ಮಂಡ್ಯ ವ್ಯಕ್ತಿಗೆ ಬಲವಂತವಾಗಿ ಇಸ್ಲಾಂಗೆ ಮತಾಂತರ: ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಸೇರಿ ಐವರ ಬಂಧನ; ಗೋಮಾಂಸ ತಿನ್ನುವಂತೆ ಒತ್ತಡ!

 26 ವರ್ಷದ ದಲಿತ ವ್ಯಕ್ತಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿದ ಆರೋಪದ ಮೇಲೆ 55 ವರ್ಷದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಸೇರಿದಂತೆ ಐವರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

              ಸಾಂದರ್ಭಿಕ ಚಿತ್ರ

By : Rekha.M
Online Desk

ಬೆಂಗಳೂರು: 26 ವರ್ಷದ ದಲಿತ ವ್ಯಕ್ತಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿದ ಆರೋಪದ ಮೇಲೆ 55 ವರ್ಷದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಸೇರಿದಂತೆ ಐವರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರಿನವರಾದ ಶ್ರೀಧರ್ ಗಂಗಾಧರ್ ಎಂದು ಸಂತ್ರಸ್ತೆಯನ್ನು ಗುರುತಿಸಲಾಗಿದ್ದು, ಆರೋಪಿಗಳು ಒತ್ತಾಯಿಸಿ ಇಸ್ಲಾಂಗೆ ಮತಾಂತರಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಹುಬ್ಬಳ್ಳಿಯ ನವನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಸೆ.9ರಂದು 12 ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಇತ್ತೀಚೆಗೆ ಬನಶಂಕರಿ ಠಾಣೆಗೆ ವರ್ಗಾಯಿಸಲಾಗಿತ್ತು.

ಬನಶಂಕರಿ ವಾರ್ಡ್‌ನ ಮಾಜಿ ಕಾರ್ಪೊರೇಟರ್ ಅನ್ಸಾರ್ ಪಾಷಾ ನಗರ ಶಾಸಕರೊಬ್ಬರ ಆಪ್ತರು ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಆಗಿದ್ದ  ಅನ್ಸರ್ ಪಾಷಾ ಕೆಎಸ್ ಲೇಔಟ್ ನಿವಾಸಿಯಾಗಿದ್ದರು. ಈತನ ಸ್ನೇಹಿತ ಬನಶಂಕರಿ ನಿವಾಸಿ ನಯಾಜ್ ಪಾಷಾ ಹಾಗೂ ಕೆಎಸ್ ಲೇಔಟ್ ನಿವಾಸಿ ಹಾಜಿಸಾಬ್ ಅಲಿಯಾಸ್ ಶಮೀಮ್ ಶಾಲಿಕ್, ಮಂಡ್ಯದ ಅತ್ತಾವರ ರೆಹಮಾನ್ ಮತ್ತು ಕೆಎಸ್ ಲೇಔಟ್‌ನ ಶಬ್ಬೀರ್ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ.

ಐವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಸಂಖ್ಯೆ- 1, ರೆಹಮಾನ್ ತನ್ನ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುವ ನೆಪದಲ್ಲಿ ಸಂತ್ರಸ್ತನನ್ನು ಮಸೀದಿಗೆ ಕರೆತಂದನು. ರೆಹಮಾನ್ ಮತ್ತು ಶ್ರೀಧರ್ ಇಬ್ಬರೂ ಕಳೆದ ಎರಡೂವರೆ ವರ್ಷಗಳಿಂದ ಪರಸ್ಪರ ಪರಿಚಯಸ್ಥರಾಗಿದ್ದರು. ಆರೋಪಿ ಸಂಖ್ಯೆ- 3 ನಯಾಜ್ ಪಾಷಾ, ಸಂತ್ರಸ್ತನನ್ನು ಅಕ್ರಮವಾಗಿ ಮಸೀದಿಯಲ್ಲಿ ಇರಿಸಿದ್ದ, ಆರೋಪಿ ಸಂಖ್ಯೆ 2- ಹಾಜಿಸಾಬ್ ಸಂತ್ರಸ್ತನಿಗೆ ಇಸ್ಲಾಂ ಧರ್ಮದ ಬಗ್ಗೆ ಬೋಧಿಸಿದ್ದ, ಈ ಇಬ್ಬರು ಆರೋಪಿಗಳನ್ನು ಬೆಂಬಲಿಸಿದ್ದಕ್ಕಾಗಿ ಮಾಜಿ ಕಾರ್ಪೊರೇಟರ್ ಆರೋಪಿ ಸಂಖ್ಯೆ 5 ಆಗಿ ಬುಕ್ ಮಾಡಲಾಗಿದೆ. ಶಬ್ಬೀರ್ ಖಾನ್ ಗ್ಯಾಂಗ್ ನ ಭಾಗವಾಗಿದ್ದ ಆರೋಪವಿದೆ. ಈ ಪ್ರಕರಣವನ್ನು ಅಕ್ಟೋಬರ್ ಮೊದಲ ವಾರದಲ್ಲಿ ಬನಶಂಕರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.

ನಯಾಜ್ ಪಾಷಾ ಖಬ್ರಿಸ್ತಾನ್ ಮಸೀದಿಯ ಅಧ್ಯಕ್ಷರಾಗಿದ್ದಾರೆ ಮತ್ತು ಹಾಜಿಸಾಬ್ ಮಸೀದಿಯಲ್ಲಿ ಇಮಾಮ್ (ಪಾದ್ರಿ) ಆಗಿದ್ದಾರೆ. ತನ್ನ ಬಯಕೆಗೆ ವಿರುದ್ಧವಾಗಿ ಗೋಮಾಂಸ ತಿನ್ನುವಂತೆ ಒತ್ತಾಯಿಸಲಾಯಿತು. ತನ್ನ ಹೆಸರನ್ನು ಮೊಹಮ್ಮದ್ ಸಲ್ಮಾನ್ ಎಂದು ಬದಲಾಯಿಸಲಾಯಿತು ಎಂದು ಶ್ರೀಧರ್ ಗಂಗಾಧರ್ ಹೇಳಿಕೆ ನೀಡಿದ್ದಾರೆ.

ಆರೋಪಿಗಳು ಬಂದೂಕು ತೋರಿಸಿ ಮತಾಂತರ ಮಾಡಿದ್ದು, ಪಿಸ್ತೂಲ್ ಹಿಡಿದಿರುವ  ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಭಯೋತ್ಪಾದಕ ಎಂದು ಬಿಂಬಿಸುವುದಾಗಿ ಬೆದರಿಕೆ ಹಾಕಿದ್ದಾಗಿ ಆರೋಪಿಸಿದ್ದಾರೆ. ವರ್ಷಕ್ಕೆ ಕನಿಷ್ಠ ಮೂವರು ಹಿಂದೂಗಳನ್ನು ಮತಾಂತರ ಮಾಡುವಂತೆ ಆಗ್ರಹಿಸಿದ್ದು. ತಿರುಪತಿ ಮತ್ತಿತರ ಕಡೆಗಳಲ್ಲಿನ ಮಸೀದಿಗಳಿಗೆ ಕರೆದೊಯ್ದಿದ್ದರು ಎಂದು ತಿಳಿಸಿದ್ದಾರೆ.


Post a Comment

Previous Post Next Post