ರಾಜಸ್ಥಾನ: ಅನೈತಿಕ ಸಂಬಂಧದ ಆರೋಪದ ಮೇಲೆ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಥಳಿತ, ಕೂದಲು ಕತ್ತರಿಸಿದ ಸ್ಥಳೀಯರು

 ಮಹಿಳೆಯ ಜೊತೆಗಿನ ಅನೈತಿಕ ಸಂಬಂಧದ ಕಾರಣಕ್ಕೆ ಸ್ಥಳೀಯರು 25 ವರ್ಷದ ಯುವಕನನ್ನು ವಿವಸ್ತ್ರಗೊಳಿಸಿ, ಥಳಿಸಿ, ಆತನ ಕೂದಲನ್ನು ಕತ್ತರಿಸಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ನಡೆದಿದೆ.

                       ಪ್ರಾತಿನಿಧಿಕ ಚಿತ್ರ

By : Rekha.M
Online Desk

ಜೈಪುರ: ಮಹಿಳೆಯ ಜೊತೆಗಿನ ಅನೈತಿಕ ಸಂಬಂಧದ ಕಾರಣಕ್ಕೆ ಸ್ಥಳೀಯರು 25 ವರ್ಷದ ಯುವಕನನ್ನು ವಿವಸ್ತ್ರಗೊಳಿಸಿ, ಥಳಿಸಿ, ಆತನ ಕೂದಲನ್ನು ಕತ್ತರಿಸಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ನಡೆದಿದೆ.

ಸುಮಾರು ಮೂರು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೊ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ಈ ಸಂಬಂಧ ಸಂತ್ರಸ್ತ ದೂರು ದಾಖಲಿಸದ ಕಾರಣ, ಪೊಲೀಸರೇ ಸ್ವಯಂಪ್ರೇರಿತವಾಗಿ ಆರು ಜನರ ವಿರುದ್ಧ ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮ್ಮದೇ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಭೇಟಿಯಾಗಲು ಬಂದಾಗ ಸ್ಥಳೀಯರು ಮುಖ್ತಿಯಾರ್ ಖಾನ್ ಅವರನ್ನು ಹಿಡಿದಿದ್ದಾರೆ ಎಂದು ಮೋಹನ್‌ಗಢ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಭವಾನಿ ಸಿಂಗ್ ಹೇಳಿದ್ದಾರೆ

    ಜನ ಸಮೂಹ ಸಂತ್ರಸ್ತನ ಮೋಟಾರ್ ಸೈಕಲ್‌ಗೂ ಬೆಂಕಿ ಹಚ್ಚಿದೆ.

    ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯನ್ನು ಭೇಟಿಯಾಗಲು ಆಗಾಗ್ಗೆ ಈ ಪ್ರದೇಶಕ್ಕೆ ಬರುತ್ತಿದ್ದ ಖಾನ್ ಮೇಲೆ ಸ್ಥಳೀಯರು ಕಣ್ಣಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.    Post a Comment

    Previous Post Next Post