ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸುವಂತೆ ಗೋವಾ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಲಿದೆ ಎಂದು ಗೋವಾ ಸಿಎಂ ಸಾವಂತ್ ಹೇಳಿದ್ದಾರೆ.
ಸೋನಾಲಿ ಪೋಗಟ್
Online Desk
ಪಣಜಿ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸುವಂತೆ ಗೋವಾ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಲಿದೆ ಎಂದು ಗೋವಾ ಸಿಎಂ ಸಾವಂತ್ ಹೇಳಿದ್ದಾರೆ.
ಹರ್ಯಾಣದ ಹಿಸಾರ್ ಮೂಲದ ಬಿಜೆಪಿ ನಾಯಕಿ ಫೋಗಟ್ (43) ಕಳೆದ ತಿಂಗಳು ಗೋವಾದಲ್ಲಿ ಮೃತಪಟ್ಟಿದ್ದರು ಹಾಗೂ ಆಕೆಯ ಸಾವು ಅಸಹಜವಾದುದ್ದು ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ. ಗೋವಾ ಪೊಲೀಸರು ಅತ್ಯುತ್ತಮ ತನಿಖೆ ನಡೆಸಿದ್ದು ಮಹತ್ವದ ಸುಳಿವುಗಳನ್ನು ಪಡೆದಿದ್ದಾರೆ.
ಹರ್ಯಾಣ ಹಾಗೂ ಸೋನಾಲಿ ಫೋಗಟ್ ಪುತ್ರಿಯ ಬೇಡಿಕೆಯ ಹಿನ್ನೆಲೆಯಲ್ಲಿ ನಾವು ಈ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸುವಂತೆ ಗೃಹ ಸಚಿವಾಲಯಕ್ಕೆ ಮನವಿ ಮಾಡುತ್ತೇವೆ ಎಂದು ಸಾವಂತ್ ಹೇಳಿದ್ದಾರೆ. ಫೋಗಟ್ ಸಹಾಯಕರೂ ಸೇರಿದಂತೆ ಪೊಲೀಸರು ಈ ಪ್ರಕರಣದಲ್ಲಿ ಐವರನ್ನು ಬಂಧಿಸಿದ್ದಾರೆ.
Post a Comment