ವಿಶ್ವ ಹಿರಿಯ ನಾಗರಿಕರ ದಿನಾಚರಣೆ: 6 ಸಾಧಕರು, 1 ಸಂಸ್ಥೆಗೆ ಪ್ರಶಸ್ತಿ

 ವಿಶ್ವ  ಹಿರಿಯರ ನಾಗರಿಕರ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರಿದ ಆರು ಹಿರಿಯ ನಾಗರಿಕರು ಮತ್ತು ಒಂದು ಸಂಸ್ಥೆಗೆ ರಾಜ್ಯ ಸರ್ಕಾರದಿಂದ  ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

               ಸಚಿವ ಹಾಲಪ್ಪ ಆಚಾರ್

By : Rekha.M
Online Desk

ಬೆಂಗಳೂರು: ವಿಶ್ವ  ಹಿರಿಯರ ನಾಗರಿಕರ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರಿದ ಆರು ಹಿರಿಯ ನಾಗರಿಕರು ಮತ್ತು ಒಂದು ಸಂಸ್ಥೆಗೆ ರಾಜ್ಯ ಸರ್ಕಾರದಿಂದ  ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಈ ವಿಷಯ ತಿಳಿಸಿದ ಮಹಿಳಾ ಮತ್ತು ಮಕ್ಕಳ ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಸಚಿವರಾದ ಆಚಾರ್ ಹಾಲಪ್ಪ ಬಸಪ್ಪ ಅವರು, ಶಿಕ್ಷಣ, ಸಾಹಿತ್ಯ, ಕಲೆ, ಸಮಾಜಸೇವೆ, ಕ್ರೀಡೆ ಮತ್ತು ಕಾನೂನು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿರುವ ಈ ಸಾಧಕರಿಗೆ ಮತ್ತು ಒಂದು ಸಂಸ್ಥೆಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಪ್ರಶಸ್ತಿಯು ಸ್ಮರಣಿಕೆ ಮತ್ತು ಒಂದು ಲಕ್ಷ ರೂಪಾಯಿಗಳ ನಗದನ್ನು ಒಳಗೊಂಡಿರುತ್ತದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಕ್ಟೋಬರ್ 1 ರಂದು ಬೆಳಗ್ಗೆ 10.30 ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಎ.ನಾರಾಯಣಸ್ವಾಮಿ, ರಾಜೀವ್ ಚಂದ್ರಶೇಖರ್ ಸೇರಿದಂತೆ ಮತ್ತಿತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು

ಪ್ರಶಸ್ತಿ ವಿಜೇತರರು: ಶಿಕ್ಷಣ ಕ್ಷೇತ್ರ: ಎಂ.ಎಂ.ಬೋಪಯ್ಯ (74 ವರ್ಷ) ವಿರಾಜಪೇಟೆ, ಸಾಹಿತ್ಯ-  ಡಾ.ಬಿ.ಕೆ.ಬಸವರಾಜ ರಾಜಋಷಿ (81 ವರ್ಷ), ಹುಬ್ಬಳ್ಳಿ, ಕಲಾ ಕ್ಷೇತ್ರ- ವೆಂಕಪ್ಪ ಅಂಬಾಜಿ ಸುಗತೇಕರ(79 ವರ್ಷ), ಸಮಾಜಸೇವೆ- ಡಾ.ಕೆ.ಜಿ.ಕುಲಕರ್ಣಿ(67 ವರ್ಷ), ಕೊಪ್ಪಳ, ಕ್ರೀಡೆ- ವಿಜಯ ರಮೇಶ್(77 ವರ್ಷ), ಮೈಸೂರು, ಕಾನೂನು- ಡಾ.ಕೋಡೂರು ವೆಂಕಟೇಶ್(61 ವರ್ಷ), ಬೆಂಗಳೂರು ಮತ್ತು ತೀರ್ಥಹಳ್ಳಿ ತಾಲೂಕಿನ ಬಸವಾನಿಯ ಸಾವಿತ್ರಮ್ಮ ರಾಮಶರ್ಮ ಸೇವಾ ಟ್ರಸ್ಟ್ (1995 ರಲ್ಲಿ ಸ್ಥಾಪನೆ) ಸಂಸ್ಥೆಗೆ ಪ್ರಶಸ್ತಿ ಸಂದಿದೆ. 


Post a Comment

Previous Post Next Post