ಕಥುವಾದಲ್ಲಿ 'ಐ ಲವ್ ಪಾಕಿಸ್ತಾನ್' ಸಂದೇಶದ ಬಲೂನ್ ಪತ್ತೆ: ಹಲವು ಅನುಮಾನಗಳಿಗೆ ದಾರಿ!

 ವಿಮಾನದ ಆಕಾರದ ಬಲೂನ್ ಮೇಲೆ 'ಐ ಲವ್ ಪಾಕಿಸ್ತಾನ್' ಎಂಬ ಸಂದೇಶ ಬರೆದಿದ್ದು ಇದನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ಬೆಳಗ್ಗೆ ವಶಪಡಿಸಿಕೊಂಡಿದ್ದಾರೆ. 

ಬಲೂನ್

By : Rekha.M
Online Desk

ಜಮ್ಮು ಮತ್ತು ಕಾಶ್ಮೀರ: ವಿಮಾನದ ಆಕಾರದ ಬಲೂನ್ ಮೇಲೆ 'ಐ ಲವ್ ಪಾಕಿಸ್ತಾನ್' ಎಂಬ ಸಂದೇಶ ಬರೆದಿದ್ದು ಇದನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ಬೆಳಗ್ಗೆ ವಶಪಡಿಸಿಕೊಂಡಿದ್ದಾರೆ. 

ಮೂಲಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದು ಹಳದಿ ಬಣ್ಣದ ಬಲೂನ್‌ನಲ್ಲಿ ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ 'ಐ ಲವ್ ಪಾಕಿಸ್ತಾನ್' ಎಂದು ಬರೆಯಲಾಗಿದೆ.

ಕಥುವಾ ಜಿಲ್ಲೆಯ ಚಾಮ್ ಬಾಗ್ ಪ್ರದೇಶದ ಬಳಿ ಬಲೂನ್ ಪತ್ತೆಯಾಗಿತ್ತು. ನಂತರ ಪೊಲೀಸರು ಈ ಪ್ರದೇಶದಲ್ಲಿ ಹುಟುಕಾಟ ನಡೆಸಿದ್ದು ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ.

ಈ ಪ್ರದೇಶದಲ್ಲಿ ಆತಂಕ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಕೆಲ ಸ್ಥಳೀಯರು ಇದನ್ನು ಮಾಡಿದ್ದಾರೆಯೇ ಅಥವಾ ಇದು ಗಡಿಯಾಚೆಯಿಂದ ಬಂದಿದೆಯೇ ಎಂದು ಪರಿಶೀಲಿಸಲು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. 

Post a Comment

Previous Post Next Post