ಕೇದಾರನಾಥ ದೇವಸ್ಥಾನದ ಗೋಡೆಗಳಿಗೆ ಚಿನ್ನ ಲೇಪನ ವಿರೋಧಿಸಿದ ಅರ್ಚಕರು

 ಹಿಮಾಲಯದ ಕೇದಾರನಾಥ ದೇವಸ್ಥಾನದ ಗರ್ಭಗುಡಿಯೊಳಗಿನ ಗೋಡೆಗಳಿಗೆ ಚಿನ್ನದ ಲೇಪನ ಮಾಡುವುದನ್ನು ದೇವಾಲಯದ ಕೆಲವು ಅರ್ಚಕರು ವಿರೋಧಿಸಿದ್ದು, ಇದು ಶತಮಾನಗಳ ಹಳೆಯ ಸಂಪ್ರದಾಯಗಳನ್ನು ಹಾಳುಮಾಡುತ್ತದೆ ಎಂದು ಹೇಳಿದ್ದಾರೆ.

                       ಕೇದಾರನಾಥ ದೇವಾಲಯ

By : Rekha.M
Online Desk

ಡೆಹ್ರಾಡೂನ್: ಹಿಮಾಲಯದ ಕೇದಾರನಾಥ ದೇವಸ್ಥಾನದ ಗರ್ಭಗುಡಿಯೊಳಗಿನ ಗೋಡೆಗಳಿಗೆ ಚಿನ್ನದ ಲೇಪನ ಮಾಡುವುದನ್ನು ದೇವಾಲಯದ ಕೆಲವು ಅರ್ಚಕರು ವಿರೋಧಿಸಿದ್ದು, ಇದು ಶತಮಾನಗಳ ಹಳೆಯ ಸಂಪ್ರದಾಯಗಳನ್ನು ಹಾಳುಮಾಡುತ್ತದೆ ಎಂದು ಹೇಳಿದ್ದಾರೆ.

ಚಿನ್ನದ ಲೇಪನವನ್ನು ವಿರೋಧಿಸುತ್ತಿರುವ ತೀರ್ಥ ಪುರೋಹಿತರು(ತೀರ್ಥ ಪುರೋಹಿತರು) ಈ ಪ್ರಕ್ರಿಯೆಯಲ್ಲಿ ದೊಡ್ಡ ಕೊರೆಯುವ ಯಂತ್ರಗಳನ್ನು ಬಳಸುವುದರಿಂದ ದೇವಾಲಯದ ಗೋಡೆಗಳಿಗೆ ಹಾನಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸಿದ್ಧ ದೇವಾಲಯದ ನಾಲ್ಕು ಗೋಡೆಗಳಿಗೆ ಬೆಳ್ಳಿಯ ಲೇಪನ ಇದ್ದು, ಈಗ ಅದನ್ನು ತೆಗೆದು ಚಿನ್ನದ ಲೇಪನ ಮಾಡಲಾಗುತ್ತಿದೆ.

ಮಹಾರಾಷ್ಟ್ರದ ಶಿವಭಕ್ತರೊಬ್ಬರು ಸ್ವಯಂಪ್ರೇರಿತರಾಗಿ ದೇವಸ್ಥಾನಕ್ಕೆ ಚಿನ್ನ ಅರ್ಪಣೆ ಮಾಡಿದ ನಂತರ ದೇವಾಲಯದ ಗೋಡೆಗಳಿಗೆ ಚಿನ್ನದ ಲೇಪನ ಮಾಡಲಾಗುತ್ತಿದೆ. ಭಕ್ತರ ಈ ಪ್ರಸ್ತಾವನೆಯನ್ನು ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ರಾಜ್ಯ ಸರ್ಕಾರದ ಅನುಮತಿಯೊಂದಿಗೆ ಅಂಗೀಕರಿಸಿದೆ.

ಚಿನ್ನದ ಲೇಪನದಿಂದ ದೇವಾಲಯದ ಗೋಡೆಗಳಿಗೆ ಹಾನಿಯಾಗುತ್ತಿದ್ದು, ಇದಕ್ಕಾಗಿ ದೊಡ್ಡ ಕೊರೆಯುವ ಯಂತ್ರಗಳನ್ನು ಬಳಸಲಾಗುತ್ತಿದೆ. ದೇವಸ್ಥಾನದ ಶತಮಾನಗಳ ಹಳೆಯ ಸಂಪ್ರದಾಯಗಳನ್ನು ಈ ರೀತಿ ಹಾಳು ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಸಂತೋಷ್ ತ್ರಿವೇದಿ ಎಂಬ ಅರ್ಚಕರು ಹೇಳಿದ್ದಾರೆ.

ಆದರೆ, ಸದ್ಯ ದೇವಸ್ಥಾನದ ಗರ್ಭಗುಡಿಯೊಳಗೆ ನಡೆಯುತ್ತಿರುವ ಜೀರ್ಣೋದ್ಧಾರ ಕಾರ್ಯಕ್ಕೆ ಕೆಲ ಹಿರಿಯ ಅರ್ಚಕರು ಒಲವು ತೋರಿದ್ದು, ಅರ್ಚಕರಲ್ಲೇ ಭಿನ್ನಾಭಿಪ್ರಾಯ ಮೂಡಿದೆ.Post a Comment

Previous Post Next Post