ಬೆಂಗಳೂರು: ಪ್ರೀತಿಸುತ್ತಿದ್ದ ಯುವಕ-ಯುವತಿ ಶವ ಮನೆಯಲ್ಲಿ ಪತ್ತೆ; ಸಾವಿನ ಕಾರಣ ನಿಗೂಢ!

 ಹೆಬ್ಬಗೋಡಿಯ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಯುವಕ-ಯುವತಿ ಶವ ಪತ್ತೆಯಾಗಿದ್ದು, ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

                ಸಾಂದರ್ಭಿಕ ಚಿತ್ರ

By : Rekha.M
Online Desk

ಬೆಂಗಳೂರು: ಹೆಬ್ಬಗೋಡಿಯ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಯುವಕ-ಯುವತಿ ಶವ ಪತ್ತೆಯಾಗಿದ್ದು, ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಚೌಡ ಸಮುದ್ರದ ನಿವಾಸಿಗಳಾದ ಮಲ್ಲಿಕಾರ್ಜುನ್ (27),‌ ನೇತ್ರಾವತಿ ಮೃತ ದುರ್ದೈವಿಗಳು.

ಕಾಲೇಜು ದಿನಗಳಿಂದಲೇ ಮಲ್ಲಿಕಾರ್ಜುನ್, ನೇತ್ರಾವತಿ ಪ್ರೀತಿಸುತ್ತಿದ್ದರು. ಖಾಸಗೀ ಕಂಪನಿಯಲ್ಲಿ ಕೆಲಸ‌ ಮಾಡುತ್ತಿದ್ದ ನೇತ್ರಾವತಿ ಹೆಬ್ಬಗೋಡಿ ಸಮೀಪದ ‌ಮನೆಯಲ್ಲಿ ಬಾಡಿಗೆಗಿದ್ದರು. ಮಲ್ಲಿಕಾರ್ಜುನ್ ತನ್ನ ಊರಿನಲ್ಲೇ ಪೈಂಟಿಂಗ್ ಕೆಲಸ ಮಾಡುತ್ತಿದ್ದ. ಆಗಾಗ ನೇತ್ರ ಭೇಟಿ ಆಗಲು ಮನೆಗೆ ಬರ್ತಿದ್ದ.

ಇದೇ ತಿಂಗಳ 19 ರಂದು ಇಬ್ಬರ ಮಧ್ಯೆ ಜಗಳ ನಡೆದಿತ್ತು. ಪ್ರೀತಿಗಾಗಿ ಶುರುವಾದ ಜಗಳ ಸಾವಿನಲ್ಲಿ‌ ಅಂತ್ಯವಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಮಲ್ಲಿಕಾರ್ಜುನ್ ಮತ್ತು ನೇತ್ರಾವತಿ ಶವ ಪತ್ತೆಯಾಗಿದೆ. ಮಲ್ಲಿಕಾರ್ಜುನ್ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದಾನೆ, ನೇತ್ರಾವತಿ ವಾಂತಿ ಮಾಡಿಕೊಂಡು ನೆಲದ ಮೇಲೆ ಬಿದ್ದಿದ್ದಾಳೆ.  ಸಂಬಂಧವನ್ನು ಮುಂದುವರಿಸಲು ಇಷ್ಟಪಡದ ಕಾರಣ ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ.
Post a Comment

Previous Post Next Post