ಹೆಮ್ಮೆಯ ಪುನೀತ್ ರಾಜಕುಮಾರ್ ಅವರ ಜನ್ಮ ದಿನ ಮಾರ್ಚ್ ೧೭ , ಸ್ಫೂರ್ತಿ ದಿನವಾಗಿ ಆಚರಿಸಲು ಸರ್ಕಾರ ನಿರ್ಧಾರ

ಯುವಕರ ಪಾಲಿಗೆ ಸ್ಪೂರ್ತಿಯಾಗಿದ್ದ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಅತ್ಯುನ್ನತ ಗೌರವ ಸಿಗುತ್ತಿದೆ.  ಅವರ ಜನ್ಮ ದಿನವಾದ ಮಾರ್ಚ್ 17ನ್ನು ಇನ್ನು ಮುಂದೆ ಸ್ಪೂರ್ತಿ ದಿನವಾಗಿ ಸರ್ಕಾರದ ವತಿಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ.

ಪುನೀತ್ ರಾಜ್ ಕುಮಾರ್

By : Rekha.M
Online Desk

ಬೆಂಗಳೂರು: ಅಕ್ಟೋಬರ್ 29 ಬಂದರೆ ಪವರ್ ಸ್ಟಾರ್  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷ ಕಳೆಯಲಿದೆ. ಆದರೂ ಅವರ ನೆನಪು ಮಾತ್ರ ಕಿಂಚಿತ್ತೂ ಮಾಸಿಲ್ಲ. ಕನ್ನಡಿಗರ ಮನೆ ಮನಗಳಲ್ಲಿ ಅವರು ಚಿರಸ್ಥಾಯಿಯಾಗಿ ನೆಲೆಸಿದ್ದಾರೆ.

ವೈಯಕ್ತಿಕ ಹಾಗೂ ಸಾಮಾಜಿಕ ಕಾರ್ಯಗಳಿಂದಾಗಿ ದೇಶದೆಲ್ಲೆಡೆ ಅಪಾರ ಜನರ ಪ್ರೀತಿ ಗಳಿಸಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಗೌರವಗಳು ಮುಂದುವರೆದಿವೆ.

ಯುವಕರ ಪಾಲಿಗೆ ಸ್ಪೂರ್ತಿಯಾಗಿದ್ದ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಅತ್ಯುನ್ನತ ಗೌರವ ಸಿಗುತ್ತಿದೆ.  ಅವರ ಜನ್ಮ ದಿನವಾದ ಮಾರ್ಚ್ 17ನ್ನು ಇನ್ನು ಮುಂದೆ ಸ್ಪೂರ್ತಿ ದಿನವಾಗಿ ಸರ್ಕಾರದ ವತಿಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್, ಅಪ್ಪು ಜನ್ಮದಿನ, ಮಾರ್ಚ್ 17  ಇನ್ನು ಮುಂದೆ   ಸ್ಪೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ. 
Post a Comment

Previous Post Next Post