ಬೆಂಗಳೂರು: ಪತ್ನಿ ಮತ್ತಾಕೆಯ ಕುಟುಂಬದವರಿಂದ ಮದ್ಯ ಸೇವಿಸುವಂತೆ ಮಗಳಿಗೆ ಒತ್ತಡ; ತಂದೆ ಆರೋಪ!

 ತನ್ನ 7 ವರ್ಷದ ಮಗಳಿಗೆ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ಮದ್ಯ ಸೇವನೆ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು 45 ವರ್ಷದ ವ್ಯಕ್ತಿಯೊಬ್ಬರು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

                ಸಾಂದರ್ಭಿಕ ಚಿತ್ರ

By : Rekha.M 
Online Desk

ಬೆಂಗಳೂರು: ತನ್ನ 7 ವರ್ಷದ ಮಗಳಿಗೆ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ಮದ್ಯ ಸೇವನೆ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು 45 ವರ್ಷದ ವ್ಯಕ್ತಿಯೊಬ್ಬರು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಾಲಕಿ ತಂದೆಯ ದೂರಿನ ಮೇರೆಗೆ ಪೊಲೀಸರು 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಚೆನ್ನೈನಲ್ಲಿ ನೆಲೆಸಿರುವ ದೂರುದಾರರು ನಿವೃತ್ತ ಸೈನಿಕರಾಗಿದ್ದು ಪತ್ನಿಯಿಂದ ಬೇರ್ಪಟ್ಟಿದ್ದಾರೆ, ಮಗಳು ಆಕೆಯೊಂದಿಗೆ ವಾಸಿಸುತ್ತಿದ್ದಾರೆ.

ಅವರು ಇತ್ತೀಚೆಗೆ ತಮ್ಮ ಪತ್ನಿ ಮತ್ತು ಮಗಳ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸ್ಟೇಟಸ್ ಸಂದೇಶಗಳನ್ನು ಗಮನಿಸಿದ್ದಾರೆ, ಅದರಲ್ಲಿ ಪಬ್‌ನಲ್ಲಿ ಮತ್ತು ಮನೆಯಲ್ಲಿ ಪಾರ್ಟಿಗಳನ್ನು ಆಯೋಜಿಸಲಾಗಿದ್ದ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದರು.

ತನ್ನ ಮಗಳಿಗೆ ಬಲವಂತವಾಗಿ ಬಿಯರ್ ಕುಡಿಸಲು ಯತ್ನಿಸಿದ್ದಾರೆ, ಆದರೆ ಅದರ ವಾಸನೆಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಆಕೆ ನಿರಾಕರಿಸಿದ್ದಳು ಎಂದು ಅವರು ಹೇಳಿದ್ದಾರೆ. 

ಮೇ 27 ರಂದು ಬೆಂಗಳೂರಿನಲ್ಲಿ ಆಕೆಯನ್ನು ಭೇಟಿಯಾದಾಗ ಬಾಲಕಿ ತನ್ನ ತಂದೆಯೊಂದಿಗೆ ಘಟನೆಯ ಬಗ್ಗೆ ಮಾತನಾಡಿದ್ದಳು. ತನ್ನ ಮಗಳು ಹಲವಾರು ಸಂದರ್ಭಗಳಲ್ಲಿ ಬಲವಂತವಾಗಿ ಮದ್ಯ ಸೇವಿಸುವುದನ್ನು ಸಹಿಸಲಾಗದ ಅವರು ಪ್ರಕರಣ ದಾಖಲಿಸಲು ನಿರ್ಧರಿಸಿದರು.

ನನ್ನ ಮಗಳು ಘಟನೆಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದಾಗ ನನಗೆ ಆಘಾತವಾಯಿತು ಮತ್ತು ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದೇನೆ, ಅದನ್ನು ನಾನು ಸಾಕ್ಷಿಯಾಗಿ ಕೊತ್ತನೂರು ಪೊಲೀಸರೊಂದಿಗೆ ಹಂಚಿಕೊಂಡಿದ್ದೇನೆ. ಮನೆಯಲ್ಲಿ ಸಾಕಿದ ನಾಯಿಯನ್ನೂ ಬಿಡದೆ, ಮದ್ಯವನ್ನೂ ಕೊಟ್ಟಿದ್ದಾರೆ' ಎಂದು ಆರೋಪಿಸಿದರು.


    Post a Comment

    Previous Post Next Post