ದಾರಿ ತಪ್ಪಿಸುವ ಸುದ್ದಿ, ಯಾವುದೇ ಬೇಸರವಿಲ್ಲ: ಎನ್‌ಸಿಪಿ ಸಮಾವೇಶದಲ್ಲಿ ಅರ್ಧಕ್ಕೆ ಹೊರ ನಡೆದ ಬಗ್ಗೆ ಅಜಿತ್ ಪವಾರ್ ಸ್ಪಷ್ಟನೆ

 ಎನ್‌ಸಿಪಿ ರಾಷ್ಟ್ರೀಯ ಸಮಾವೇಶದಲ್ಲಿ ಭಾಷಣ ಮಾಡದಯೇ ಅರ್ಧಕ್ಕೆ ಹೊರ ನಡೆದ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮಾಜಿ ಡಿಸಿಎಂ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು, “ಮಾಧ್ಯಮಗಳು ಜನರ ದಾರಿತಪ್ಪಿಸುತ್ತಿವೆ.

                       ಅಜಿತ್ ಪವಾರ್

By : Rekha.M
Online Desk

ಮುಂಬೈ: ಎನ್‌ಸಿಪಿ ರಾಷ್ಟ್ರೀಯ ಸಮಾವೇಶದಲ್ಲಿ ಭಾಷಣ ಮಾಡದಯೇ ಅರ್ಧಕ್ಕೆ ಹೊರ ನಡೆದ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮಾಜಿ ಡಿಸಿಎಂ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು, “ಮಾಧ್ಯಮಗಳು ಜನರ ದಾರಿತಪ್ಪಿಸುತ್ತಿವೆ. ನಾನು ಅಷ್ಟೇ ಅಲ್ಲ ಸಮಾವೇಶದಲ್ಲಿ ಅನೇಕ ನಾಯಕರು ಮಾತನಾಡಲಿಲ್ಲ. ನಾನು ಮರಾಠಿ ಮಾಧ್ಯಮದೊಂದಿಗೆ ಮಾತನಾಡಿ ಸಂಪೂರ್ಣ ಹೇಳಿಕೆ ನೀಡಿದ್ದೇನೆ. ನನಗೆ ಯಾವುದೇ ಬೇಸರ ಇಲ್ಲ ಮತ್ತು ನಮ್ಮ ಪಕ್ಷದಲ್ಲಿ ಯಾರಿಗೂ ಅಸಮಾಧಾನ ಇಲ್ಲ ಎಂದು ಸೋಮವಾರ ಹೇಳಿದ್ದಾರೆ.

ಅಜಿತ್ ಪವಾರ್ ಅವರು ಪಕ್ಷದ ಉನ್ನತ ನಾಯಕರಲ್ಲಿ ಒಬ್ಬರಾಗಿದ್ದರೂ ಎನ್‌ಸಿಪಿಯ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡುವ ಅವಕಾಶವನ್ನು ಭಾನುವಾರ ತಪ್ಪಿಸಿಕೊಂಡರು. ಅವರು ಪಕ್ಷದ ವರಿಷ್ಠ ಶರದ್ ಪವಾರ್ ಅವರ ಸಮ್ಮುಖದಲ್ಲಿಯೇ ಅರ್ಧಕ್ಕೆ ಹೊರ ನಡೆದರು.
 
ಪಕ್ಷದ ನಾಯಕ ಜಯಂತ್ ಪಾಟೀಲ್ ಅವರಿಗೆ ಮಾತನಾಡಲು ಅವಕಾಶ ನೀಡಿದ ಕೆಲವೇ ಕ್ಷಣಗಳಲ್ಲಿ ಪವಾರ್ ಅವರು ವೇದಿಕೆಯಿಂದ ನಿರ್ಗಮಿಸಿದರು. ಇದು ಪಕ್ಷದಲ್ಲಿ ಬಿರುಕು ಮೂಡಿಸಿದೆ ಎಂಬ ವದಂತಿಯನ್ನು ಹುಟ್ಟುಹಾಕಿತ್ತು.
 
ರಾಷ್ಟ್ರೀಯ ಮಟ್ಟದ ಸಭೆಯಾದ ಕಾರಣ ಸಭೆಯಲ್ಲಿ ಮಾತನಾಡಲಿಲ್ಲ ಎಂದು ಮಹಾರಾಷ್ಟ್ರದ ನಾಯಕರು ನಂತರ ಸ್ಪಷ್ಟಪಡಿಸಿದ್ದಾರೆ.

ಇನ್ನು ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ 2024 ರ ಚುನಾವಣೆಯನ್ನು ಬದಲಾಯಿಸುತ್ತದೆಯೇ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪವಾರ್, "ಕಾಂಗ್ರೆಸ್ ಸ್ವತಂತ್ರವಾಗಿ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದೆ. ಇದು ಯುಪಿಎನ ಭಾರತ್ ಜೋಡೋ ಯಾತ್ರೆ ಅಲ್ಲ. ಆದರೆ ಇದು ಸುದೀರ್ಘ ಯಾತ್ರೆ" ಎಂದು ಹೇಳಿದರು.

Post a Comment

Previous Post Next Post