ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣ ಎನ್ನಲಾದ ಸಿರಪ್ ಗಳು ಭಾರತದಲ್ಲಿ ಮಾರಾಟವಾಗಿಲ್ಲ: ಕೇಂದ್ರ ಸರ್ಕಾರ

 ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣ ಎನ್ನಲಾದ ಸಿರಪ್ ಗಳು ಭಾರತದಲ್ಲಿ ಮಾರಾಟವಾಗಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟನೆ ನೀಡಿದೆ.

           ಸಂಗ್ರಹ ಚಿತ್ರ

By : Rekha.M
Online Desk

ನವದೆಹಲಿ: ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣ ಎನ್ನಲಾದ ಸಿರಪ್ ಗಳು ಭಾರತದಲ್ಲಿ ಮಾರಾಟವಾಗಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟನೆ ನೀಡಿದೆ.

ಭಾರತದ 4 ಶೀತ ಹಾಗೂ ಕೆಮ್ಮಿನ ಸಿರಪ್‌ಗಳು ಗ್ಯಾಂಬಿಯಾದ 66 ಮಕ್ಕಳ ಸಾವಿಗೆ ಕಾರಣವಾಗಿವೆ ಹಾಗೂ ಉತ್ಪನ್ನಗಳನ್ನು ಬಳಸಿದವರಲ್ಲಿ ಮೂತ್ರಪಿಂಡದ ಗಾಯಗಳು ಕಂಡುಬಂದಿವೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆ ಬೆನ್ನಲ್ಲೇ ಈ ಕುರಿತು ತನಿಖೆಗೆ ಆದೇಶ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣ ಎನ್ನಲಾದ ಸಿರಪ್ ಗಳು ಭಾರತದಲ್ಲಿ ಮಾರಾಟವಾಗಿಲ್ಲ ಅಥವಾ ಮಾರಾಟ ಮಾಡಲಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, 'ವಿಶ್ವ ಆರೋಗ್ಯ ಸಂಸ್ಥೆಯು ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಸಂಬಂಧಿಸಿದ ಕೆಮ್ಮು ಸಿರಪ್‌ಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಉತ್ಪನ್ನಗಳನ್ನು ರಫ್ತಿಗಾಗಿ ಮಾತ್ರ ತಯಾರಿಸಲಾಗುತ್ತಿದೆ. ಇವುಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗಿಲ್ಲ ಎಂದು ಹೇಳಿದೆ.

ಎಲ್ಲಾ ನಾಲ್ಕು ಔಷಧಿಗಳಿಗಾಗಿ ಹರ್ಯಾಣ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಅದೇ ಬ್ಯಾಚ್‌ನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಫಲಿತಾಂಶಗಳು "ಮುಂದಿನ ಕ್ರಮಕ್ಕೆ ಮಾರ್ಗದರ್ಶನ ನೀಡುತ್ತವೆ ಮತ್ತು ಸ್ವೀಕರಿಸಿದ/ಸ್ವೀಕರಿಸಬೇಕಾದ ಒಳಹರಿವಿನ ಬಗ್ಗೆ ಸ್ಪಷ್ಟತೆಯನ್ನು ತರುತ್ತವೆ" ಎಂದು ಸಚಿವಾಲಯ ಹೇಳಿದೆ.

ಅಂತೆಯೇ ವಿವಾದಿತ ಸಾವುಗಳ ಪ್ರಕರಣದಲ್ಲಿ ಸಿರಪ್ ನ ಪಾತ್ರದ ಕುರಿತು ಆರೋಪ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಕೋರಿ ವರದಿ ಹಂಚಿಕೊಳ್ಳುವಂತೆ ಮನವಿ ಮಾಡಿದೆ. ಯಾವುದೇ ಉತ್ಪನ್ನಗಳನ್ನು ಅವುಗಳ ಬಳಕೆಯನ್ನು ಅನುಮತಿಸುವ ಮೊದಲು ಸಾಮಾನ್ಯವಾಗಿ ದೇಶಗಳನ್ನು ಅವುಗಳನ್ನು ಪರೀಕ್ಷಿಸಿ ಬಳಿಕ ಆಮದು ಮಾಡಿಕೊಳ್ಳುತ್ತವೆ ಎಂದು ಸಚಿವಾಲಯ ಹೇಳಿದೆ. ಅಂತೆಯೇ ಮಕ್ಕಳ ಸಾವಿಗೆ ಕಾರಣ ಎಂಬ ಆರೋಪ ಎಲ್ಲಾ ಖಂಡಗಳಿಗೆ, ವಿಶೇಷವಾಗಿ ಆಫ್ರಿಕಾಕ್ಕೆ ಔಷಧಿಗಳನ್ನು ಪೂರೈಸುವ "ವಿಶ್ವದ ಔಷಧಾಲಯ" ಎಂಬ ಭಾರತದ ಇಮೇಜ್‌ಗೆ ಹೊಡೆತವಾಗಲಿದೆ ಎಂದು ಸಚಿವಾಲಯ ಆತಂಕ ವ್ಯಕ್ತಪಡಿಸಿದೆ.

ನವೆಂಬರ್ 1990 ರಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಮೇಡನ್, ಸಿರಪ್ ಅನ್ನು ಗ್ಯಾಂಬಿಯಾಕ್ಕೆ ಮಾತ್ರ ತಯಾರಿಸಿ ರಫ್ತು ಮಾಡಿತು ಎಂದು ಭಾರತೀಯ ಆರೋಗ್ಯ ಸಚಿವಾಲಯ ತಿಳಿಸಿದೆ. ತನ್ನ ವೆಬ್‌ಸೈಟ್‌ನಲ್ಲಿ ಮೇಡನ್ ಹೇಳುವಂತೆ ತಾನು ಕುಂಡ್ಲಿ ಮತ್ತು ಪಾಣಿಪತ್‌ನಲ್ಲಿ ಎರಡು ಉತ್ಪಾದನಾ ಘಟಕಗಳನ್ನು ಹೊಂದಿದ್ದು ಎರಡೂ ಹರ್ಯಾಣ-ದೆಹಲಿಯ ಬಳಿ ಇದೆ ಮತ್ತು ಇತ್ತೀಚೆಗೆ ಇನ್ನೊಂದ ಘಟಕವನ್ನು ಸ್ಥಾಪಿಸಲಾಗಿದೆ. ಮೇಡನ್  ಸಂಸ್ಥೆಯ ಮೂಲಗಳ ಪ್ರಕಾರ ಮೇಡನ್ 2.2 ಮಿಲಿಯನ್ ಸಿರಪ್ ಬಾಟಲಿಗಳು, 600 ಮಿಲಿಯನ್ ಕ್ಯಾಪ್ಸುಲ್‌ಗಳು, 18 ಮಿಲಿಯನ್ ಇಂಜೆಕ್ಷನ್‌ಗಳು, 300,000 ಆಯಿಂಟ್‌ಮೆಂಟ್ ಟ್ಯೂಬ್‌ಗಳು ಮತ್ತು 1.2 ಬಿಲಿಯನ್ ಟ್ಯಾಬ್ಲೆಟ್‌ಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

ಮೇಡನ್ ತನ್ನ ವೆಬ್‌ಸೈಟ್‌ನಲ್ಲಿ ತನ್ನ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡುವುದಾಗಿ ಮತ್ತು ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳಿಗೆ ರಫ್ತು ಮಾಡುವುದಾಗಿ ಹೇಳುತ್ತಿದೆ, ಆದರೂ ಆರೋಗ್ಯ ಸಚಿವಾಲಯ ಪ್ರಸ್ತುತ ಭಾರತದಲ್ಲಿ ಮಾರಾಟ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
 


Post a Comment

Previous Post Next Post