ಆರ್ ಅಶೋಕ್ : ಬೆಂಗಳೂರಿನಲ್ಲಿ ಮಳೆಯಿಂದ ಸಂಭವಿಸಿದ ಅನಾಹುತಕ್ಕೆಲ್ಲ ದಾಖಲೆ ಸಮೇತ ಕಾರಣ ಯಾರೆಂದು ತೋರಿಸುತ್ತೇನೆ

 ಕಂದಾಯ ಸಚಿವನಾಗಿ, ವಿಪತ್ತು ನಿರ್ವಹಣೆಯ ಮುಖ್ಯಸ್ಥನಾಗಿ ಇಂದು ಅಥವಾ ನಾಳೆ ವಿಧಾನಸಭೆಯಲ್ಲಿ ಬೆಂಗಳೂರಿನ ಮಳೆ ಅನಾಹುತ ವಿಚಾರ ಕುರಿತು ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತೇನೆ, ಆ ಸಂದರ್ಭದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

                      ಆರ್ ಅಶೋಕ್

By : Rekha.M
Online Desk

ಬೆಂಗಳೂರು: ಕಂದಾಯ ಸಚಿವನಾಗಿ, ವಿಪತ್ತು ನಿರ್ವಹಣೆಯ ಮುಖ್ಯಸ್ಥನಾಗಿ ಇಂದು ಅಥವಾ ನಾಳೆ ವಿಧಾನಸಭೆಯಲ್ಲಿ ಬೆಂಗಳೂರಿನ ಮಳೆ ಅನಾಹುತ ವಿಚಾರ ಕುರಿತು ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತೇನೆ, ಆ ಸಂದರ್ಭದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಭಾರೀ ಮಳೆಯಾದಾಗ ಪ್ರವಾಹ ಉಂಟಾಗುವ ಬಗ್ಗೆ ಅದಕ್ಕೆ ಮೂಲ ಕಾರಣರು ಯಾರು ಎಂದು ತೋರಿಸುತ್ತೇನೆ ಎಂದರು. 

ಬೆಂಗಳೂರು ಪ್ರವಾಹಕ್ಕೆ ಮೂಲ ಕಾರಣವೇನು, ಸರಿಯಾದ ತೀರ್ಮಾನ ತೆಗೆದುಕೊಳ್ಳದೆ ಅಕ್ರಮ ಮಾಡಿದ್ದರಿಂದ, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕೆರೆಗಳನ್ನು, ರಾಜಕಾಲುವೆಗಳನ್ನು ಮುಚ್ಚಿದ್ದರಿಂದ ಇವತ್ತು ಬೆಂಗಳೂರಿನಲ್ಲಿ ಈ ಪರಿಸ್ಥಿತಿ ಉಂಟಾಗಿದೆ. ಅದಕ್ಕೆ ಯಾವ ಯಾವ ಕಾಲದಲ್ಲಿ ಯಾವ ಸರ್ಕಾರ, ಯಾವ ಮಂತ್ರಿಗಳು, ಮುಖ್ಯಮಂತ್ರಿಗಳು ಅನುಮೋದನೆ ಕೊಟ್ಟಿದ್ದಾರೆ ಅವೆಲ್ಲಾ ದಾಖಲೆಗಳು ನನ್ನ ಬಳಿ ಇವೆ. ಅದನ್ನು ಬಿಡುಗಡೆ ಮಾಡಿ ಸತ್ಯಾಸತ್ಯತೆಯನ್ನು ಜನತೆಯ ಮುಂದಿಡುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.

ಸ್ಪೀಕರ್ ಜೊತೆ ಮಾತನಾಡಿ ಸಮಯ ಸಿಕ್ಕಾಗ ವಿಧಾನಸಭೆಯಲ್ಲಿ ಉತ್ತರ ಕೊಡುತ್ತೇನೆ ಎಂದರು.


Post a Comment

Previous Post Next Post