ಪ್ರವಾಹದ ಕಾರಣದಿಂದ ಸಂಕಷ್ಟ ಎದುರಿಸುತ್ತಿರುವ ಸಂತ್ರಸ್ತರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲ : ಎಂ ಎಲ್ ಸಿ ರವಿ

ರಾಮನಗರದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ನೆರವು ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್. ರವಿ ಆರೋಪಿಸಿದ್ದಾರೆ.

                        ವಿಧಾನಪರಿಷತ್ ಸದಸ್ಯ ಎಸ್ ರವಿ

By : Rekha.M
Online Desk

ಬೆಂಗಳೂರು: ರಾಮನಗರದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ನೆರವು ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್. ರವಿ ಆರೋಪಿಸಿದ್ದಾರೆ.

 ಅತಿವೃಷ್ಟಿ ಕುರಿತು ವಿಧಾನಪರಿಷತ್ತಿನಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ರವಿ, ಭಕ್ಷಿ ಕೆರೆ ಹೊಡೆದು ರಾಮನಗರ ಒಂದರಲ್ಲಿಯೇ ಸುಮಾರು 3,000 ಮನೆಗಳು ಜಲಾವೃತ್ತಗೊಂಡಿದ್ದವು. ರಾಮನಗರದ ಹಳೆಯ ಹಾಗೂ ಹೊಸ ಪ್ರದೇಶಗಳ ನಡುವೆ ಸಂಪರ್ಕ ಸಂಪರ್ಕ ಕಡಿತಗೊಂಡಿತ್ತು. ಅನೇಕ ಮನೆಗಳು ಭಾಗಶ: ಹಾನಿಯಾಗಿವೆ. ಭಾರೀ ಮಳೆಯಿಂದಾಗಿ ಸುಮಾರು 250 ಮನೆಗಳು ಕುಸಿತವಾಗಿವೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು. ಆದರೂ, ಇನ್ನೂ ಅನೇಕ ಸಂತ್ರಸ್ತರಿಗೆ ಇನ್ನೂ ಮನೆ ಇಲ್ಲದಂತಾಗಿದೆ. ಅನೇಕ ಮಂದಿ ಪರಿಹಾರ ಪಡೆದಿಲ್ಲ. ಅವರು ಜೀವನವನ್ನು ಮರು ಕಟ್ಟಿಕೊಡುವುದು ಪ್ರಮುಖವಾಗಿದೆ ಎಂದರು.  

ಪ್ರವಾಹ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿಲ್ಲ, ಪರಿಹಾರ ನೀಡಲು ಅಧಿಕಾರಿಗಳು ಸಾರ್ವಜನಿಕರ ಬಳಿ ಐಡಿ ಕಾರ್ಡ್ ತೋರಿಸಲು ಕೇಳುತ್ತಿದ್ದಾರೆ. ಜನರು ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವಾಗ ಆಧಾರ್, ವೋಟರ್ ಐಡಿ ಕಾರ್ಡ್ ತೋರಿಸುವಂತೆ ಕೇಳುವುದು ಅಮಾನವೀಯವಾದದ್ದು, ಸರ್ಕಾರ ಆದಷ್ಟು ಬೇಗ ಜನರಿಗೆ ಪರಿಹಾರ ಒದಗಿಸಬೇಕು ಎಂದು ರವಿ ಒತ್ತಾಯಿಸಿದರು.


    Post a Comment

    Previous Post Next Post