ಬೆಂಗಳೂರು: 13.65 ಕೋಟಿ ರೂ. ಮೌಲ್ಯದ 1.24 ಕೆಜಿ ಕೊಕೇನ್ ನೊಂದಿಗೆ ಸಿಕ್ಕಿಬಿದ್ದ ವಿದೇಶಿ ಪ್ರಜೆ!

 ಇಥಿಯೋಪಿಯಾದಿಂದ ಬಂದಿಳಿದ ಪ್ರಯಾಣಿಕರೊಬ್ಬರಿಂದ 13.65 ಕೋಟಿ ರೂಪಾಯಿ ಮೌಲ್ಯದ 1.24 ಕೆಜಿ ಕೊಕೇನ್ ಅನ್ನು ಬೆಂಗಳೂರು ಏರ್‌ಪೋರ್ಟ್ ನ ಕಸ್ಟಮ್ಸ್ ಇಂಟೆಲಿಜೆನ್ಸ್ ಯುನಿಟ್(ಸಿಐಯು) ಹೊರತೆಗೆದಿದೆ.

              ಕೊಕೇನ್

By : Rekha.M
Online Desk

ಬೆಂಗಳೂರು: ಇಥಿಯೋಪಿಯಾದಿಂದ ಬಂದಿಳಿದ ಪ್ರಯಾಣಿಕರೊಬ್ಬರಿಂದ 13.65 ಕೋಟಿ ರೂಪಾಯಿ ಮೌಲ್ಯದ 1.24 ಕೆಜಿ ಕೊಕೇನ್ ಅನ್ನು ಬೆಂಗಳೂರು ಏರ್‌ಪೋರ್ಟ್ ನ ಕಸ್ಟಮ್ಸ್ ಇಂಟೆಲಿಜೆನ್ಸ್ ಯುನಿಟ್(ಸಿಐಯು) ಹೊರತೆಗೆದಿದೆ. 

53 ವರ್ಷದ ಪ್ರಯಾಣಿಕನ ವಿರುದ್ಧ ಮಾದಕ ದ್ರವ್ಯ ಮತ್ತು ಉದ್ದೀಪನ ವಸ್ತುಗಳ ಸೇವನೆ ತಡೆ(ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.

ಘಾನಾ ಮೂಲದ ಬಾಹ್ ಅಂಪಾಡು ಕ್ವಾಡ್ವೊ ಸೆಪ್ಟೆಂಬರ್ 19ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಥಿಯೋಪಿಯನ್ ಏರ್‌ಲೈನ್ಸ್(ET 690) ಮೂಲಕ ಆಗಮಿಸಿದ್ದರು ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ. 

ಕ್ವಾಡ್ವೊನನ್ನು ತಡೆದಾಗ ಆತ ಮಾದಕ ವಸ್ತುವನ್ನು ಮರೆಮಾಚುವ ಮೂಲಕ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಕಂಡುಬಂದಿದೆ. ಹೀಗಾಗಿ ನಾವು ಕ್ವಾಡ್ವೊನನ್ನು ಆಸ್ಪತ್ರೆಗೆ ಕರೆದೊಯ್ದು ಎರಡು ದಿನಗಳ ಅವಧಿಯಲ್ಲಿ ಎಲ್ಲಾ ಮಾಧಕವಸ್ತುಗಳನ್ನು ಹೊರಕ್ಕೆ ತೆಗೆಸಿದ್ದೇವೆ ಎಂದು ಅಧಿಕಾರಿಗಳು ಹೇಳಿದರು.

ಹೆಚ್ಚಿನ ತನಿಖೆಗಳು ನಡೆಯುತ್ತಿದ್ದು ಆತ ನಿಯಮಿತ ಕಳ್ಳಸಾಗಾಣಿಕೆದಾರರೇ ಅಥವಾ ಇದು ಅವರ ಮೊದಲ ಪ್ರಯತ್ನವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮೂಲಗಳು ಸೇರಿಸಿದೆ.

Post a Comment

Previous Post Next Post