ನಿಷೇಧಿತ ಡ್ರಗ್ಸ್: ಬ್ರಿಟನ್ ಪ್ರಜೆ ಬಂಧನ

 

ಣಜಿ: ನಿಷೇಧಿತ ಡ್ರಗ್ಸ್ ಹೊಂದಿದ್ದ ಆರೋಪದ ಮೇಲೆ 76 ವರ್ಷದ ಬ್ರಿಟನ್ ಪ್ರಜೆ ಯೊಬ್ಬರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

ಸ್ಟೀಫನ್ ಸ್ಲಾಟ್ವಿನರ್ ಆರೋಪಿಯಾಗಿದ್ದು, ಸುಮಾರು 15.48 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಲಲಾಗಿದೆ ಎಂದು ಪೊಲೀಸ್‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರ ಗೋವಾ ಜಿಲ್ಲೆಯ ಅರಂಬೋಲ್ ಬೀಚ್ ಗ್ರಾಮದ ಮದಲವಾಡದಲ್ಲಿ ಬಾಡಿಗೆಗೆ ಪಡೆದ ಮನೆಯ ಮೇಲೆ ದಾಳಿ ನಡೆಸಿದ ಪೆರ್ನೆಮ್ ಪೊಲೀಸರು ಮದಕದ ಜೊತೆಗೆ ಆತನನ್ನು ಬಂಧಿಸಿದ್ದಾರೆ.

ಪೊಲೀಸರು 12.2 ಗ್ರಾಂ ಗಾಂಜಾ, 40 ಎಕ್ಸ್ಟಸಿ ಮಾತ್ರೆಗಳು, 26 ಲೈಸರ್ಜಿಕ್ ಆಸಿಡ್ ಡೈಥೈಲಾಮೈಡ್ ಪೇಪಗರ್‍ಗಳು ಮತ್ತು ಕ್ಯಾಪ್ಸುಗಳು, ಸೈಕೆಡೆಲಿಕ್ ಡ್ರಗ್ ಮತ್ತು 80 ಗ್ರಾಂ ಮಿಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ (ಎಂಡಿಎಂಎ) ಸಿಂಥೆಟಿಕ್ ಸೈಕೋಆಕ್ಟಿವ್ ವಶಪಡಿಸಿಕೊಂಡಿದ್ದಾರೆ.

Post a Comment

Previous Post Next Post