ಬಸವಲಿಂಗಶ್ರೀ ವಿರುದ್ಧ ನಡೆದಿತ್ತು ಹನಿಟ್ರ್ಯಾಪ್; ಹೆಣ್ಣಿನ ಮೋಹ ಪಾಶಕ್ಕೆ ಸಿಲುಕಿದ್ರಾ ಸ್ವಾಮೀಜಿ? ಶ್ರೀಗಳ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್!

 ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸೋಮವಾರ ಅನುಮಾನಾಸ್ಪದವಾಗಿ ಮಠದ ಪೂಜಾಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ ಪ್ರಕರಣ ಬಯಲಾಗಿತ್ತು.

                  ಬಂಡೇಮಠದ ಬಸವಲಿಂಗ ಸ್ವಾಮೀಜಿ

By : Rekha.M
Online Desk

ರಾಮನಗರ: ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸೋಮವಾರ ಅನುಮಾನಾಸ್ಪದವಾಗಿ ಮಠದ ಪೂಜಾಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ ಪ್ರಕರಣ ಬಯಲಾಗಿತ್ತು.

ಸ್ವಾಮೀಜಿ ಐದು ಪುಟದ ಡೆತ್ ನೋಟ್ ಬರೆದಿದ್ದಾರೆ, ಮೂರು ಪುಟ ಪೊಲೀಸರಿಗೂ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ. ಡೆತ್‌ನೋಟ್‌ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿವೆ.

ಶ್ರೀ ಕಂಚುಗಲ್ ಬಂಡೇಮಠದ ಗುರು ಮಡಿವಾಳೇಶ್ವರ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ(45) ಮಠದಲ್ಲೇ ನೇಣಿಗೆ ಶರಣಾಗಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿರುವ ಬಂಡೇಮಠದಲ್ಲಿ ನೇಣಿಗೆ ಶರಣಾಗಿದ್ದಾರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದೀಗ ಸ್ವಾಮೀಜಿಯವರು ಡೆತ್ ನೋಟು ಬರೆದಿಟ್ಟಿರುವುದು, ಮರ್ಯಾದೆಗಂಜಿ ಆತ್ಮಹತ್ಯೆ ಎಂದು ಉಲ್ಲೇಖಿಸಿರುವುದು ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದೆ.

ಸ್ವಾಮೀಜಿ ವಿರುದ್ಧ  ಹನಿಟ್ರ್ಯಾಪ್​​​ ನಡೆದಿದ್ದು,  ಡೆತ್​​ನೋಟ್​ನಲ್ಲಿ ಸಂಚಿನ ಬಗ್ಗೆ  ಕುಂಚಗಲ್​​​​ ಬಂಡೆಮಠದ ಬಸವಲಿಂಗಶ್ರೀ  ಸ್ವಾಮೀಜಿ ಬರೆದಿದ್ದಾರೆ.  ಕುಂಚಗಲ್​​​​ ಸ್ವಾಮೀಜಿ ಕೆಳಗಿಳಿಸಲು ನಡೆದಿತ್ತು ಮಾಸ್ಟರ್ ಪ್ಲಾನ್, ಮಾಸ್ಟರ್ ಪ್ಲಾನ್ ಹಿಂದೆ ಇರೋ ವ್ಯಕ್ತಿ ಮತ್ತೋರ್ವ ಸ್ವಾಮೀಜಿ.  ಮತ್ತೊಂದು ಮಠದ ಸ್ವಾಮೀಜಿ ತಂತ್ರಕ್ಕೆ ಬಲಿಯಾದೇ ಎಂದು ಡೆತ್​​​ನೋಟ್​ ನಲ್ಲಿ ಉಲ್ಲೇಖಿಸಲಾಗಿದೆಯಂತೆ.

ಸಾಯುವ ಮುನ್ನ ಸ್ವಾಮೀಜಿ ಮೂರು ಪುಟಗಳ ಡೆತ್‌ ನೋಟ್ ಬರೆದಿದ್ದು, ನನ್ನ ಮಠವನ್ನು ಕಿತ್ತುಕೊಳ್ಳಬೇಕು, ನಾನು ಅವರ ಕಂಟ್ರೋಲ್​​ನಲ್ಲಿರಬೇಕು, ಇದೇ ಕಾರಣಕ್ಕೆ ಮಠಕ್ಕೆ ಆ ಸ್ವಾಮೀಜಿ ಓರ್ವ ಯುವತಿಯನ್ನು ಬಿಟ್ಟಿದ್ರು, ಆ ಯುವತಿಯ ಸಲುಗೆಗೆ ಮರುಳಾಗಿ ನಾನು ಹೆಣ್ಣಿನ ಮೋಹಕ್ಕೆ ಬಿದ್ದಿದ್ದೆ. ಇದನ್ನು ವಿಡಿಯೋ ಮಾಡಿ ಪ್ರತಿದಿನ ಚಿತ್ರಹಿಂಸೆ ನೀಡ್ತಾ ಇದ್ರು, ಈ ಬಲೆ ಹೆಣೆದಿದ್ದು ನನಗೆ ಬೇಕಾದ ಮತ್ತೊಂದು ಮಠದ ಸ್ವಾಮೀಜಿ, ಆತನ ಗಾಳಕ್ಕೆ ಬಲಿಯಾದೆ ಎಂದು  ಬಸವಲಿಂಗಶ್ರೀ ಡೆತ್​​ನೋಟ್​ ಬರೆದಿದ್ದಾರೆ.  ಸದ್ಯ ಡೆತ್​​ನೋಟ್​, ಸ್ವಾಮೀಜಿಯ ಎರಡು ಮೊಬೈಲ್  ಸೀಜ್ ಮಾಡಲಾಗಿದ್ದು,  ಕುದೂರು ಪೊಲೀಸರು FSL ಪರೀಕ್ಷೆಗೆ ಕಳಿಸಿದ್ದಾರೆ ಎನ್ನಲಾಗಿದೆ.
Post a Comment

Previous Post Next Post