ರಾಜ್ಯದ ಯುವಕರ ಜೀವನವನ್ನು ನಾಶಮಾಡಲು 'ಅರ್ಬನ್ ನಕ್ಸಲರಿಗೆ' ಗುಜರಾತ್ ಅವಕಾಶ ನೀಡಲ್ಲ: ಪ್ರಧಾನಿ ಮೋದಿ

 'ಅರ್ಬನ್ ನಕ್ಸಲರು' ತಮ್ಮ ನೋಟವನ್ನು ಬದಲಿಸಿಕೊಳ್ಳುವ ಮೂಲಕ ಗುಜರಾತ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ರಾಜ್ಯವು ಯುವಕರ ಜೀವನವನ್ನು ನಾಶಮಾಡಲು ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

          ನರೇಂದ್ರ ಮೋದಿ

By : Rekha.M


ಭರೂಚ್: 'ಅರ್ಬನ್ ನಕ್ಸಲರು' ತಮ್ಮ ನೋಟವನ್ನು ಬದಲಿಸಿಕೊಳ್ಳುವ ಮೂಲಕ ಗುಜರಾತ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ರಾಜ್ಯವು ಯುವಕರ ಜೀವನವನ್ನು ನಾಶಮಾಡಲು ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ದೇಶದ ಮೊದಲ ಬೃಹತ್ ಡ್ರಗ್ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಪ್ರಧಾನಿ ಮಾತನಾಡಿದರು.

'ಅರ್ಬನ್ (ನಗರ) ನಕ್ಸಲರು ಹೊಸ ರೂಪದೊಂದಿಗೆ ರಾಜ್ಯ ಪ್ರವೇಶಿಸಲು ಯತ್ನಿಸುತ್ತಿದ್ದಾರೆ. ಅವರು ತಮ್ಮ ವೇಷಭೂಷಣಗಳನ್ನು ಬದಲಾಯಿಸಿದ್ದಾರೆ. ಅವರನ್ನು ಅನುಸರಿಸಲು ನಮ್ಮ ಮುಗ್ಧ ಮತ್ತು ಶಕ್ತಿಯುತ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ' ಎಂದು ಮೋದಿ ಅವರು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಗುಜರಾತ್‌ಗೆ ಕಾಲಿಡಲು ಪ್ರಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಮೇಲೆ ಮುಸುಕಿನ ದಾಳಿ ನಡೆಸಿದರು.


Post a Comment

Previous Post Next Post