ಸೆ.19ರಂದು ಬಿಜೆಪಿಯೊಂದಿಗೆ ಪಂಜಾಬ್​ ಲೋಕ್​ ಕಾಂಗ್ರೆಸ್ ಪಕ್ಷ ವಿಲೀನ

 

ಚಂಡಿಗಢ್​: ಪಂಜಾಬ್​ ಮಾಜಿ ಸಿಎಂ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಅವರು ತಮ್ಮ ಪಂಜಾಬ್​ ಲೋಕ್​ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲಿದ್ದಾರೆ.

ಸೆ. 19ರಂದು, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವ ದಲ್ಲಿ ಪಿಎಲ್​​ಸಿ ಪಕ್ಷ ಬಿಜೆಪಿಯೊಟ್ಟಿಗೆ ಕೂಡಿಕೊಳ್ಳಲಿದೆ. ಬಳಿಕ ಕ್ಯಾಪ್ಟನ್​ ಅಮರಿಂದರ್ ಸಿಂಗ್ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ.

ಈ ಪಕ್ಷದಲ್ಲಿದ್ದ ಮಾಜಿ ಶಾಸಕರ ಜತೆ, ಅಮರಿಂದರ್ ಸಿಂಗ್​ರ ಮಗಳು ಜೈ ಇಂದರ್​ ಕೌರ್​, ಪುತ್ರ ರಾಣಿಂದರ್​ ಸಿಂಗ್​, ಮೊಮ್ಮಗ ನಿರ್ವಾನ್ ಸಿಂಗ್​ ಅವರೂ ಬಿಜೆಪಿಗೆ ಸೇರ್ಪಡೆಯಾಗಿ ದ್ದಾರೆ. ಆದರೆ ಪತ್ನಿ, ಸಂಸದೆ ಪ್ರಣೀತ್ ಕೌರ್​ ಕಾಂಗ್ರೆಸ್​​ನಲ್ಲಿಯೇ ಉಳಿಯಲಿದ್ದಾರೆ.

ಸೆಪ್ಟೆಂಬರ್​ 19ಕ್ಕೆ ವಿಲೀನ ಪ್ರಕ್ರಿಯೆ ದೆಹಲಿಯಲ್ಲಿ ನಡೆಯಲಿದೆ. ಪಂಜಾಬ್​ ವಿಧಾನಸಭೆ ಚುನಾವಣೆಗೂ ಪೂರ್ವ ಪಂಜಾಬ್​​ನಲ್ಲಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಕಾಂಗ್ರೆಸ್​ ಮೇಲೆ ಬೇಸರ ಗೊಂಡು ಪಕ್ಷವನ್ನು ತೊರೆದಿದ್ದರು.Post a Comment

Previous Post Next Post