ಇಸ್ಪಿಟ್ ಆಡುತ್ತಿದ್ದ ವೇಳೆ ತೀವ್ರ ಹೃದಯಾಘಾತವಾಗಿ ಜೆಡಿಎಸ್ ಮುಖಂಡ ಸಾವು

 ಸಾವು ಯಾವ ಕ್ಷಣದಲ್ಲಿಯಾದರೂ, ಹೇಗೆ ಬೇಕಾದರೂ ಬರಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಸ್ನೇಹಿತರ ಜೊತೆ ಇಸ್ಪೀಟ್ ಆಡುತ್ತಿದ್ದಾಗಲೇ ಜೆಡಿಎಸ್ ಮುಖಂಡರೊಬ್ಬರು ಕುಳಿತಲ್ಲಿಂದ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 

               ಆಶ್ವಥ್ ಚಿಯಾ ಸ್ನೇಹಿತರ ಜೊತೆ ಇಸ್ಪಿಟ್ ಆಡುತ್ತಿರುವುದು

By : Rekha.M
Online Desk

ಮೈಸೂರು: ಸಾವು ಯಾವ ಕ್ಷಣದಲ್ಲಿಯಾದರೂ, ಹೇಗೆ ಬೇಕಾದರೂ ಬರಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಸ್ನೇಹಿತರ ಜೊತೆ ಇಸ್ಪೀಟ್ ಆಡುತ್ತಿದ್ದಾಗಲೇ ಜೆಡಿಎಸ್ ಮುಖಂಡರೊಬ್ಬರು ಕುಳಿತಲ್ಲಿಂದ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 

ಆಶ್ವಥ್ ಚಿಯಾ ಮೃತ ವ್ಯಕ್ತಿ. ಇವರು ಮೈಸೂರಿನ ಜೆಡಿಎಸ್ ಮುಖಂಡರಾಗಿದ್ದರು. ಮೈಸೂರು- ಬೆಂಗಳೂರು ರಸ್ತೆಯ ರಿಕ್ರಿಯೇಶನ್ ಕ್ಲಬ್‍ನಲ್ಲಿ ನಿನ್ನೆ ಇಸ್ಪಿಟ್ ಆಡುತ್ತಿದ್ದಾಗ ಘಟನೆ ನಡೆದಿದೆ. ಕ್ಲಬ್‍ನಲ್ಲಿ ಸ್ನೇಹಿತರ ಜೊತೆ ಕುಳಿತು ಇಸ್ಪೀಟ್ ಆಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಕುಸಿದರು. ಅಲ್ಲಿದ್ದ ಸ್ನೇಹಿತರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. 

ಅಶ್ವಥ್ ಕೊನೆಯ ಕ್ಷಣಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅಶ್ವಥ್ ಮೈಸೂರಿನ ಮಂಡಿ ಮೊಹಲ್ಲಾದ ನಿವಾಸಿಯಾಗಿದ್ದಾರೆ.
Post a Comment

Previous Post Next Post