ಒತ್ತುವರಿ ತೆರವು: ಬಾಗ್ಮನೆ ಟೆಕ್ ಪಾರ್ಕ್ ಮೇಲೆ ಬಲವಂತದ ಕ್ರಮ ಕೈಗೊಳ್ಳದಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

 ಬಾಗ್ಮನೆ ಡೆವಲಪ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಟೆಕ್ ಪಾರ್ಕ್‌ನ ಕಾಂಪೌಂಡ್ ಗೋಡೆಯನ್ನು ಕೆಡವುವ ಕುರಿತು ಬಲವಂತದ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿದೆ.

                              ಬಾಗ್ಮನೆ ಟೆಕ್ ಪಾರ್ಕ್

By : Rekha.M
Online Desk

ಬೆಂಗಳೂರು: ಬಾಗ್ಮನೆ ಡೆವಲಪ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಟೆಕ್ ಪಾರ್ಕ್‌ನ ಕಾಂಪೌಂಡ್ ಗೋಡೆಯನ್ನು ಕೆಡವುವ ಕುರಿತು ಬಲವಂತದ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿದೆ.

ಮೊದಲಿಗೆ ಸರ್ವೆ ನಡೆಸಿ, ಸಮೀಕ್ಷೆಯ ವರದಿಯ ಪ್ರತಿಯನ್ನು ನೀಡಿ ಮತ್ತು ಅರ್ಜಿದಾರರಾದ ಬಾಗ್ಮನೆ ಡೆವಲಪ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ವಿಚಾರಣೆಯನ್ನು ಆಲಿಸಿ ನಂತರ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ಬಿಬಿಎಂಪಿಗೆ ಸೂಚಿಸಿದೆ.

ಬಿಬಿಎಂಪಿ ಸೆಪ್ಟೆಂಬರ್ 10ರಂದು ನೀಡಿದ್ದ ಮೌಖಿಕ ಸಂದೇಶವನ್ನು  ಪ್ರಶ್ನಿಸಿ ಬಿಲ್ಡರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಈ ಆದೇಶ ನೀಡಿದ್ದಾರೆ.Post a Comment

Previous Post Next Post