ಹರಿಯಾಣ ಪೊಲೀಸರಿಂದ ಸರಣಿ ದಾಳಿ: 950 ಮಂದಿ ಬಂಧನ

 

ಚಂಡೀಗಡ: ಸರಣಿ ದಾಳಿ ನಡೆಸಿದ ಹರಿಯಾಣ ಪೊಲೀಸರು ದಿನವೊಂದ ರಲ್ಲೇ ಬರೋಬ್ಬರಿ 950 ಮಂದಿಯನ್ನು ಬಂಧಿಸಿದ್ದಾರೆ. 710 ಎಫ್‌ಐಆರ್‌ ಗಳನ್ನು ದಾಖಲಿಸಿದ್ದಾರೆ.

ಪಾತಕ ಕೃತ್ಯ, ಬೀದಿ ಅಪರಾಧ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದವರ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರ ವಿರುದ್ಧ ನಡೆಸಿದ ಕಾರ್ಯಾಚರಣೆ ಇದಾಗಿದೆ ಎಂದು ಡಿಜಿಪಿ ಅಗರ್ವಾಲ್‌ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸುಮಾರು 3,500 ಪೊಲೀಸರು ಪಾಲ್ಗೊಂಡಿದ್ದರು. 645 ತಂಡಗಳಾಗಿ ವಿಭಜನೆಗೊಂಡು ಹಲವಾರು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಈ ವೇಳೆ ಸ್ವಯಂ ಘೋಷಿತ 45 ತಪ್ಪಿತಸ್ಥರನ್ನು ಮತ್ತು ಜಾಮೀನಿನ ಆಧಾರ ದಲ್ಲಿ ಹೊರಗೆ ಉಳಿದಿದ್ದ 34 ಮಂದಿಯನ್ನು ಬಂಧಿಸಲಾಗಿದೆ.

ಪಾನಿಪತ್‌ ಜಿಲ್ಲೆಯಲ್ಲಿ ಅತಿಹೆಚ್ಚು 116 ಮಂದಿಯನ್ನು ಬಂಧಿಸಲಾಗಿದೆ. ಇನ್ನು ಗುರುಗ್ರಾಮದಲ್ಲಿ 108 ಹಾಗೂ ಅಂಬಾಲದಲ್ಲಿ 102 ಮಂದಿಯನ್ನು ಬಂಧಿಸಲಾಗಿದೆ.
Post a Comment

Previous Post Next Post