ಯಾವ ಕೆಲಸವೂ ಕೀಳಲ್ಲ: ಕಸದ ವಾಹನ ಚಲಾಯಿಸಿದ ಐಎಎಸ್ ಅಧಿಕಾರಿ ಪ್ರಸನ್ನ!

 ಯಾವ ಕೆಲಸವೂ ಕೀಳಲ್ಲ ಎಂಬುದನ್ನುಕರ್ನಾಟಕದ ಐಎಎಸ್ ಅಧಿಕಾರಿಪ್ರಸನ್ನ ಅವರು ತಮ್ಮ ಕಾರ್ಯದ ಮೂಲಕ ತೋರ್ಪಡಿಸಿದ್ದು, ಅವರ ಕಾರ್ಯಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

              ಕಸದ ವಾಹನ ಚಲಾಯಿಸಿದ ಐಎಎಸ್ ಅಧಿಕಾರಿ ಪ್ರಸನ್ನ

By : Rekha.M
Online Desk

ಉಡುಪಿ: ಯಾವ ಕೆಲಸವೂ ಕೀಳಲ್ಲ ಎಂಬುದನ್ನುಕರ್ನಾಟಕದ ಐಎಎಸ್ ಅಧಿಕಾರಿಪ್ರಸನ್ನ ಅವರು ತಮ್ಮ ಕಾರ್ಯದ ಮೂಲಕ ತೋರ್ಪಡಿಸಿದ್ದು, ಅವರ ಕಾರ್ಯಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಆಗಿರುವ ಪ್ರಸನ್ನ ಅವರು ಪ್ರತಿ ಕೆಲಸವೂ ಶ್ರೇಷ್ಠ ಮತ್ತು ಅಗತ್ಯ ಎಂಬ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಇಂದು ಸ್ವತಃ ತಾವೇ ಕಸ ಸಂಗ್ರಹಿಸುವ ವಾಹನ ಚಲಾಯಿಸಿಕೊಂಡು ಬಂದು ನಿವಾಸಿಗಳಿಂದ ಕಸ ಸಂಗ್ರಹಿಸಿದ್ದಾರೆ.

ಶನಿವಾರ ಉಡುಪಿಯ ಬಡಗಬೆಟ್ಟು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ತ್ಯಾಜ್ಯ ಸಂಗ್ರಹಣೆ ಹೇಗೆ ನಡೆಯುತ್ತಿದೆ ಎಂಬುದನ್ನು ಖುದ್ದು ವೀಕ್ಷಿಸಿದರು. ಅಧಿಕಾರಿಯೊಬ್ಬರು ತಾವೇ ಕಸದ ವಾಹನ ಚಾಲನೆ ಮಾಡಿಕೊಂಡು ಬಂದು ಕಸ ಸಂಗ್ರಹಿಸಿದ್ದು ಸ್ಥಳೀಯರಿಗೆ ಅಚ್ಚರಿಯನ್ನುಂಟು ಮಾಡಿತ್ತು. Post a Comment

Previous Post Next Post