ಅಕ್ಕಿಯ ಬೆಲೆಯಲ್ಲಿ 8-10 ರೂ.ವರೆಗೆ ಏರಿಕೆ

 

ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ.

ಕಳೆದ ಎರಡು ತಿಂಗಳ ಅವಧಿಯಲ್ಲಿ ಅಕ್ಕಿಯ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. 1-2 ರೂ. ನಂತೆ ಏರಿಕೆಯಾಗುತ್ತಿದ್ದ ಅಕ್ಕಿ ಬೆಲೆ ಕಳೆದ ಎರಡು ತಿಂಗಳ ಅವಧಿಯಲ್ಲಿ 8-10 ರೂ.ವರೆಗೆ ಏರಿಕೆಯಾಗಿದೆ. ಸ್ಟೀಮ್ ರೈಸ್ ದರ ಕೆಜಿಗೆ 38 ರಿಂದ 48 ರೂ. ಏರಿಕೆ ಯಾದರೆ, ಸೋನಾಮಸೂರಿ 52 ರೂ.ನಿಂದ 60 ರೂ. ದೋಸೆ ಅಕ್ಕಿ 30 ರಿಂದ 34 ರೂ. ಜೀರಾ ರೈಸ್ 110 ರೂ.ನಿಂದ 120 ರೂ.ವರೆಗೆ ಏರಿಕೆಯಾಗಿದೆ.

ಈ ನಡುವೆ ವಿದೇಶಗಳಿಗೆ ಹೆಚ್ಚಿನ ರಪ್ತು ಕಾರಣ ಅಕ್ಕಿ ಕೊರತೆ ಕಂಡುಬಂದಿದೆ. ಜುಲೈ, ಆಗಸ್ಟ್ ತಿಂಗಳಲ್ಲಿ ಅಕ್ಕಿದರ ಶೇ. 20 ರಷ್ಟು ದುಬಾರಿಯಾಗಿದೆ. ಇದೇ ಮೊದಲ ಬಾರಿಗೆ ಪ್ರತಿ ಕೆಜಿ ಅಕ್ಕಿ 8-10 ರೂ.ಹೆಚ್ಚಳವಾಗಿದೆ.Post a Comment

Previous Post Next Post