ಹುಬ್ಬಳ್ಳಿ: ರಸ್ತೆ ಕಾಮಗಾರಿಗಾಗಿ ಅಗೆದಿದ್ದ ಹೊಂಡಕ್ಕೆ ಬಿದ್ದ ಬೈಕ್ ಸವಾರ; ತಲೆಗೆ ಪೆಟ್ಟು!

 ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ಕೇಶ್ವಾಪುರದ ಹೋಟೆಲ್ ಅನಂತ್ ಎಕ್ಸಿಕ್ಯೂಟಿವ್ ಬಳಿಯ ಸೇಂಟ್ ಮೇರಿಸ್ ಶಾಲೆಯ ಎದುರು ರಸ್ತೆ ಕಾಮಗಾರಿಗಾಗಿ ಅಗೆದಿದ್ದ ಸುಮಾರು 6-8 ಅಡಿ ಆಳದ ಹೊಂಡಕ್ಕೆ ಬೈಕ್ ಸವಾರರೊಬ್ಬರು ಬಿದ್ದಿದ್ದಾರೆ.

                        ಬೈಕ್ ಸವಾರ ಬಿದ್ದ ಹೊಂಡ

By : Rekha.M
Online Desk

ಹುಬ್ಬಳ್ಳಿ:  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ಕೇಶ್ವಾಪುರದ ಹೋಟೆಲ್ ಅನಂತ್ ಎಕ್ಸಿಕ್ಯೂಟಿವ್ ಬಳಿಯ ಸೇಂಟ್ ಮೇರಿಸ್ ಶಾಲೆಯ ಎದುರು ರಸ್ತೆ ಕಾಮಗಾರಿಗಾಗಿ ಅಗೆದಿದ್ದ ಸುಮಾರು 6-8 ಅಡಿ ಆಳದ ಹೊಂಡಕ್ಕೆ ಬೈಕ್ ಸವಾರರೊಬ್ಬರು ಬಿದ್ದಿದ್ದಾರೆ.

ಅವರ ತಲೆಗೆ ಗಾಯವಾಗಿದ್ದು, ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದಾರೆ. ಕಾಮಗಾರಿ ನಡೆಸುವ ಗುತ್ತಿಗೆದಾರರು ಹಾಗೂ ಸಿಬ್ಬಂದಿಗೆ ಸೂಚನಾ ಫಲಕಗಳನ್ನು ಕೂಡ ಹಾಕಿಲ್ಲ. ಹೀಗಾಗಿ ರಸ್ತೆಯಲ್ಲಿರುವ ದೊಡ್ಡ ಗುಂಡಿಯೊಂದರಲ್ಲಿ ಬೈಕ್ ಸವಾರ ಬಿದ್ದಿದ್ದಾನೆ. ಗಾಯಗೊಂಡಿರುವ ವ್ಯಕ್ತಿಯನ್ನು ಸ್ಥಳೀಯರು ಮೇಲೆ ಎತ್ತಿ ಮನೆಗೆ ಕಳುಹಿಸಿದ್ದಾರೆ. ಆದರೆ ಬೈಕ್ ಮೇಲೆ ಎತ್ತಲು ಇನ್ನೂ ಆಗಿಲ್ಲ. ಕಳೆದ ಕೆಲವು ದಿನಗಳಿಂದಲೂ ಹೊಂಡ ತೆರದೇ ಇದೆ.

ಬೇಕಾಬಿಟ್ಟಿಯಾಗಿ ಗುಂಡಿ ತೆಗೆದಿದ್ದು, ಯಾವುದೇ ಬೀದಿ ದೀಪದ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಂತಹದೊಂದು ಅವಘಡ ಸಂಭವಿಸಿದೆ. ಈಗಾಗಲೇ ಸಾಕಷ್ಟು ಜನರು ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದರೂ ಕೂಡ ಪಾಲಿಕೆಯ ಸಿಬ್ಬಂದಿ ಗುಂಡಿ ಮುಚ್ಚುವ ಕಾರ್ಯಕ್ಕೆ ಮಾತ್ರ ಮುಂದಾಗಿಲ್ಲ. ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಸಹಾಯಕ್ಕಾಗಿ ಕೂಗುತ್ತಿರುವುದನ್ನು ಕೇಳಿದ ನಿವಾಸಿಗಳು, ಅವರನ್ನು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿದರು. ಗಾಯಗೊಂಡ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.  ಗುಂಡಿಯ ಬಳಿ ಯಾವುದೇ ಬ್ಯಾರಿಕೇಡ್ ಅಥವಾ ಫಲಕ ಇರಲಿಲ್ಲ ಎಂದು ಇನ್ನೊಬ್ಬ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.  ಆದರೆ ಬ್ಯಾರಿಕೇಡ್ ಹಾಕಿರುವುದಾಗಿ ಹುಬ್ಬಳ್ಳಿ ಧಾರವಾಡ ಪೂರ್ವ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ, ಈ ಸಂಬಂಧ. ಯಾವುದೇ ಪ್ರಕರಣ ದಾಖಲಾಗಿಲ್ಲ.


Post a Comment

Previous Post Next Post