ತ್ರಿಪಥ ಹೆದ್ದಾರಿ ಯೋಜನೆ ರದ್ದುಗೊಳಿಸಿ: ಸಿಎಂ ಬೊಮ್ಮಾಯಿಗೆ ಗ್ರೀನ್‌ಪೀಸ್ ಇಂಡಿಯಾ ಪತ್ರ

ಸೆಪ್ಟಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿಯಿಂದ ಉಂಟಾದ ಅನಾಹುತದ ನಂತರ ಗ್ರೀನ್ ಪೀಸ್ ಇಂಡಿಯಾ ಸಂಸ್ಥೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ.
ಬಸವರಾಜ ಬೊಮ್ಮಾಯಿ

By : Rekha.M
Online Desk

ಬೆಂಗಳೂರು: ಸೆಪ್ಟಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿಯಿಂದ ಉಂಟಾದ ಅನಾಹುತದ ನಂತರ ಗ್ರೀನ್ ಪೀಸ್ ಇಂಡಿಯಾ ಸಂಸ್ಥೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ.

ತ್ರಿಪಥ ಹೆದ್ದಾರಿ ನಿರ್ಮಾಣ ಯೋಜನೆ ಅವೈಜ್ಞಾನಿಕವಾಗಿರುವುದರಿಂದ ಈ ಯೋಜನೆ ರದ್ದುಗೊಳಿಸಬೇಕೆಂದು ಗ್ರೀನ್ ಪೀಸ್ ಇಂಡಿಯಾ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ.

ನಗರಕ್ಕೆ ಹಾಗೂ ಬೆಂಗಳೂರಿನ ನಾಗರಿಕರಿಗೆ ಅನಾನುಕೂಲವಾಗುವಂತ ಹೆಚ್ಚಿನ ಮೇಲ್ಸೇತುವೆ ಹಾಗೂ ಎಲಿವೇಟೆಡ್ ಕಾರಿಡಾರ್ ಗಳನ್ನು ನಿರ್ಮಿಸಬಾರದು ಎಂದು ಹೇಳಿದೆ.  ಖಾಸಗಿ ವಾಹನಗಳ ಹೆಚ್ಚು ಬಳಕೆಯನ್ನು ನಿರ್ಬಂಧಿಸಿ ಸಾರ್ವಜನಿಕ ಸಾರಿಗೆ ಬಳಸಲು ಜನರಿಗೆ ಹೆಚ್ಚಿನ ಅವಕಾಶ ಮಾಡಿಕೊಡಬೇಕೆಂದು ಗ್ರೀನ್  ಪೀಸ್ ಇಂಡಿಯಾ ಅಭಿಯಾನದ ಮ್ಯಾನೇಜರ್ ಅವಿನಾಶ್ ಕುಮಾರ್ ಚಂಚಲ್ ಸಲಹೆ ನೀಡಿದ್ದಾರೆ.

ನಗರದಲ್ಲಿ ಪ್ರವಾಹವನ್ನು ತಡೆಗಟ್ಟಲು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ದೀರ್ಘಾವಧಿಯ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದೆ.

ಸೆಪ್ಟಂಬರ್ ಮೊದಲ ವಾರದಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಪ್ರವಾಹದಲ್ಲಿ 2 ಸಾವಿರ ಮನೆಗಳು ಮುಳುಗಿದ್ದು, 22, ಸಾವಿರ ವಾಹನಗಳಿಗೆ ಹಾನಿಯಾಗಿದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಜೊತೆಗೆ ಜನರು ಅನುಭವಿಸಿದ ಕಷ್ಟಗಳನ್ನು ಹೇಳತೀರಲಾಗದು ಎಂದಿದೆ.

ಇಂತಹ ಅನಾಹುತಗಳು ಸಂಭವಿಸಿದಾಗ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಸರಿಯಾದ ಪ್ಲಾನ್ ರೂಪಿಸದಿರುವುದು ಎದ್ದು ಕಾಣುತ್ತಿದೆ.  ನಾಗರಿಕರ ಸಹಯೋಗದೊಂದಿಗೆ ಸ್ಥಳೀಯ ಸರ್ಕಾರಗಳು ಕ್ರಿಯಾ ಯೋಜನೆ ರೂಪಿಸುವಂತೆ ಒತ್ತಾಯಿಸಿದೆ.  ನಗರದಲ್ಲಿರುವ ಕಂಪನಿಗಳು ಮತ್ತು ಟೆಕ್ ಪಾರ್ಕ್ ಗಳು ತಮ್ಮ ಸಿಬ್ಬಂದಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಪ್ರೋತ್ಸಾಹಿಸಬೇಕು ಎಂದು ಗ್ರೀನ್ ಪೀಸ್ ಇಂಡಿಯಾ ಆಗ್ರಹಿಸಿದೆ.

ಬೆಂಗಳೂರಿನಲ್ಲಿ ಒತ್ತುವರಿ ಕುರಿತು ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, 2013ರಿಂದ 2018ರವರೆಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 1,953 ಒತ್ತುವರಿ ಗುರುತಿಸಿ, ಸುಮಾರು 1,300 ಒತ್ತುವರಿ ತೆರವುಗೊಳಿಸಲಾಗಿತ್ತು.

ಉಳಿದ 600 ಒತ್ತುವರಿ ತೆರವು ಮುಂದಿನ ಸರ್ಕಾರದಿಂದ ಮಾಡಬಹುದಿತ್ತು, ಆದರೆ ಕಳೆದ ಮೂರು ವರ್ಷಗಳಲ್ಲಿ ಒಂದೇ ಒಂದು ಒತ್ತುವರಿ ತೆರವು ಕಾರ್ಯ ನಡೆದಿಲ್ಲ. ಬೊಮ್ಮನಹಳ್ಳಿ ವಲಯದಲ್ಲಿ 47 ಕೆರೆಗಳಿದ್ದು, ಇದರಲ್ಲಿ 196 ಎಕರೆ ಒತ್ತುವರಿಯಾಗಿದೆ, ಮಹದೇವಪುರದ 52 ಕೆರೆಗಳಲ್ಲಿ 1,845 ಎಕರೆ ಹಾಗೂ ಯಲಹಂಕದ 28 ಕೆರೆಗಳಲ್ಲಿ  133 ಎಕರೆ, ಆರ್‌ಆರ್‌ನಗರದ  37 ಕೆರೆಗಳಲ್ಲಿ 160 ಎಕರೆ ಒತ್ತುವರಿಯಾಗಿದೆ ಎಂದು ಹೇಳಿದ್ದಾರೆ.
Post a Comment

Previous Post Next Post