ಕೋಲಾರ: ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಕ್ಕೆ ದಲಿತ ವ್ಯಕ್ತಿಯ ಮೇಲೆ ಮೇಲ್ಜಾತಿಯವರಿಂದ ಹಲ್ಲೆ, ಇಬ್ಬರ ಬಂಧನ

 ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಕ್ಕಾಗಿ ದಲಿತ ವ್ಯಕ್ತಿಯೊಬ್ಬನ ಮೇಲೆ ಮೇಲ್ಜಾತಿ ಸಮುದಾಯದ 15ಕ್ಕೂ ಹೆಚ್ಚು ಮಂದಿಗೆ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ನಡೆದಿದೆ. ಬೂದಿಕೋಟೆ ಪೊಲೀಸರು ಹಲ್ಲೆ ಮತ್ತು ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇತರರಿಗಾಗಿ ಶೋಧ ನಡೆಯುತ್ತಿದೆ.

             ಸಾಂದರ್ಭಿಕ ಚಿತ್ರ

By : Rekha.M
Online Desk

ಕೋಲಾರ: ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಕ್ಕಾಗಿ ದಲಿತ ವ್ಯಕ್ತಿಯೊಬ್ಬನ ಮೇಲೆ ಮೇಲ್ಜಾತಿ ಸಮುದಾಯದ 15ಕ್ಕೂ ಹೆಚ್ಚು ಮಂದಿಗೆ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ನಡೆದಿದೆ. ಬೂದಿಕೋಟೆ ಪೊಲೀಸರು ಹಲ್ಲೆ ಮತ್ತು ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇತರರಿಗಾಗಿ ಶೋಧ ನಡೆಯುತ್ತಿದೆ.

ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ಎಸ್ಪಿ ಧರಣಿದೇವಿ ಅವರು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. 

ಗೊಟ್ಟಲೂರು ನಿವಾಸಿ ಮುನಿರಾಜು ಎಂಬುವರು ದೂರು ಸಲ್ಲಿಸಿದ್ದು, ಗಂಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ತಮ್ಮ ಗ್ರಾಮದ ಪಕ್ಕದ ದೊಡ್ಡಾಪುರಕ್ಕೆ ಹೋಗಿದ್ದರು. ಆ ವೇಳೆ ದೊಡ್ಡಾಪುರ ನಿವಾಸಿ ಚಂದ್ರಪ್ಪ, ಆತನ ಹತ್ತಿರದ ಸಂಬಂಧಿ ಸಿದ್ದಯ್ಯ ಹಾಗೂ 15 ಮಂದಿ ಮೇಲ್ಜಾತಿಯ ಜನರು ಹಲ್ಲೆ ನಡೆಸಿದ್ದು, ತಲೆಗೆ ರಕ್ತಗಾಯವಾಗಿತ್ತು.

                      ಮಾಲೂರು ತಾಲೂಕಿನ ಉಳ್ಳೇರಹಳ್ಳಿ ಗ್ರಾಮದಲ್ಲಿ ದೇವರನ್ನು ಮುಟ್ಟಿ ದಂಡ ವಿಧಿಸಿದ 15 ವರ್ಷದ ಬಾಲಕನ ತಾಯಿ  ಅವರನ್ನುಕಾಂಗ್ರೆಸ್                                                                               ನಾಯಕ  ರಾಹುಲ್ ಗಾಂಧಿ ಭೇಟಿಯಾದರು

ಅವರ ದೂರಿನ ಮೇರೆಗೆ ಬೂದಿಕೋಟೆ ಪೊಲೀಸರು ಚಂದ್ರಪ್ಪ ಮತ್ತು ಸಿದ್ದಯ್ಯನನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಮಾಲೂರು ತಾಲೂಕಿನ ಉಳ್ಳೇರಹಳ್ಳಿಯಲ್ಲಿ ಗ್ರಾಮ ದೇವತೆ ಬೂತಮ್ಮನ ಮೂರ್ತಿಯನ್ನು ಮುಟ್ಟಿದ ದಲಿತ ಬಾಲಕನ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ವಿಧಿಸಿದ್ದು, ಇನ್ನೊಂದು ಘಟನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮಸ್ಥರು ಮೇಲ್ವರ್ಗದ ಹುಡುಗಿಯ ಚಿನ್ನಾಭರಣಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತ ಬಾಲಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ನಡೆದಿತ್ತು.

ಕೋಲಾರ ದೇವನಹಳ್ಳಿಯಲ್ಲಿ ದಲಿತರು ವಾಸಿಸುವ ಪ್ರದೇಶದಲ್ಲಿ ಶ್ರೀ ಕಾಟೀರಮ್ಮ ಮತ್ತು ಗಂಗಮ್ಮ ದೇವರ ಮೆರವಣಿಗೆ ಮಾಡಲು ಮೇಲ್ಜಾತಿ ಜನರು ನಿರಾಕರಿಸಿದರು. ಘಟನೆಯು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು, ಇದರಲ್ಲಿ ಹಲವರು ಗಾಯಗೊಂಡು ನಂತರ ಪೊಲೀಸರು ಮಧ್ಯೆಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತರಬೇಕಾಯಿತು.


Post a Comment

Previous Post Next Post