ರೈಲಿಗೆ ಒಡೆಯರ್ ಹೆಸರು ; ಸ್ವಾಗತಿಸಿದ ಯದುವೀರ್

 ಬೆಂಗಳೂರು ಮೈಸೂರು ನಗರಗಳ ನಡುವೆ ದಿನಪ್ರತಿ ಸಂಚರಿಸುವ  ಎಕ್ಸ್ ಪ್ರೆಸ್ ರೈಲಿಗೆ ಒಡೆಯರ್ ಅವರ ಹೆಸರು ಇಟ್ಟಿರುವುದನ್ನು ಒಡೆಯರ್ ವಂಶಸ್ಥ ಯದುವೀರ್  ಕೃಷ್ಣದತ್ತ ಚಾಮರಾಜ ಒಡೆಯರ್ ಸ್ವಾಗತಿಸಿದ್ದಾರೆ.

                  ಯದುವೀರ್

By : Rekha.M
Online Desk

ಮೈಸೂರು: ಬೆಂಗಳೂರು ಮೈಸೂರು ನಗರಗಳ ನಡುವೆ ದಿನಪ್ರತಿ ಸಂಚರಿಸುವ  ಎಕ್ಸ್ ಪ್ರೆಸ್ ರೈಲಿಗೆ ಒಡೆಯರ್ ಅವರ ಹೆಸರು ಇಟ್ಟಿರುವುದನ್ನು ಒಡೆಯರ್ ವಂಶಸ್ಥ ಯದುವೀರ್  ಕೃಷ್ಣದತ್ತ ಚಾಮರಾಜ ಒಡೆಯರ್ ಸ್ವಾಗತಿಸಿದ್ದಾರೆ.

ಅವರಿಂದು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.  ಹತ್ತನೇ ಚಾಮರಾಜ ಒಡೆಯರ್ ಕಾಲದಿಂದಲೂ ರೈಲ್ವೆ ಅಭಿವೃದ್ಧಿಯಾಗಿದೆ.  ಮೈಸೂರು – ಬೆಂಗಳೂರು ನಡುವೆ ಸಂಚರಿಸುವ ರೈಲಿಗೆ ಒಡೆಯರ್ ಎಂದು ಹೆಸರಿಟ್ಟಿರುವುದು ಸೂಕ್ತ ನಿರ್ಧಾರ ಎಂದರು.

ಬಹಳ ವರ್ಷಗಳಿಂದ ಸಂಚರಿಸುತ್ತಿರುವ ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರು ಬದಲಿಸಿ ಒಡೆಯರ್ ಎಂದು ಹೆಸರಿಡಬೇಕೆಂದು ಮೈಸೂರು ಸಂಸದ  ಆಗ್ರಹಿಸಿದ್ದರು. ಇದರಿಂದಾಗಿ ಕೇಂದ್ರ ರೈಲ್ವೆ ಇಲಾಖೆ ಟಿಪ್ಪು ಹೆಸರು ತೆಗೆದು ಅದೇ ರೈಲಿಗೆ ಒಡೆಯರ್ ಹೆಸರು ಇಟ್ಟಿದೆ.


Post a Comment

Previous Post Next Post