ಕನ್ಯಾಕುಮಾರಿಯಿಂದ ಭಾರತ ಐಕ್ಯತೆ ಯಾತ್ರೆ ಆರಂಭ

 

ವದೆಹಲಿ: ಭಾರತ ಐಕ್ಯತೆ ಯಾತ್ರೆ ಬುಧವಾರ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡಿದೆ.

ರಾಹುಲ್‍ಗಾಂಧಿ ಅವರು ತಮಿಳುನಾಡಿನ ಶ್ರೀಪೆರಂಬೂರಿನಲ್ಲಿ ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಅವರ ಪುಣ್ಯ ಭೂಮಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಪಾದಯಾತ್ರೆ 150 ದಿನ 3570 ಕಿ.ಮೀ. ಪಾದಯಾತ್ರೆ ಸಾಗಲಿದ್ದು, 12 ಜಿಲ್ಲೆಗಳನ್ನು ಹಾದು ಹೋಗಲಿದೆ. ಭಾರತದ ತುತ್ತ ತುದಿ ಕಾಶ್ಮೀರಕ್ಕೆ ತಲುಪುವ ಈ ಪಾದಯಾತ್ರೆ ಕಾಂಗ್ರೆಸ್‍ನ ತಳಮಟ್ಟದ ಕಾರ್ಯಕರ್ತರನ್ನು ತಲುಪಲಿದೆ ಎಂದು ಭಾವಿಸಲಾಗಿದೆ.

ದೇಶವನ್ನು ಕಾಡುತ್ತಿರುವ ಬೆಲೆ ಏರಿಕೆ, ನಿರುದ್ಯೋಗ, ಅಗತ್ಯ ವಸ್ತುಗಳ ಮೇಲಿನ ಜಿಎಸ್‍ಟಿ ಏರಿಕೆ, ಸರ್ಕಾರಿ ಆಸ್ತಿಗಳ ಪರಭಾರೆ ಸೇರಿದಂತೆ ಹಲವು ಮಹತ್ವದ ವಿಚಾರ ಗಳನ್ನು ರಾಹುಲ್‍ಗಾಂಧಿ ತಮ್ಮ ಯಾತ್ರೆ ಉದ್ಧಕ್ಕೂ ಪ್ರಸ್ತಾಪಿಸಲಿದ್ದಾರೆ.

ತಮಿಳುನಾಡು, ತೆಲಂಗಾಣ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ, ದೆಹಲಿ, ಉತ್ತರಪ್ರದೇಶ, ಜಮ್ಮು-ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳನ್ನು ಈ ಯಾತ್ರೆ ಸಂಪರ್ಕಿಸಲಿದೆ. ಹಲವು ಹಿರಿಯ ನಾಯಕರು ಕಾಂಗ್ರೆಸ್ ತೊರೆದ ಸಂಕಷ್ಟದ ನಡುವೆಯೂ ಪಾದಯಾತ್ರೆ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ವಿಶ್ವಾಸ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರದ ಲೋಪಗಳ ವಿರುದ್ಧ ನಡೆಯುತ್ತಿರುವ ಪಾದಯಾತ್ರೆ ಮುಂದಿನ 2024ರ ಲೋಕಸಭೆ ಚುನಾವಣೆಗೆ ತಯಾರಿ ಎಂದು ಭಾವಿಸಲಾಗಿದೆ. ಇಂದು ಬೆಳಗ್ಗೆ ಟ್ವೀಟರ್‍ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್‍ಗಾಂ, ನಾನು ನನ್ನ ತಂದೆಯನ್ನು ದ್ವೇಷ ಮತ್ತು ವಿಭಜನೆಯ ರಾಜಕೀಯಕ್ಕಾಗಿ ಕಳೆದುಕೊಂಡೆ, ಆದರೆ, ನಾನು ಈ ದೇಶದ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿಲ್ಲ ಎಂದು ಹೇಳಿದ್ದಾರೆ.

Post a Comment

Previous Post Next Post