ವಾಯುಪಡೆ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಆರು ಮಂದಿ ಸಿಬ್ಬಂದಿ ವಿರುದ್ಧ ಕೇಸು ದಾಖಲು

 ಜಾಲಹಳ್ಳಿಯ ವಾಯುಪಡೆ ತಾಂತ್ರಿಕ ಮಹಾವಿದ್ಯಾಲಯದ (AFTC) 27ರ ಹರೆಯದ ವಿದ್ಯಾರ್ಥಿ ಅಂಕಿತ್‌ ಕುಮಾರ್‌ ಝಾ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ 302ರ ಅಡಿಯಲ್ಲಿ ಕಾಲೇಜಿನ ಆರು ಮಂದಿ ಸಿಬ್ಬಂದಿ ಮೇಲೆ ಹತ್ಯೆ ಮೊಕದ್ದಮೆ ದಾಖಲಿಸಲಾಗಿದೆ. ಆರು ಶಂಕಿತರು ಏರ್ ಕಮೋಡೋರ್, ಗ್ರೂಪ್ ಕ್ಯಾಪ್ಟನ್ ಮತ್ತು ವಿಂಗ್ ಕಮಾಂಡರ್ ಶ್ರೇಣಿಯವರಾ


ಸಾವಿಗೀಡಾದ ವಿದ್ಯಾರ್ಥಿ

By : Rekha.M
Online Desk

ಬೆಂಗಳೂರು: ಜಾಲಹಳ್ಳಿಯ ವಾಯುಪಡೆ ತಾಂತ್ರಿಕ ಮಹಾವಿದ್ಯಾಲಯದ (AFTC) 27ರ ಹರೆಯದ ವಿದ್ಯಾರ್ಥಿ ಅಂಕಿತ್‌ ಕುಮಾರ್‌ ಝಾ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ 302ರ ಅಡಿಯಲ್ಲಿ ಕಾಲೇಜಿನ ಆರು ಮಂದಿ ಸಿಬ್ಬಂದಿ ಮೇಲೆ ಹತ್ಯೆ ಮೊಕದ್ದಮೆ ದಾಖಲಿಸಲಾಗಿದೆ. ಆರು ಶಂಕಿತರು ಏರ್ ಕಮೋಡೋರ್, ಗ್ರೂಪ್ ಕ್ಯಾಪ್ಟನ್ ಮತ್ತು ವಿಂಗ್ ಕಮಾಂಡರ್ ಶ್ರೇಣಿಯವರಾಗಿದ್ದಾರೆ.

ನಿನ್ನೆ ಗುರುವಾರ ಬೆಳಗಿನ ಜಾವ 2.20ರ ಸುಮಾರಿಗೆ ಪಶ್ಚಿಮ ದೆಹಲಿಯ ಉತ್ತಮ್ ನಗರದ ನಿವಾಸಿಯಾದ ಮೃತನ ಸಹೋದರ ಅಮನ್ ಝಾ ನೀಡಿದ ದೂರಿನ ಆಧಾರದ ಮೇಲೆ ಗಂಗಮ್ಮನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಝಾ ಅವರು ಏಳು ಪುಟಗಳ ಡೆತ್ ನೋಟ್ ನ್ನು ಬರೆದಿಟ್ಟು, ಎಲ್ಲಾ ಆರು ಶಂಕಿತರ ಹೆಸರನ್ನು ಉಲ್ಲೇಖಿಸಿದ್ದಾರೆ. 

ತನಿಖೆ ನಡೆಯುತ್ತಿದೆ. ಯಾವುದೇ ಬಂಧನಗಳು ನಡೆದಿಲ್ಲ. ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆ ವರದಿಯಿಂದ ಸಾವಿಗೆ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ನ್ಯಾಯಾಲಯದ ವಿಚಾರಣೆಯ ನಂತರ ಸೇವೆಯಿಂದ ಬಿಡುಗಡೆಯಾದ ಒಬ್ಬ ತರಬೇತಿ ಅಧಿಕಾರಿ ನಿನ್ನೆ ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಹೇಳಿದ್ದಾರೆ. TNIE ಯೊಂದಿಗೆ ಮಾತನಾಡಿದ ಮೃತನ ಸೋದರ ಸಂಬಂಧಿ ರಿಚಾ ಠಾಕೂರ್, ಝಾ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದರಿಂದ ಅವರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಜುಲೈನಲ್ಲಿ ಅವರನ್ನು ವಜಾಗೊಳಿಸಲಾಯಿತು. ನನಗೆ ಫೋನ್ ಮೂಲಕ ಕರೆದೊಯ್ದಾಗ, ಕೆಲವು ದಾಖಲೆಗಳಿಗೆ ಬಲವಂತವಾಗಿ ಸಹಿ ಮಾಡಲಾಗುತ್ತಿದೆ ಎಂದು ಅಂಕಿತ್ ಹೇಳಿದ್ದರು ಎಂದು ರಿಚಾ ಠಾಕೂರ್ ತಿಳಿಸಿದ್ದಾರೆ.  ಸಂಜೆ 4.30ರ ಸುಮಾರಿಗೆ ಕೊಚ್ಚಿಯಲ್ಲಿದ್ದ ತನ್ನ ಸಹೋದರ ಅಮನ್‌ಗೆ ಸಂದೇಶ ರವಾನಿಸಿ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.

ಸಾವಿನ ಬಗ್ಗೆ ಎಎಫ್‌ಟಿಸಿ ಅಧಿಕಾರಿಗಳು ನಮಗೆ ಮಾಹಿತಿ ನೀಡಿಲ್ಲ. ಪದೇ ಪದೇ ಫೋನ್ ಮಾಡಿದರೂ ಉತ್ತರಿಸದ ನಂತರ, ಸಂಜೆ 7 ಗಂಟೆಗೆ ಹೋಗಿ ನೋಡಿದಾಗ ಮೃತಪಟ್ಟಿರುವುದು ಗೊತ್ತಾಯಿತು ಎಂದರು. ಇಬ್ಬರು AFTC ಸಿಬ್ಬಂದಿಗಳು ದೇಹವನ್ನು ಇರಿಸಲಾಗಿದ್ದ ಚಿಕ್ಕ ವೈದ್ಯಕೀಯ ಕೋಣೆಗೆ ನಮ್ಮನ್ನು ಕರೆದೊಯ್ದರು. ನಂತರ ಎಂಎಸ್ ರಾಮಯ್ಯ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು. “ಬೆಳಿಗ್ಗೆ 4.47 ರ ಸುಮಾರಿಗೆ ಎಎಫ್‌ಟಿಸಿ ಅಧಿಕಾರಿಗಳು ಆತ್ಮಹತ್ಯೆ ಪತ್ರ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಗಂಗಮ್ಮನಗುಡಿ ಪೊಲೀಸರಿಗೆ ಹಸ್ತಾಂತರಿಸಿದರು, ಅವರು ಅದನ್ನು ಹಿಂದಿಯಲ್ಲಿದ್ದಂತೆ ಓದಲು ನಮಗೆ ನೀಡಿದರು. ಟಿಪ್ಪಣಿಯಲ್ಲಿ ಕಿರುಕುಳ ಮತ್ತು ಚಿತ್ರಹಿಂಸೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಠಾಕೂರ್ ವಿವರಿಸಿದ್ದಾರೆ.

 Post a Comment

Previous Post Next Post