ನಿಮ್ಮ ನೆರೆಹೊರೆಯಲ್ಲಿರುವ ಮರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕೋಡ್‌ಗಳನ್ನು ಸ್ಕ್ಯಾನ್ ಮಾಡಿ!

 ನಿಮ್ಮ ನೆರೆಹೊರೆಯಲ್ಲಿರುವ ಮರಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ನಿಮ್ಮ ಮೊಬೈಲ್ ಫೋನ್‌ಗಳಲ್ಲಿ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದರೆ ಸಾಕು. ಮರಗಳ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಲು ಇಂತಹ ಕೋಡ್‌ಗಳ ಮೇಲೆ ರಾಜ್ಯ ಪರಿಸರ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ.

By : Rekha.M

ಬೆಂಗಳೂರು: ನಿಮ್ಮ ನೆರೆಹೊರೆಯಲ್ಲಿರುವ ಮರಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ನಿಮ್ಮ ಮೊಬೈಲ್ ಫೋನ್‌ಗಳಲ್ಲಿ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದರೆ ಸಾಕು. ಮರಗಳ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಲು ಇಂತಹ ಕೋಡ್‌ಗಳ ಮೇಲೆ ರಾಜ್ಯ ಪರಿಸರ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ. ಇದು ಬೆಂಗಳೂರಿನಲ್ಲಿನ ಹಸಿರು ಹೊದಿಕೆಯ ಉತ್ತಮ ರಕ್ಷಣೆಗೆ ಸಹಾಯ ಮಾಡುತ್ತದೆ.

ಬೆಂಗಳೂರಿನ ಸಣ್ಣ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಈ ಉಪಕ್ರಮವನ್ನು ಪ್ರಾರಂಭಿಸಲಾಗುವುದು ಮತ್ತು ನಂತರ ದೊರಕುವ ಪ್ರತಿಕ್ರಿಯೆಯ ಆಧಾರದ ಮೇಲೆ ಇಡೀ ನಗರಕ್ಕೆ ವಿಸ್ತರಿಸಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದ್ದಾರೆ.

ಸ್ಕ್ಯಾನ್ ಕೋಡ್‌ಗಳನ್ನು ಅಭಿವೃದ್ಧಿಪಡಿಸುವ ಮೊದಲು, ಮರಗಳ ಸ್ವರೂಪ, ಸ್ಥಳೀಯವಾಗಿರಲಿ ಅಥವಾ ಇಲ್ಲದಿರಲಿ, ನಿತ್ಯಹರಿದ್ವರ್ಣ, ಅವುಗಳ ಎಲೆ ಉದುರುವಿಕೆ ಮಾದರಿ ಮತ್ತು ಸಾಂದ್ರತೆ ಸೇರಿದಂತೆ ಹಲವಾರು ವಿಚಾರಣಗಳ ಬಗ್ಗೆ ನಿರ್ಣಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

'ಬೆಂಗಳೂರು ಐಟಿ ಹಬ್ ಆಗಿರುವುದರಿಂದ, ನಾಗರಿಕರನ್ನು ಒಳಗೊಳ್ಳುವ ಮೂಲಕ ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ನಾವು ಯೋಚಿಸಿದ್ದೇವೆ. ಬೆಂಗಳೂರಿನಲ್ಲಿ 220 ರಿಂದ 240 ಜಾತಿಯ ಮರಗಳಿವೆ. ಸದ್ಯ ನಡೆಯುತ್ತಿರುವ ಮರ ಗಣತಿಯ ಸಹಾಯದಿಂದ ನಾವು ಮರಗಳನ್ನು ಅವುಗಳ ಜಿಐಎಸ್ ನಿರ್ದೇಶಾಂಕಗಳೊಂದಿಗೆ ಜೋಡಿಸಲು ಬಯಸುತ್ತೇವೆ ಮತ್ತು ಸ್ಕ್ಯಾನ್ ಕೋಡ್‌ಗಳನ್ನು ಸಹ ಹೊಂದುದ್ದೇವೆ ಎಂದು ಅಧಿಕಾರಿ ಹೇಳಿದರು.

ಮರದ ಜಾತಿ, ಆಮ್ಲಜನಕ, ಕಾರ್ಬನ್ ಡೈಆಕ್ಸೈಡ್ ಮಟ್ಟಗಳ ಬಗ್ಗೆ ಮಾಹಿತಿ

ಚಿಕ್ಕಮಗಳೂರಿನ ಕೃಷಿ ಪ್ಲಾಟ್‌ನಲ್ಲಿ ಆಂತರಿಕ ಮೌಲ್ಯಮಾಪನಕ್ಕಾಗಿ ಇದೇ ರೀತಿಯ ಪ್ರಾಯೋಗಿಕ ಯೋಜನೆ ಕಂಡುಬಂದಿದೆ. ಆದರೆ, ಬೆಂಗಳೂರಿನಲ್ಲಿ ಈ ಉಪಕ್ರಮವು ನಾಗರಿಕರಿಂದಲೇ ನಡೆಸಲ್ಪಡುತ್ತದೆ ಮತ್ತು ಇಲಾಖೆಯು ಸಿಎಸ್ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ಹಣವನ್ನು ಪಡೆಯಲು ಪ್ರಯತ್ನಿಸುತ್ತಿದೆ. ನಾಗರಿಕರು ಮರವನ್ನು ಸ್ಕ್ಯಾನ್ ಮಾಡಿದಾಗ, ಅವುಗಳ ಜಾತಿಗಳ ಬಗ್ಗೆ ಮಾಹಿತಿ, ಅದು ಉತ್ಪಾದಿಸುವ ಆಮ್ಲಜನಕದ ಪ್ರಮಾಣ, ಅದು ಎಷ್ಟು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತದೆ ಮತ್ತು ತಮ್ಮ ಜಾತಿಯ ಪ್ರಾಮುಖ್ಯತೆಯನ್ನು ಹಂಚಿಕೊಳ್ಳುತ್ತದೆ.

ಬೆಂಗಳೂರಿನ ಐಐಎಸ್‌ಸಿ ಮತ್ತು ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿನ ತಜ್ಞರ ಅಭಿಪ್ರಾಯಗಳನ್ನು ಪಡೆಯಲಾಗುವುದು. ಅರಣ್ಯ ಇಲಾಖೆ ಮತ್ತು ಬಿಬಿಎಂಪಿ ಈ ಯೋಜನೆಯಲ್ಲಿ ತೊಡಗಿಸಿಕೊಳ್ಳುತ್ತವೆ. 'ಮರಗಳು ಹೆಚ್ಚು ಬಾಧಿತವಾಗಿರುವ ಮತ್ತು ಅವುಗಳನ್ನು ಉತ್ತಮವಾಗಿ ರಕ್ಷಿಸಿರುವ ಪ್ರದೇಶಗಳನ್ನು ನಾವು ಹುಡುಕುತ್ತಿದ್ದೇವೆ. ಸರಳ ರೀತಿಯಲ್ಲಿ ಮಾಹಿತಿ ನೀಡುವ ರೀತಿಯಲ್ಲಿ ಪ್ರೋಟೋಕಾಲ್ ಅನ್ನು ವಿನ್ಯಾಸಗೊಳಿಸಲಾಗುವುದು' ಎಂದು ಅಧಿಕಾರಿ ಹೇಳಿದರು.


Post a Comment

Previous Post Next Post