ಗ್ರೂಪ್ ಸಿ ಹುದ್ದೆ ನೀಡಿ ಮಂಗಳೂರಿನಲ್ಲಿ ಕೆಲಸ ಮಾಡಲು ಅನುಮತಿ: ಸಿಎಂಗೆ ಧನ್ಯವಾದ ಹೇಳಿದ ದಿ.ಪ್ರವೀಣ್ ನೆಟ್ಟಾರು ಪತ್ನಿ

 ದುಷ್ಕರ್ಮಿಗಳಿಂದ ಕಳೆದ ಆಗಸ್ಟ್ ನಲ್ಲಿ ಹತ್ಯೆಗೀಡಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತ ಪ್ರವೀಣ್ ಕುಮಾರ್ ನೆಟ್ಟಾರು (Praveen Kumar Nettar) ಅವರ ಪತ್ನಿ ನೂತನ ಅವರಿಗೆ ಸರ್ಕಾರ ಗ್ರೂಪ್ ಸಿ ಹುದ್ದೆಯ ಗುತ್ತಿಗೆ ಆಧಾರಿತ ನೌಕರಿ ನೀಡಿದ್ದು ಅದಕ್ಕೆ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.

                   ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಪ್ರವೀಣ್ ಕುಮಾರ್ ನೆಟ್ಟಾರು ಪತ್ನಿ ನೂತನ

By : Rekha.M
Online Desk

ಬೆಂಗಳೂರು: ದುಷ್ಕರ್ಮಿಗಳಿಂದ ಕಳೆದ ಆಗಸ್ಟ್ ನಲ್ಲಿ ಹತ್ಯೆಗೀಡಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತ ಪ್ರವೀಣ್ ಕುಮಾರ್ ನೆಟ್ಟಾರು (Praveen Kumar Nettar) ಅವರ ಪತ್ನಿ ನೂತನ ಅವರಿಗೆ ಸರ್ಕಾರ ಗ್ರೂಪ್ ಸಿ ಹುದ್ದೆಯ ಗುತ್ತಿಗೆ ಆಧಾರಿತ ನೌಕರಿ ನೀಡಿದ್ದು ಅದಕ್ಕೆ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.

ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಸರ್ಕಾರದಿಂದ ಗ್ರೂಪ್ ಸಿ ಹುದ್ದೆಗೆ ನೇಮಕಾತಿ ಮಾಡಿದ್ದಕ್ಕಾಗಿ ಹಾಗೂ ಮಂಗಳೂರಿನಲ್ಲೇ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ನೂತನ ಧನ್ಯವಾದ ಸಲ್ಲಿಸಿದ್ದಾರೆ.

ಪ್ರವೀಣ್ ಕುಮಾರ್ ನೆಟ್ಟಾರು ಅವರ ಪತ್ನಿ ನೂತನ ಅವರು ಬಿಜೆಪಿ ರಾಜ್ಯಾದ್ಯಕ್ಷರಾದ ನಳಿನ್ ಕುಮಾರ್ ಕಟೀಲ್ (Nalinkumar Kateel) ಅವರೊಂದಿಗೆ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಸರ್ಕಾರದಿಂದ ಕೆಲಸ ಕೊಡಿಸಿ ಮಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಸಹಕರಿಸಿದಕ್ಕಾಗಿ ಧನ್ಯವಾದ ಸಮರ್ಪಿಸಿದರು.

ಸರ್ಕಾರದಿಂದ ಗ್ರೂಪ್ ಸಿ ಹುದ್ದೆಗೆ ನೇಮಕಾತಿ ಮಾಡಿ ಸಿಎಂ ಕಚೇರಿಯಲ್ಲಿ ಕೆಲಸ ಕೊಡುವುದಾಗಿ ಸಿಎಂ ಹೇಳಿದ್ದರು. ಈ ವೇಳೆ ಮಂಗಳೂರಿನಲ್ಲಿ ಕೆಲಸ ಕೊಡುವಂತೆ ನೂತನ ಹಾಗೂ ಮನೆಯವರು ಕೇಳಿಕೊಂಡಿದ್ದರು. ಇದನ್ನು ಮನಗಂಡು ಬೊಮ್ಮಾಯಿ ಮಂಗಳೂರಿನಲ್ಲೇ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿದ್ದಾರೆ.Post a Comment

Previous Post Next Post