10 ವರ್ಷಗಳ ಹಿಂದೆ ಪಡೆದ ಆಧಾರ್ ಕಾರ್ಡ್ ದಾಖಲೆ ನವೀಕರಿಸಿ: ಯುಐಡಿಎಐ

 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದು, ಅಂದಿನಿಂದ ಇದುವರೆಗೆ ತಮ್ಮ ವಿವರಗಳನ್ನು ನವೀಕರಿಸದಿರುವವರು ತಮ್ಮ ಗುರುತಿನ ಮತ್ತು ವಿಳಾಸದ ದಾಖಲೆಗಳನ್ನು ನವೀಕರಿಸುವಂತೆ ಯುಐಡಿಎಐ ಮಂಗಳವಾರ ಮನವಿ ಮಾಡಿದೆ.

            ಸಾಂದರ್ಭಿಕ ಚಿತ್ರ

By : Rekha.M
Online Desk

ನವದೆಹಲಿ: 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದು, ಅಂದಿನಿಂದ ಇದುವರೆಗೆ ತಮ್ಮ ವಿವರಗಳನ್ನು ನವೀಕರಿಸದಿರುವವರು ತಮ್ಮ ಗುರುತಿನ ಮತ್ತು ವಿಳಾಸದ ದಾಖಲೆಗಳನ್ನು ನವೀಕರಿಸುವಂತೆ ಯುಐಡಿಎಐ ಮಂಗಳವಾರ ಮನವಿ ಮಾಡಿದೆ.

ಆಧಾರ್ ಸಂಖ್ಯೆಗಳನ್ನು ನೀಡುವ ಸರ್ಕಾರಿ ಸಂಸ್ಥೆ ಯುಐಡಿಎಐ, ಆಧಾರ್ ಅಪ್‌ಡೇಟ್ ಅನ್ನು ಆನ್‌ಲೈನ್‌ನಲ್ಲಿ ಮತ್ತು ಆಧಾರ್ ಕೇಂದ್ರಗಳಲ್ಲಿ ಮಾಡಬಹುದು ಎಂದು ಹೇಳಿದೆ.

10 ವರ್ಷಗಳ ಹಿಂದೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಪಡೆದ ಮತ್ತು ಇದುವರೆಗೆ ಯಾವುದೇ ನವೀಕರಣ ಮಾಡದವರು ತಮ್ಮ ದಾಖಲೆಗಳನ್ನು ನವೀಕರಿಸಬೇಕು ಎಂದು ಯುಐಡಿಎಐ "ವಿನಂತಿ" ಮಾಡಿದೆ. 

ಆದಾಗ್ಯೂ, ಈ ನವೀಕರಣವು ಕಡ್ಡಾಯವಾಗಿದೆಯೇ ಎಂಬುದನ್ನು ಮಾತ್ರ ಯುಐಡಿಎಐ ಸ್ಪಷ್ಟಪಡಿಸಿಲ್ಲ.

ಅಗತ್ಯ ಶುಲ್ಕವನ್ನು ಪಾವತಿಸಿದ ನಂತರ ಗುರುತಿನ ದಾಖಲೆ ಮತ್ತು ನಿವಾಸದ ಪುರಾವೆಗಳ ನವೀಕರಣ ಮಾಡಲಾಗುವುದು. ನನ್ನ ಆಧಾರ್ ಪೋರ್ಟಲ್‌ನಲ್ಲಿ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನವೀಕರಿಸಬಹುದು ಎಂದು ಯುಐಡಿಎಐ ತಿಳಿಸಿದೆ.


Post a Comment

Previous Post Next Post