ತೆಲಂಗಾಣದಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಶಾಲಾ ಪ್ರಾಂಶುಪಾಲರ ಚಾಲಕನಿಂದ ಅತ್ಯಾಚಾರ

 ಬಂಜಾರಾ ಹಿಲ್ಸ್‌ನಲ್ಲಿ ಶಿಶುವಿಹಾರದ ನಾಲ್ಕು ವರ್ಷದ ವಿದ್ಯಾರ್ಥಿನಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಭಯಾನಕ ಸುದ್ದಿ ಮಂಗಳವಾರ ಲಭ್ಯವಾಗಿದೆ.

                   ಸಾಂದರ್ಭಿಕ ಚಿತ್ರ

By : Rekha .M
Online Desk

ಹೈದರಾಬಾದ್: ಬಂಜಾರಾ ಹಿಲ್ಸ್‌ನಲ್ಲಿ ಶಿಶುವಿಹಾರದ ನಾಲ್ಕು ವರ್ಷದ ವಿದ್ಯಾರ್ಥಿನಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಭಯಾನಕ ಸುದ್ದಿ ಮಂಗಳವಾರ ಲಭ್ಯವಾಗಿದೆ.

ಆರೋಪಿ ರಜಿನಿ ಕುಮಾರ್ ಬಿಎಸ್‌ಡಿ ಡಿಎವಿ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಎರಡು ತಿಂಗಳಿನಿಂದ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ ಮತ್ತು ಸೋಮವಾರ ಪ್ರಾಂಶುಪಾಲರ ಚೇಂಬರ್ ಎದುರು ಇರುವ ಲ್ಯಾಬ್‌ನಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ವರದಿಯಾಗಿದೆ.

ಬಾಲಕಿಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು, ಅಪರಾಧವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದಾನೆ.

ಬಾಲಕಿಯ ಪೋಷಕರ ಪ್ರಕಾರ, ಸಂತ್ರಸ್ತೆ ಈಗಾಗಲೇ ಕಳೆದ ಎರಡು ತಿಂಗಳಿನಿಂದ ಖಿನ್ನತೆಗೆ ಜಾರಿದ್ದಳು, ಏಕೆಂದರೆ ಈ ಅವಧಿಯಲ್ಲಿ ಅವಳು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು.  ಬಳಿಕ ನಾಲ್ಕು ವರ್ಷದ ಮಗು ಸೋಮವಾರ ತನ್ನ ತಾಯಿಗೆ ಈ ವಿಚಾರವನ್ನು ತಿಳಿಸಿದೆ. ಮಂಗಳವಾರ ಆಕೆಯನ್ನು ಶಾಲೆಗೆ ಕರೆದೊಯ್ದಾಗ ಆರೋಪಿಯನ್ನು ತೋರಿಸಿದ್ದಾಳೆ. ಸಂತ್ರಸ್ತೆಯ ಪೋಷಕರು ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದು, ಮಂಗಳವಾರ ಶಾಲೆಯಲ್ಲಿಯೇ ಆರೋಪಿಯನ್ನು ಬಂಧಿಸಿದ್ದಾರೆ.

ಈಮಧ್ಯೆ, ಸಂತ್ರಸ್ತೆಯನ್ನು ಸಮಾಲೋಚನೆಗಾಗಿ ಭರೋಸಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಆರೋಪಿಯಿಂದ ತನಗಾಗಿರುವ ದೌರ್ಜನ್ಯದ ಕುರಿತು ತಿಳಿಸಿದ್ದಾಳೆ. ನಂತರ ಆಕೆಯನ್ನು ಮನೆಗೆ ಕರೆದೊಯ್ಯಲಾಗಿದೆ. ಆರೋಪಿ ರಜನಿ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಜಿನಿ ಶಾಲೆಯಲ್ಲಿ ಪ್ರಯೋಗಾಲಯಗಳನ್ನು ನಿರ್ವಹಿಸುವುದು ಮತ್ತು ಸಿಬ್ಬಂದಿಗೆ ಇತರ ಕೆಲಸಗಳನ್ನು ಮಾಡಿಕೊಡುತ್ತಿದ್ದ. ಈ ವೇಳೆ ಸಂತ್ರಸ್ತೆಯ ಸಂಪರ್ಕಕ್ಕೆ ಬಂದಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತರ ಪೋಷಕರು ಸಹ ರಜಿನಿ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದ್ದರು ಮತ್ತು ಈ ವಿಷಯದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲಾಗಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ತನಿಖೆಯ ಭಾಗವಾಗಿ, ರಜಿನಿ ಇತರ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ್ದಾನೆಯೇ ಅಥವಾ ನಿಂದನೆ ಮಾಡಿದ್ದಾನೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಸಂತ್ರಸ್ತೆಯ ಪೋಷಕರು ಕಳೆದ ಎರಡು ತಿಂಗಳಿನಿಂದ ಆಕೆ ಖಿನ್ನತೆಗೆ ಒಳಗಾಗಿದ್ದನ್ನು ಗಮನಿಸಿರುವುದಾಗಿ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸುವಾಗ, ಇತರ ವಿದ್ಯಾರ್ಥಿಗಳ ಪೋಷಕರು ಆರೋಪಿಗೆ ಥಳಿಸಿದ್ದಾರೆ ಮತ್ತು ಹೇಯ ಕೃತ್ಯಕ್ಕೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ.
Post a Comment

Previous Post Next Post