ಪ್ರಾಥಮಿಕ ಶಾಲಾ ಮಕ್ಕಳ ಬ್ಯಾಗ್ ತೂಕ ಮಿತಿ: ರಾಜ್ಯ ಸರ್ಕಾರ, ರೂಪ್ಸಾಗೆ ಹೈಕೋರ್ಟ್ ನೊಟೀಸ್ ಜಾರಿ

 ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಬೆನ್ನಿನಲ್ಲಿ ಹೊತ್ತುಕೊಂಡು ಹೋಗುವ ಶಾಲಾ ಬ್ಯಾಗ್‌ಗಳ ತೂಕವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (

ಸಾಂದರ್ಭಿಕ ಚಿತ್ರ

By : Rekha.M
Online Desk

            

ಬೆಂಗಳೂರು: ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಬೆನ್ನಿನಲ್ಲಿ ಹೊತ್ತುಕೊಂಡು ಹೋಗುವ ಶಾಲಾ ಬ್ಯಾಗ್‌ಗಳ ತೂಕವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (RUPSA)ಕ್ಕೆ ನೋಟಿಸ್ ಜಾರಿ ಮಾಡಿದೆ. 

ವಿದ್ಯೆ, ಶಾಲೆಯ ಮೇಲೆ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ನಿಜವಾದ ಪ್ರೀತಿ ಹುಟ್ಟಿಸಲು ರಾಜ್ಯ ಮತ್ತು ಆರ್‌ಯುಪಿಎಸ್‌ಎಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ವಕೀಲ ಎಲ್ ರಮೇಶ್ ನಾಯ್ಕ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ. ಭಾರತ ಸರ್ಕಾರವು ಪ್ರಾಥಮಿಕ ಶಾಲಾ ಮಕ್ಕಳು ಸಾಗಿಸುವ ಶಾಲಾ ಬ್ಯಾಗ್‌ಗಳ ತೂಕವನ್ನು ಕಡಿಮೆ ಮಾಡಲು ಬ್ಯಾಗ್-2020' ಅನ್ನು ರೂಪಿಸಿದೆ.

2018 ರಲ್ಲಿ ಮದ್ರಾಸ್ ಹೈಕೋರ್ಟ್ ತೀರ್ಪಿನ ಅನುಸಾರವಾಗಿ ಈ ನೀತಿಯನ್ನು ರೂಪಿಸಲಾಗಿದೆ, ಇದು 1 ರಿಂದ 12 ನೇ ತರಗತಿಯವರೆಗೆ ವಿವಿಧ ತರಗತಿಗಳ ವಿದ್ಯಾರ್ಥಿಗಳು ಕೊಂಡೊಯ್ಯುವ ಶಾಲಾ ಬ್ಯಾಗ್‌ನ ತೂಕದ ಮಿತಿಯನ್ನು ನಿಗದಿಪಡಿಸಿದೆ. ಶಿಕ್ಷಣ ಸಚಿವಾಲಯವು 2020ರ ನವೆಂಬರ್ 24 ರಂದು ಆದೇಶವನ್ನು ಹೊರಡಿಸಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀತಿಯನ್ನು ಜಾರಿಗೆ ತರಲು, ವಿಶೇಷವಾಗಿ ಶಾಲಾ ಬ್ಯಾಗ್‌ಗಳ ತೂಕವನ್ನು ಕಡಿಮೆ ಮಾಡಲು ಅರ್ಜಿದಾರರು ಕೋರಿದ್ದಾರೆ. 

ಭಾರವಾದ ಶಾಲಾ ಬ್ಯಾಗ್‌ಗಳು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಆರೋಗ್ಯ ತಜ್ಞರ ವಿವಿಧ ಅಧ್ಯಯನಗಳು ಹೇಳುತ್ತವೆ ಎಂದು ಅವರು ಹೇಳಿದರು. ಇದು ಬೆಳೆಯುತ್ತಿರುವ ಮಕ್ಕಳ ಮೇಲೆ ತೀವ್ರವಾದ ದೈಹಿಕ ಪರಿಣಾಮಗಳನ್ನು ಬೀರುತ್ತದೆ. ಮಕ್ಕಳ ಬೆನ್ನುಮೂಳೆ ಮತ್ತು ಮೊಣಕಾಲುಗಳಿಗೆ ಹಾನಿಯನ್ನುಂಟುಮಾಡುತ್ತದೆ. ಶಾಲಾ ಬ್ಯಾಗ್‌ಗಳ ತೂಕವನ್ನು ಕಡಿಮೆ ಮಾಡಲು ರಾಜ್ಯವು ಒಲವು ತೋರಿಸದಿದ್ದರೆ ಸಂವಿಧಾನದ 21 ನೇ ವಿಧಿಯಲ್ಲಿ ಪ್ರತಿಪಾದಿಸಿರುವ ಮಕ್ಕಳ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

Post a Comment

Previous Post Next Post