ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಅವ್ಯವಹಾರ; ಲೋಕಾಯುಕ್ತಕ್ಕೆ ದೂರು ದಾಖಲು

 ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬೆಳಗಾವಿ, ಉಪಕುಲಪತಿ ಡಾ.ಕರಿಸಿದ್ದಪ್ಪ ಮತ್ತು ಕುಲಸಚಿವ ಪ್ರೊ.ಆನಂದ ದೇಶಪಾಂಡೆ ವಿರುದ್ಧ ಹೈಕೋರ್ಟ್‌ನ ಇಬ್ಬರು ವಕೀಲರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

              ಬೆಳಗಾವಿ ವಿಟಿಯು

By : Rekha.M
Online Desk

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬೆಳಗಾವಿ, ಉಪಕುಲಪತಿ ಡಾ.ಕರಿಸಿದ್ದಪ್ಪ ಮತ್ತು ಕುಲಸಚಿವ ಪ್ರೊ.ಆನಂದ ದೇಶಪಾಂಡೆ ವಿರುದ್ಧ ಹೈಕೋರ್ಟ್‌ನ ಇಬ್ಬರು ವಕೀಲರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ವಿಶ್ವವಿದ್ಯಾಲಯದ ಕುಲಪತಿಯ ಅಧಿಕಾರ ಅವಧಿ ಎರಡು ತಿಂಗಳಿಗಿಂತ ಕಡಿಮೆ ಇದ್ದರೆ, ಅವರು ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಬಾರದು ಮತ್ತು ಹಣಕಾಸು ವ್ಯವಹಾರ ನಡೆಸಬಾರದು ಎಂಬುದು ಸರ್ಕಾರದ ನಿಯಮ. ಈ ಬಗ್ಗೆ ರಾಜ್ಯಪಾಲರ ಸುತ್ತೋಲೆ ಕೂಡ ಇದೆ.

ಆದರೆ, ವಿಟಿಯು ಹಾಲಿ ಕುಲಪತಿ ಪ್ರೊ.ಕರಿಸಿದ್ಧಪ್ಪ ಅವರ ಅವಧಿ ಸೆ. 30ಕ್ಕೆ ಕೊನೆಗೊಳ್ಳಲಿದೆ. ಆದರೂ ಅವರು ವಿವಿಧ ಕಾಮಗಾರಿಗಳಿಗೆಂದು  35 ಕೋಟಿ ರು. ಬಿಲ್‌ ಪಾವತಿ ಮಾಡಿದ್ದಾರೆ. ಕುಲಸಚಿವ ಆನಂದ ದೇಶಪಾಂಡೆ ಅವರು ಎಲ್ಲ ಚೆಕ್‌ಗಳಿಗೂ ಸಹಿ ಹಾಕಿದ್ದಾರೆ. ಇದರಲ್ಲಿ ಅಕ್ರಮ ನಡೆದಿದ್ದು, ತನಿಖೆ ಮಾಡಬೇಕಾಗಿ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ’ ಎಂದು ವಕೀಲ ರಾಮಕೃಷ್ಣ ತಿಳಿಸಿದ್ದಾರೆ.

ವಿಸಿ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಶೋಧನಾ ಸಮಿತಿಯು ಶನಿವಾರ ಬೆಂಗಳೂರಿನಲ್ಲಿ ತನ್ನ ನಿರ್ಣಾಯಕ ಸಭೆ ನಡೆಸಲು ನಿರ್ಧರಿಸಿರುವ ಮೂರು ದಿನಗಳ ಮೊದಲು ಮಂಗಳವಾರ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ.

ವಿವಿಯ ಇಬ್ಬರು ಉನ್ನತಾಧಿಕಾರಿಗಳು ನೂತನ ವಿಸಿ ಆಯ್ಕೆ ಮಾಡಲು ಹೊರಟಿರುವುದು ಗೊತ್ತಿದ್ದರೂ ರಾಜ್ಯಪಾಲರ ಸುತ್ತೋಲೆ ಹಾಗೂ ಸರ್ಕಾರಿ ಆದೇಶ ಉಲ್ಲಂಘಿಸಿ ಅಪಾರ ಪ್ರಮಾಣದ ಹಣ ಬಿಡುಗಡೆ ಮಾಡಿದ್ದಾರೆ ಎಂದು ವಕೀಲರಾದ ಡಿ.ಎನ್.ರಾಮಕೃಷ್ಣ ಮತ್ತು ಜಗದೀಶ್ ದೂರಿನಲ್ಲಿ ತಿಳಿಸಿದ್ದಾರೆ.

ನಮ್ಮ ಹಕ್ಕುಗಳನ್ನು ಬೆಂಬಲಿಸುವ ಎಲ್ಲಾ ಸಂಬಂಧಿತ ದಾಖಲೆಗಳನ್ನು ನಾವು ಸಲ್ಲಿಸಿದ್ದೇವೆ. ಇಲ್ಲಿಯವರೆಗೆ, ನಮ್ಮ ಬಳಿ 35 ಕೋಟಿ ರೂಪಾಯಿ ಬಿಡುಗಡೆಗೆ ಸಂಬಂಧಿಸಿದ ದಾಖಲೆಗಳಿವೆ. ಇತ್ತೀಚಿನ ದಿನಗಳಲ್ಲಿ ವಿಟಿಯು ಬಿಡುಗಡೆ ಮಾಡಿದ 40 ಕೋಟಿ ರೂಪಾಯಿಗಳ ಇತರ ಬಿಲ್‌ಗಳ ವಿವರಗಳಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಅವರು ಹೇಳಿದರು. ವಿಶ್ವವಿದ್ಯಾನಿಲಯದ ಪರವಾಗಿ ದೇಶಪಾಂಡೆ ಅವರು ಸಹಿ ಮಾಡಿದ ಚೆಕ್‌ಗಳ ಮೂಲಕ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಈ ಎಲ್ಲ ಪಾವತಿಗಳು ಹಿಂದಿನ ನಿರ್ಣಯದ ಪ್ರಕಾರ ಮಾಡಿದವು. ಎಲ್ಲವೂ ಕಾರ್ಯಕಾರಿ ಪರಿಷತ್‌ನಿಂದ ಅನುಮೋದನೆಗೊಂಡಿವೆ. ನಾನು ಕಳೆದ ಎರಡು ತಿಂಗಳಲ್ಲಿ ಯಾವುದೇ ಹೊಸ ನೀತಿ– ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ವಿಶ್ವವಿದ್ಯಾಲಯದ ಎಲ್ಲ ಕ್ರಮಗಳು ರಾಜ್ಯಪಾಲರ ಆದೇಶದಂತೆಯೇ ಕ್ರಮಬದ್ಧವಾಗಿವೆ. ವಿಟಿಯು ಮೇಲೆ ಮಾಡಿದ ಆರೋಪಗಳು ಸುಳ್ಳುವಿವಿ  ತಿಳಿಸಿದೆ.
Post a Comment

Previous Post Next Post