಯಸ್ಸಿನವರು) ಪ್ರಮಾಣಾನುಗುಣವಾಗಿ ಹೆಚ್ಚಾಗಿದೆ ಎನ್ನುತ್ತಾರೆ. ಒತ್ತಡ, ಆಹಾರ ಪದ್ಧತಿ, ಮಾನಸಿಕ ಆರೋಗ್ಯದ ಕೊರತೆ, ಸ್ಥೂಲಕಾಯತೆ ಇದಕ್ಕೆ ಕಾರಣವೆಂದು ಹೇಳುತ್ತಾರೆ. ಸಾಮಾನ್ಯವಾಗಿ ಒತ್ತಡವನ್ನು ಬಹುತೇಕರು ನಿರ್ಲಕ್ಷಿಸುತ್ತಾರೆ ಎಂದರು. 

ಒತ್ತಡವು ಹೆಚ್ಚಿದ ಹೃದಯ ಕಾಯಿಲೆಗಳಲ್ಲಿ ಪ್ರಮುಖ ಅಂಶವಾಗಿದೆ.ಭಾರತದಲ್ಲಿ ಮೆಟ್ರೊಪಾಲಿಟನ್ ನಗರಗಳಲ್ಲಿ ಇದು ಹೆಚ್ಚಾಗಿದೆ. ಮನೆಯಿಂದ ಕೆಲಸ ಮಾಡುವಾಗ ಕೆಲಸದ ಒತ್ತಡಗಳು ಮತ್ತು ಒತ್ತಡದ ಜೊತೆಗೆ ಹೆಚ್ಚಿನ ಕೆಲಸದ ಅವಧಿ ಕಾರಣ ಕೂಡ ಆಗುತ್ತದೆ ಎನ್ನುತ್ತಾರೆ ವೈದ್ಯ ಡಾ.ಕರೇಕರ್.


    Post a Comment

    Previous Post Next Post