ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಚಿರತೆಗೆ ವ್ಯಕ್ತಿ ಬಲಿ

 ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಚಿರತೆ ದಾಳಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

                    ನರಹಂತಕ ಚಿರತೆ

By : Rekha.M
Online Desk

ಬೆಂಗಳೂರು: ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಚಿರತೆ ದಾಳಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅರಣ್ಯಾಧಿಕಾರಿಗಳ ಪ್ರಕಾರ, ಈ ಘಟನೆ ಅಭಯಾರಣ್ಯ ವ್ಯಾಪ್ತಿಯ ಹಣ್ಣೂರು ರೇಂಜ್ ನ ಕಾವೆಯಂದುಡ್ಡಿ ಗ್ರಾಮದಲ್ಲಿ ನಡೆದಿದೆ.

40 ವರ್ಷದ ಸಂತ್ರಸ್ತ ವ್ಯಕ್ತಿ ಈ ಚಿರತೆ ದಾಳಿ ನಡೆದಾಗ, ಆತ ಬಿಡಾಡಿ ದನಗಳನ್ನು ಮೇಯಿಸಲು ಹೋಗಿದ್ದರು. ಸಂಜೆಯಾದರೂ ಕಾಡಿನ ಗಡಿಯಿಂದ ಬಾರದೇ ಇದ್ದಾಗ ಮಂದಿ ಭಯಗೊಂಡಿದ್ದಾರೆ. ಶುಕ್ರವಾರದಂದು ಬೆಳಿಗ್ಗೆ ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ, ವ್ಯಕ್ತಿಯ ಶವ ಪತ್ತೆಯಾಗಿದೆ. ಆತನ ಗುರುತು ಇನ್ನಷ್ಟೇ ದೃಢಪಡಬೇಕಿದೆ.

ಇದೇ ಮೊದಲ ಬಾರಿಗೆ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಈ ರೀತಿಯ ಘಟನೆ ನಡೆದಿದೆ. ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ.

Post a Comment

Previous Post Next Post