ಸೆ.29ರಂದು ಕೆಸಿಇಟಿ ಹೊಸ ಪರಿಷ್ಕ್ರೃತ ರ್ಯಾಂಕ್ ಪಟ್ಟಿ ಬಿಡುಗಡೆ, ಅ.3ರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭ

 ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ರ‍್ಯಾಂಕ್‌ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪಿನ ನಂತರ, ಸೆಪ್ಟೆಂಬರ್ 29 ರೊಳಗೆ ಹೊಸ ರ್ಯಾಂಕ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅಕ್ಟೋಬರ್ 3 ರಿಂದ ಕೌನ್ಸೆಲಿಂಗ್ ಪ್ರಾರಂಭವಾಗಲಿದೆ.

          ಸಾಂದರ್ಭಿಕ ಚಿತ್ರ

By : Rekha.M
Online Desk

ಬೆಂಗಳೂರು: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ರ‍್ಯಾಂಕ್‌ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪಿನ ನಂತರ, ಸೆಪ್ಟೆಂಬರ್ 29 ರೊಳಗೆ ಹೊಸ ರ್ಯಾಂಕ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅಕ್ಟೋಬರ್ 3 ರಿಂದ ಕೌನ್ಸೆಲಿಂಗ್ ಪ್ರಾರಂಭವಾಗಲಿದೆ.

2020-21ನೇ ಸಾಲಿನಲ್ಲಿ ಪದವಿ ಪಡೆದಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 100 ಅಂಕಗಳ ಪೈಕಿ ಭೌತಶಾಸ್ತ್ರದಲ್ಲಿ ಆರು ಅಂಕಗಳು, ರಸಾಯನಶಾಸ್ತ್ರದಲ್ಲಿ ಐದು ಅಂಕಗಳು ಮತ್ತು ಗಣಿತದಲ್ಲಿ ಏಳು ಅಂಕಗಳನ್ನು ಕಡಿತಗೊಳಿಸಬೇಕು ಎಂಬ ಸರಕಾರದ ಪ್ರಸ್ತಾವನೆಯನ್ನು ಹೈಕೋರ್ಟ್ ಅಂಗೀಕರಿಸಿದೆ. 

ಪರಿಷ್ಕೃತ ಶ್ರೇಯಾಂಕ ಪಟ್ಟಿಯನ್ನು ಸೆಪ್ಟೆಂಬರ್ 29 ರಂದು ಬಿಡುಗಡೆ ಮಾಡಲಾಗುವುದು ಮತ್ತು ಅಕ್ಟೋಬರ್ 3 ರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್, ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿ, ಮುಂದಿನ ವಾರದೊಳಗೆ ಹೊಸ ಶ್ರೇಣಿಗಳನ್ನು ಬಿಡುಗಡೆ ಮಾಡಿ ಶೀಘ್ರದಲ್ಲೇ ಕೌನ್ಸೆಲಿಂಗ್ ನ್ನು ಪ್ರಾರಂಭಿಸಲಾಗುವುದು. ಕೌನ್ಸೆಲಿಂಗ್ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ಒಂದು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನವಿದೆ ಎಂದು ಹೇಳಿದರು.

                                        ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ

ಕೆಸಿಇಟಿ ಪುನರಾವರ್ತಿತ ವಿದ್ಯಾರ್ಥಿನಿ ನಿಕಿತಾ ಎಂ, ಅಂಕಗಳ ಕಡಿತದಿಂದ ತೃಪ್ತಿ ಸಿಕ್ಕಿಲ್ಲ, ಅಂಕಗಳು ರ್ಯಾಂಕಿಂಗ್ ನಲ್ಲಿ ಬಹುಮುಖ್ಯವಾಗಿದೆ ಎಂದರು. ಫ್ರೆಶರ್ ಆಗಿರುವ ಅಮಿತ್ ಅಗರವಾಲ್, ಇದು ಫ್ರೆಶರ್‌ಗಳಿಗೆ ಅನುಕೂಲವಾಗಿದೆ. 44:50 ಅನುಪಾತ ನಮಗೆ ತೃಪ್ತಿ ತಂದಿಲ್ಲ. ರ್ಯಾಂಕಿಂಗ್ ನಿಂದಾಗಿ ಉತ್ತಮ ಕಾಲೇಜುಗಳನ್ನು ಕಳೆದುಕೊಳ್ಳುವುದು ನಮಗೆ ಇಷ್ಟವಿಲ್ಲ ಎಂದರು.

ಎಲ್ಲಾ ಸಮಸ್ಯೆಗಳಿಗೆ ಕಾರಣವಾದ ರಿಪೀಟರ್ಸ್ ಬೋರ್ಡ್ ಅಂಕಗಳಿಂದ ಗ್ರೇಸ್ ಅಂಕಗಳನ್ನು ಕಡಿತಗೊಳಿಸಿರುವುದರಿಂದ ನಿರ್ಧಾರವು ಸ್ವೀಕಾರಾರ್ಹವಾಗಿದೆ ಎಂದು ಕೆಲವು ವಿದ್ಯಾರ್ಥಿಗಳು ಹೇಳಿದರು. ಪ್ರಸ್ತಾವಿತ ಶೇಕಡಾ 10ರಷ್ಟು ಸೀಟುಗಳ ಹೆಚ್ಚಳವು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ ಎಂಬುದು ಹೊಸಬರು ಭಾವಿಸುತ್ತಿದ್ದಾರೆ. ಅಕ್ಟೋಬರ್ ವೇಳೆಗೆ ಕಾಲೇಜುಗಳು ಪ್ರಾರಂಭವಾಗಬೇಕಿರುವುದರಿಂದ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.Post a Comment

Previous Post Next Post