ಚೀನಾ ಇನ್ನೂ ಅಸಾಧಾರಣ ಸವಾಲು; ಹಿಂದೂ ಮಹಾಸಾಗರದಲ್ಲಿ ಇರುವಿಕೆ ಹೆಚ್ಚಿಸಿಕೊಂಡಿದೆ: ನೌಕಾ ಮುಖ್ಯಸ್ಥರು

 ಭಾರತದ ಸುತ್ತ ಚೀನಾ ತನ್ನ ಇರುವಿಕೆಯನ್ನು ವಿಸ್ತರಿಸುತ್ತಿದ್ದು, ಪಶ್ಚಿಮದಲ್ಲಿ ಪಾಕಿಸ್ತಾನ ನೌಕಾಪಡೆಯ ಆಧುನೀಕರಣ ಮಾಡಿಕೊಳ್ಳುತ್ತಿದೆ ಎಂದು ಅಡ್ಮಿರಲ್ ಆರ್ ಹರಿ ಕುಮಾರ್ ಹೇಳಿದ್ದಾರೆ. 

                   ನೌಕಾ ಪಡೆ ಮುಖ್ಯಸ್ಥರು

By : Rekha.M
Online  Desk

ನವದೆಹಲಿ: ಭಾರತದ ಸುತ್ತ ಚೀನಾ ತನ್ನ ಇರುವಿಕೆಯನ್ನು ವಿಸ್ತರಿಸುತ್ತಿದ್ದು, ಪಶ್ಚಿಮದಲ್ಲಿ ಪಾಕಿಸ್ತಾನ ನೌಕಾಪಡೆಯ ಆಧುನೀಕರಣ ಮಾಡಿಕೊಳ್ಳುತ್ತಿದೆ ಎಂದು ಅಡ್ಮಿರಲ್ ಆರ್ ಹರಿ ಕುಮಾರ್ ಹೇಳಿದ್ದಾರೆ. 

ಭಾರತ ಎದುರಿಸುತ್ತಿರುವ ಭದ್ರತಾ ಸವಾಲುಗಳ ಬಗ್ಗೆ ಮಾತನಾಡಿರುವ ನೌಕಾಪಡೆಯ ಮುಖ್ಯಸ್ಥರು ಪ್ರತಿದಿನವೂ ಸ್ಪರ್ಧೆ ಎದುರಾಗುತ್ತಿದ್ದು,  ಸಂಭಾವ್ಯ ಎದುರಾಳಿಗಳೊಂದಿಗೆ ಯುದ್ಧವನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. 

ಈ ದೃಷ್ಟಿಯಲ್ಲಿ ಚೀನಾ ಇನ್ನೂ ಅಸಾಧಾರಣ ಸವಾಲಾಗಿ ಉಳಿದಿದ್ದು, ಕೇವಲ ಭೂ ಗಡಿಯಲ್ಲಿ ಅಷ್ಟೇ ಅಲ್ಲದೇ ಜಲ ಪ್ರದೇಶಗಳಲ್ಲೂ ತನ್ನ ಇರುವಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ್ಗಳ್ಳತನ  ವಿರೋಧಿ ಕಾರ್ಯಾಚರಣೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ಮೂಲಕತನ್ನ ನೌಕಾ ಉಪಸ್ಥಿತಿಯನ್ನು ಸಾಮಾನ್ಯವಾಗಿರಿಸುತ್ತಿದೆ ಎಂದು ನೌಕಾ ಪಡೆಯ ಮುಖ್ಯಸ್ಥರು ಹೇಳಿದ್ದಾರೆ. 

ಪಶ್ಚಿಮದಲ್ಲಿ ಪಾಕಿಸ್ತಾನ ತನ್ನ ಆರ್ಥಿಕ ನಿರ್ಬಂಧಗಳ ನಡುವೆಯೂ ಸೇನಾ ಆಧುನೀಕರಣಕ್ಕೆ ಮುಂದಾಗಿದೆ ಪ್ರಮುಖವಾಗಿ ನೌಕಾಪಡೆಯ ಆಧುನೀಕರಣ ಮಾಡಿಕೊಳ್ಳುತ್ತಿದೆ ಎಂದು ಆರ್ ಹರಿ ಕುಮಾರ್ ತಿಳಿಸಿದ್ದಾರೆ. 

ಕಡಲ್ಗಳ್ಳತನ  ವಿರೋಧಿ ಕಾರ್ಯಾಚರಣೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ಕಾರಣ ನೀಡಿ 2008 ರಿಂದ ಚೀನಾ ಹಿಂದೂ ಮಹಾಸಾಗರದಲ್ಲಿ ತನ್ನ ನೌಕಾಪಡೆಗಳ ನಿಯೋಜನೆಯನ್ನು ಪ್ರಾರಂಭಿಸಿತ್ತು. ಅಂದಿನಿಂದ ಇಂದಿನವರೆಗೂ ಹಿಂದೂ ಮಹಾಸಾಗರದಲ್ಲಿ ಚೀನಾ ನೌಕಾಪಡೆಯ ಇರುವಿಕೆಯನ್ನು ಹೊಂದಿದ್ದು ಈಗ ಹೆಚ್ಚಿಸಿಕೊಳ್ಳುತ್ತಿದೆ ಎಂದು ನೌಕಾಪಡೆಯ ಮುಖ್ಯಸ್ಥರು ಹೇಳಿದ್ದಾರೆ. 

ಯಾವುದೇ ಸಮಯದಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ 5-8 ನೌಕಾ ಪಡೆಯ ಯುನಿಟ್ ಗಳು ಕಾರ್ಯನಿರ್ವಹಿಸುತ್ತಿರುತ್ತವೆ. ನಾವು ಅವರತ್ತ ಕಣ್ಣಿಟ್ಟು ಅವರ ಚಟುವಟಿಕೆಗಳೇನು ಎಂಬುದನ್ನು ಗಮನಿಸುತ್ತಿರುತ್ತೇವೆ ಎಂದು ನೌಕಾಪಡೆಯ ಮುಖ್ಯಸ್ಥರು ತಿಳಿಸಿದ್ದಾರೆ.Post a Comment

Previous Post Next Post