ನಿಯಮ ಉಲ್ಲಂಘಿಸಿ ದುಬೈ ನಲ್ಲಿ ವಾಸ್ತವ್ಯವಿದ್ದ ವಾದ್ರ ನಡೆಗೆ ಕೋರ್ಟ್ ಕೆಂಡಾಮಂಡಲ

 ಉದ್ಯಮಿ ರಾಬರ್ಟ್ ವಾದ್ರಗೆ ನೀಡಲಾಗಿದ್ದ ಅನುಮತಿಯ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕೆ ದೆಹಲಿಯ ಕೋರ್ಟ್ ಕೆಂಡಾಮಂಡಲವಾಗಿದೆ. 

            ರಾಬರ್ಟ್ ವಾದ್ರಾ

By : Rekha.M
Online Desk

ನವದೆಹಲಿ: ಉದ್ಯಮಿ ರಾಬರ್ಟ್ ವಾದ್ರಗೆ ನೀಡಲಾಗಿದ್ದ ಅನುಮತಿಯ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕೆ ದೆಹಲಿಯ ಕೋರ್ಟ್ ಕೆಂಡಾಮಂಡಲವಾಗಿದೆ. ತಾವು ಅನುಮತಿಯ ಷರತ್ತುಗಳನ್ನು ಮೀರಿ ಆಗಸ್ಟ್ ತಿಂಗಳಲ್ಲಿ ದುಬೈ ನಲ್ಲೇ ಉಳಿಯುವುದಕ್ಕೆ ವೈದ್ಯಕೀಯ ತುರ್ತನ್ನು  ಕಾರಣವನ್ನಾಗಿ ನೀಡಿದ್ದರು.

ಯುಎಇ ಮಾರ್ಗವಾಗಿ ಬ್ರಿಟನ್ ಗೆ ತೆರಳುವಾಗ ವೈದ್ಯಕೀಯ ಕಾರಣಗಳಿಗಾಗಿ ದುಬೈ ನಲ್ಲೇ ಉಳಿದಿದ್ದೆ ಎಂದು ರಾಬರ್ಟ್ ವಾದ್ರ ನೀಡಿರುವ ಕಾರಣವನ್ನು ಕೋರ್ಟ್ ನಿಮಗೆ ನೀಡಿದ್ದ ಅನುಮತಿಯ ಷರತ್ತು ಮತ್ತು ನಿಬಂಧನೆಗಳ ಉಲ್ಲಂಘನೆ ಎಂದು ಹೇಳಿದೆ.

ಕೋರ್ಟ್ ವಾದ್ರಾಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿತ್ತು. ವಾದ್ರ ನೀಡಿರುವ ಕಾರಣಗಳನ್ನು ಕೋರ್ಟ್ ಒಪ್ಪುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ನಾಲ್ಕು ವಾರಗಳ ಕಾಲ ಬ್ರಿಟನ್ ಗೆ ಯುಎಇ, ಸ್ಪೇನ್ ಮತ್ತು ಇಟಾಲಿ ಗಳ ಮೂಲಕ ಪ್ರಯಾಣಕ್ಕೆ ಕೋರ್ಟ್ ಆ.12 ರಂದು ವಾದ್ರಗೆ ಅನುಮತಿ ನೀಡಿತ್ತು.
    Post a Comment

    Previous Post Next Post