ಬಿ ಡಿ ಎ ಕರ್ಮಕಾಂಡ ಬಯಲು : ೨೩ ಕೆರೆಗಳನ್ನು ನುಂಗಿ ನೀರು ಕುಡಿದ ಬಿ ಡಿ ಎ : ಕೆರೆ ಮಿಚ್ಚಿದ ಜಾಗದಲ್ಲಿ ೩೫೩೦ ನಿವೇಶನ , ಸಂಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ

 ಮಳೆಯ ಅನಾಹುತ ಬಳಿಕ ಒಂದೊಂದು ಆತಂಕಕಾರಿ ವಿಚಾರ ಬೆಳಕಿಗೆ ಬರುತ್ತಿದ್ದು, ಇದೀಗ ಸ್ವತಃ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ಹಲವು ಕೆರೆಗಳನ್ನು ನುಂಗಿರುವ ಮಾಹಿತಿ ಹೊರಬಿದ್ದಿದೆ.

                            ಬಿಡಿಎ

By : Rekha.M
Online Desk

ಬೆಂಗಳೂರು: ಮಳೆಯ ಅನಾಹುತ ಬಳಿಕ ಒಂದೊಂದು ಆತಂಕಕಾರಿ ವಿಚಾರ ಬೆಳಕಿಗೆ ಬರುತ್ತಿದ್ದು, ಇದೀಗ ಸ್ವತಃ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ಹಲವು ಕೆರೆಗಳನ್ನು ನುಂಗಿರುವ ಮಾಹಿತಿ ಹೊರಬಿದ್ದಿದೆ.

ಕೆರೆಗಳ ವ್ಯಾಪ್ತಿಯಲ್ಲಿ ಬಡಾವಣೆಗಳನ್ನು ನಿರ್ಮಿಸುವ ಮೂಲಕ ಒತ್ತುವರಿಗೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ನೀರು ಹರಿವಿನ ನೈಸರ್ಗಿಕ ಕಾಲುವೆಗಳನ್ನು ಮುಚ್ಚಿಹಾಕಿ ರಸ್ತೆಗಳ ಮೇಲೆ ನೀರು ಹರಿಯಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ನಗರದಲ್ಲಿ ಜೀವಂತವಾಗಿದ್ದ 23 ಕೆರೆಗಳಿಗೆ ಮಣ್ಣು ತುಂಬಿದ್ದ ಬಿಡಿಎ ಅದರ ಮೇಲೆ ಬಡಾವಣೆ ನಿರ್ಮಿಸಿ, 3,530 ನಿವೇಶನಗಳನ್ನು ನಿರ್ಮಿಸಿದೆ. ಈ ಸಂಬಂಧ ಸರ್ಕಾರಕ್ಕೆ ಬಿಡಿಎ ಬರೆದಿರುವ ಪತ್ರವು ಇದೀಗ ಬಹಿರಂಗವಾಗಿದೆ. 23 ಕೆರೆಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡಿದೆ ಎಂಬ ನೆಪ ಹೇಳಿದ್ದ ಬಿಡಿಎ ಕೆರೆಯನ್ನು ಸಂಪೂರ್ಣ ಮುಚ್ಚಿಹಾಕಿತ್ತು ಎನ್ನುವ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

    2013 - 2014ರಲ್ಲಿ 23 ಕೆರೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿರುವುದು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ. ಬಿಡಿಎ ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಮಾಡಿ ಕೋಟಿ ಕೋಟಿ ರೂಪಾಯಿಗೆ ಮಾರಾಟವನ್ನು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ 2015ರಲ್ಲಿ ಒತ್ತುವರಿ ಕಾನೂನು ಬದ್ಧಗೊಳಿಸುವಂತೆ ಸರ್ಕಾರಕ್ಕೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ( ಬಿಡಿಎ) ಪತ್ರ ಬರೆದಿರುವುದು ತಿಳಿದು ಬಂದಿದೆ.

    ‘ಫ್ರೆಂಡ್ಸ್‌ ಆಫ್‌ ಲೇಕ್ಸ್‌’ ಸಂಘಟನೆಯ ಲೇಕ್‌ ಕಾರ್ಯಕರ್ತ ರಾಮ್‌ ಪ್ರಸಾದ್‌, ಕೆರೆಗಳ ನಾಶಕ್ಕೆ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಎಟಿ ರಾಮಸ್ವಾಮಿ ಅವರ ವರದಿಯ ನಂತರ 2005ರಿಂದ ಕೆರೆ ಒತ್ತುವರಿ ತೆರವು ಕಾರ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಬಳಿಕ ಕೋಳಿವಾಡ್ ಸಮಿತಿ ವರದಿ ಅತಿಕ್ರಮಣಗಳ ಪ್ರಮಾಣವನ್ನು ನೀಡಿತ್ತು.  

    ಈ ವ್ಯಾಪಕವಾದ ವರದಿಗಳು ಲಭ್ಯವಾಗುವುದರೊಂದಿಗೆ, ಹೊಸ ಹೆಸರುಗಳನ್ನು ಉಲ್ಲೇಖಿಸಲಾಗಿದೆ, ಇದು ದಿಕ್ಕು ತಪ್ಪಿಸುವ ತಂತ್ರಗಳಂತೆ ತೋರುತ್ತದೆ. ಈ ವರದಿಗಳಲ್ಲಿ ಉಲ್ಲೇಖಿಸಿರುವಂತೆ ಕೆರೆಗಳು, ಮಳೆನೀರು ಚರಂಡಿಗಳು ಮತ್ತು ಬಫರ್ ವಲಯಗಳ ಮೇಲಿನ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಯಾವ ಕೆರೆಯಲ್ಲಿ ಎಷ್ಟು ನಿವೇಶನ ನಿರ್ಮಾಣ
    ಗೆದ್ದಲಹಳ್ಳಿ ಕೆರೆ - 126 ನಿವೇಶನ ನಿರ್ಮಾಣ ಚಿಕ್ಕಮಾರನಹಳ್ಳಿ ಕೆರೆ - 115 ನಿವೇಶನ ನಿರ್ಮಾಣ , ಬಾಣಸವಾಡಿ ಕೆರೆ - 67 ನಿವೇಶನ ನಿರ್ಮಾಣ , ಚನ್ನಸಂದ್ರ ಕೆರೆ - 222 ನಿವೇಶನ ನಿರ್ಮಾಣ ,  ಶಿನಿವಾಗಿಲು ಅಮಾನಿಕೆರೆ - 486 ನಿವೇಶನ ನಿರ್ಮಾಣ , ಬಿಳೇಕಹಳ್ಳಿ ಕೆರೆ - 312 ನಿವೇಶನ ನಿರ್ಮಾಣ, ನಾಗಸಂದ್ರ ಚೆನ್ನಮ್ಮಕರೆ - 328 ನಿವೇಶನ ನಿರ್ಮಾಣ,  ತಿಪ್ಪಸಂಧ್ರ ಕೆರೆ (3ನೇ ಹಂತ) - 234 ನಿವೇಶನ ನಿರ್ಮಾಣ,  ತಿಪ್ಪಸಂದ್ರ ಕೆರೆ (2ನೇ ಹಂತ) - 13 ನಿವೇಶನ ನಿರ್ಮಾಣ , ಅಗರ ಕೆರೆ - 113 ನಿವೇಶನ ನಿರ್ಮಾಣ,  ಎಳ್ಳುಕುಂಟೆ ಕೆರೆ - 161 ನಿವೇಶನ ನಿರ್ಮಾಣ , ಕಾಚರಕನಹಳ್ಳಿ ಕೆರೆ - 126 ನಿವೇಶನ ನಿರ್ಮಾಣ , ಹುಳಿಮಾವುಕೆರೆ - 153 ನಿವೇಶನ ನಿರ್ಮಾಣ,  ವೆಂಕಟರಾಯನಕೆರೆ - 130 ನಿವೇಶನ ನಿರ್ಮಾಣ , ನಾಗರಬಾವಿ ಕೆರೆ - 37 ನಿವೇಶನ ನಿರ್ಮಾಣ , ಚಳ್ಳಕೆರೆ - 71 ನಿವೇಶನ ನಿರ್ಮಾಣ ,  ದೊಮ್ಮಲೂರು ಕೆರೆ - 10 ನಿವೇಶನ ನಿರ್ಮಾಣ, ಮೇಸ್ತ್ರಿ ಪಾಳ್ಯ ಕೆರೆ - 23 ನಿವೇಶನ ನಿರ್ಮಾಣ, ಬೆನ್ನಿಗಾನಹಳ್ಳಿ ಕೆರೆ - 18 ನಿವೇಶನ ನಿರ್ಮಾಣ,  ಹೆಣ್ಣೂರು ಕೆರೆ - 434 ನಿವೇಶನ ನಿರ್ಮಾಣ,  ತಲಘಟ್ಟಪುರ ಕೆರೆ - 94 ನಿವೇಶನ ನಿರ್ಮಾಣ, ಕೇತಮಾರನಹಳ್ಳಿ ಕೆರೆ - 230 ನಿವೇಶನ ನಿರ್ಮಾಣ,  ಮಂಗನಹಳ್ಳಿ ಕೆರೆ - 27 ನಿವೇಶನ ನಿರ್ಮಾಣ ಈ ಕೆರೆಗಳನ್ನೆಲ್ಲಾ ಮುಚ್ಚಿ ಬಿಡಿಎ ನಿವೇಶವನ್ನು ನಿರ್ಮಾಣವನ್ನು ಮಾಡಿದೆ. ಇದರಿಂದಲೇ ಕೆಲವು ನಿವೇಶನಗಳಲ್ಲಿ ಮಳೆಯಿಂದ ಸಮಸ್ಯೆಯಾಗುತ್ತಿದೆ.


    Post a Comment

    Previous Post Next Post