ಸಿಇಟಿ ಪುನರಾವರ್ತಿತರಿಗೆ ಆರ್ ಎಂಎಸ್ ಕಾರ್ಯವಿಧಾನ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅನುಮತಿ

 ಸಿಇಟಿ ಪುನರಾವರ್ತಿತರಿಗೆ ಆರ್ ಎಂಎಸ್ ಕಾರ್ಯವಿಧಾನವನ್ನು ಪರಿಗಣಿಸಲು ಆದೇಶ ಹೊರಡಿಸುವುದಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. 

          ಕರ್ನಾಟಕ ಹೈಕೋರ್ಟ್

By : Rekha.M
Online Desk

ಬೆಂಗಳೂರು: ಸಿಇಟಿ ಪುನರಾವರ್ತಿತರಿಗೆ ಆರ್ ಎಂಎಸ್ ಕಾರ್ಯವಿಧಾನವನ್ನು ಪರಿಗಣಿಸಲು ಆದೇಶ ಹೊರಡಿಸುವುದಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. 

2021 ರಲ್ಲಿ ದ್ವಿತೀಯ ಪಿಯು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಪೈಕಿ ಹಲವು ಮಂದಿ ಈ ಬಾರಿಯೂ ಸಿಇಟಿ ಬರೆದಿದ್ದು, ರ್ಯಾಂಕಿಂಗ್ ಗೆ ಸಂಬಂಧಿಸಿದಂತೆ ಈ ವರ್ಷ ಸಿಇಟಿ ಬರೆದಿದ್ದ  ವಿದ್ಯಾರ್ಥಿಗಳು ಹಾಗೂ ಸಿಇಟಿ ಪುನರಾವರ್ತಿತರ ನಡುವೆ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ಕಂಡುಕೊಳ್ಳುವುದಕ್ಕಾಗಿ ರೂಟ್ ಮೀನ್ ಸ್ಕ್ವೇರ್ (ಆರ್ ಎಂಎಸ್) ಕಾರ್ಯವಿಧಾನವನ್ನು ತಜ್ಞರ ಸಮಿತಿ ಸಲಹೆ ನೀಡಿತ್ತು. 

ಏನಿದು ಆರ್ ಎಂಎಸ್ ಕಾರ್ಯವಿಧಾನ?: 

 2021 ರಲ್ಲಿ ದ್ವಿತೀಯ ಪಿಯು ಪಾಸಾದ ವಿದ್ಯಾರ್ಥಿಗಳಿಗೆ ಸರಾಸರಿಯಾಗಿ ಭೌತಶಾಸ್ತ್ರದಲ್ಲಿ 6 ಅಂಕ, ರಸಾಯನಶಾಸ್ತ್ರ ಮತ್ತು ಗಣಿತದಲ್ಲಿ 7 ಅಂಕಗಳನ್ನು ಕಡಿತಗೊಳಿಸುವುದು ಹಾಗೂ CET-2022 ಗಾಗಿ ಹೊಸದಾಗಿ ಶ್ರೇಯಾಂಕ ಘೋಷಿಸುವುದಕ್ಕಾಗಿ 50:50 ಅನುಪಾತಕ್ಕಾಗಿ ಅವರ ದ್ವಿತೀಯ ಪಿಯು ಮಾರ್ಕ್ಸ್ ನ್ನು ಸಿಇಟಿ-2022 ರ ಅಂಕಗಳೊಂದಿಗೆ ಪರಿಗಣಿಸುವುದನ್ನು ಆರ್ ಎಂಎಸ್ ಕಾರ್ಯವಿಧಾನ ಎಂದು ಹೇಳಲಾಗುತ್ತದೆ.

    ಆರ್ ಎಂಎಸ್ ಕಾರ್ಯವಿಧಾನ ಅನುಸರಿಸಿ, ಸಾಮಾನ್ಯೀಕರಣ ಪ್ರಕ್ರಿಯೆಯ ಬಳಿಕ ಕೆಇಎ ಸಿಇಟಿ-2022 ರಲ್ಲಿ ಸಿಇಟಿ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳಿಗೂ (ಪುನರಾವರ್ತಿತರನ್ನೂ ಸೇರಿ)  ಹೊಸದಾಗಿ ಶ್ರೇಯಾಂಕವನ್ನು ನೀಡುತ್ತದೆ. ಹಂಗಾಮಿ ಮುಖ್ಯನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ನ್ಯಾ.ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ, ಸಮಿತಿ ಶಿಫಾರಸ್ಸು ಮಾಡಿರುವ "ಸಾಮಾನ್ಯೀಕರಣ" ಪ್ರಕ್ರಿಯೆಗೆ 2021 ನೇ ಸಾಲಿಕ ದ್ವಿತೀಯ ಪಿಯು ವಿದ್ಯಾರ್ಥಿಗಳು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿದೆ.

    ವರದಿಯನ್ನು ಅಧ್ಯಯನ ಮಾಡುವುದಕ್ಕೂ ಮುನ್ನ ಕೋರ್ಟ್ ಕೆಇಎ ಹಾಗೂ ಸರ್ಕಾರ ವಿಲಕ್ಷಣ ಸವಾಲಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಕೋರ್ಟ್ ಮೌಖಿಕವಾಗಿ ಮೆಚ್ಚುಗೆ ವ್ಯಕ್ತಿಪಡಿಸಿತ್ತು. ಅಂಕ ಸಾಮಾನ್ಯೀಕರಣ ಮಾಡುವ ಪ್ರಕ್ರಿಯೆಯನ್ನು ಸಿಇಟಿ ಶ್ರೇಯಾಂಕವನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಮಾತ್ರ ಬಳಕೆ ಮಾಡಬೇಕು ಬೇರೆ ಉದ್ದೇಶಗಳಿಗೆ ಬಳಕೆಯಾಗಬಾರದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.


    Post a Comment

    Previous Post Next Post